ISRO ಮತ್ತೊಂದು ಮೈಲಿಗಲ್ಲು: ನಭಕ್ಕೆ ಜಿಗಿದ ಭಾರತದ ಕಣ್ಗಾವಲು ಉಪಗ್ರಹ!

ಭಾನುವಾರ ಬೆಳಗ್ಗೆ 5.59ಕ್ಕೆ ಇಸ್ರೋದ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಪಿಎಸ್‌ಎಲ್‌ವಿ -ಸಿ61 ರಾಕೆಟ್ ಹೊತ್ತು ಗಗನಕ್ಕೆ ಜಿಗಿದಿದೆ.
ಪಿಎಸ್‌ಎಲ್‌ವಿ -ಸಿ61 ರಾಕೆಟ್
ಪಿಎಸ್‌ಎಲ್‌ವಿ -ಸಿ61 ರಾಕೆಟ್
Updated on

ಶ್ರೀಹರಿಕೋಟಾ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷದ ಹೊತ್ತಿನಲ್ಲೇ ದೇಶದ ಕಣ್ಣಾವಲು ಸಾಮರ್ಥ್ಯ ಹೆಚ್ಚಿಸುವ ಉಪಗ್ರಹವೊಂದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾನ ಉಡಾವಣೆ ಮಾಡಿದೆ.

ಭಾನುವಾರ ಬೆಳಗ್ಗೆ 5.59ಕ್ಕೆ ಇಸ್ರೋದ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಪಿಎಸ್‌ಎಲ್‌ವಿ -ಸಿ61 ರಾಕೆಟ್ ಹೊತ್ತು ಗಗನಕ್ಕೆ ಜಿಗಿದಿದೆ.

ಕೃಷಿ, ಅರಣ್ಯ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ, ನಗರ ಯೋಜನೆ, ರಾಷ್ಟ್ರೀಯ ಭದ್ರತೆ ಸೇರಿದಂತೆ ದೇಶದ ಕಣ್ಣಾವಲು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಿರುವ ಈ ಉಪಗ್ರಹ, ರಾತ್ರಿ ಹೊತ್ತಿ ನಲ್ಲೂ ಭೂಮಿಯ ಮೇಲಿನ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಬಲ್ಲದಾಗಿದೆ. ಉಡ್ಡಯನದ 17 ನಿಮಿಷ ಗಳಲ್ಲಿ ಇಸ್ರೋದ ಈ 101ನೇ ಉಪಗ್ರಹ 500 ಕಿ.ಮೀ ಎತ್ತರದ ಕಕ್ಷೆ ಸೇರಲಿದೆ.

ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಈ ಉಪಗ್ರಹವು ವಿಶೇಷ ಪಾತ್ರವಹಿಸಿದ್ದು, ಭೂಮಿಯ ಮೇಲ್ಮನ ಹೆಚ್ಚಿನ ರೆಸಲ್ಯೂಶನ್ ಚಿತ್ರ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಉಪಗ್ರಹವು ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚ‌ರ್ ಡಾರ್‌ಹೊಂದಿದ್ದು, ಎಲ್ಲಾ ಹವಾಮಾನದಲ್ಲೂ ಮತ್ತು ಕಡಿಮೆ ಬೆಳಕಿನಲ್ಲಿ ಭೂಪ್ರದೇಶದ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿದುಕೊಡುತ್ತದೆ. ಗಡಿಗಳಲ್ಲಿ ಶತ್ರುಗಳ ಚಲನವಲನ ಸೇರಿದಂತೆ ಭದ್ರತಾ ಪರಿಶೀಲನೆಗೆ ನೆರವಾಗಲಿದೆ.

ದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 10 ಉಪಗ್ರಹಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರವು ತನ್ನ 7,000 ಕಿ.ಮೀ. ಸಮುದ್ರ ತೀರ ಪ್ರದೇಶ ಗಳುಮತ್ತು ಸಂಪೂರ್ಣ ಉತ್ತರಭಾಗವನ್ನು ಮೇಲ್ವಿಚಾರಣೆ ಮಾಡಬೇಕು. ಉಪಗ್ರಹ ಮತ್ತು ಡೋನ್ ತಂತ್ರಜ್ಞಾನವಿಲ್ಲದೆ, ದೇಶವು ಅದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ತಿಳಿಸಿದ್ದಾರೆ.

ಪಿಎಸ್‌ಎಲ್‌ವಿ -ಸಿ61 ರಾಕೆಟ್
ನಾಳೆ ಬೆಳಗ್ಗೆ ಇಸ್ರೋದ 101ನೇ ಉಪಗ್ರಹ ಉಡಾವಣೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com