ಪ್ರಧಾನಿ ಮೋದಿ ಸ್ವಾಗತಿಸಲು ಪಾಟ್ನಾದಲ್ಲಿ ಆಪರೇಷನ್ ಸಿಂಧೂರ್, ಬ್ರಹ್ಮೋಸ್ ಪೋಸ್ಟರ್‌!

ಇದೇ ವೇಳೆ 1,410 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಬಿಹ್ತಾ ವಿಮಾನ ನಿಲ್ದಾಣದ ಹೊಸ ನಾಗರಿಕ ಎನ್‌ಕ್ಲೇವ್‌ಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Operation Sindoor
ಆಪರೇಷನ್ ಸಿಂಧೂರ್
Updated on: 

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಿಂದ ಎರಡು ದಿನ ಬಿಹಾರಗೆ ಭೇಟಿ ನೀಡುತ್ತಿದ್ದು, ಅವರನ್ನು ಸ್ವಾಗತಿಸಲು ಪಾಟ್ನಾದಲ್ಲಿ ಆಪರೇಷನ್ ಸಿಂಧೂರ್, ಬ್ರಹ್ಮೋಸ್ ನ ನೂರಾರು ಪೋಸ್ಟರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ಹಾಕಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಬಾಕಿ ಇದ್ದು, ಪ್ರಧಾನಿ ಮೋದಿ ಅವರು ಇಂದು ಸಂಜೆ 4:45 ರ ಸುಮಾರಿಗೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಅವರು ಹೊಸದಾಗಿ ನಿರ್ಮಿಸಲಾದ ಪ್ರಯಾಣಿಕರ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಬಿಹ್ತಾ ವಿಮಾನ ನಿಲ್ದಾಣದಲ್ಲಿ ಹೊಸ ನಾಗರಿಕ ಎನ್‌ಕ್ಲೇವ್‌ಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.

ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಅನ್ನು ನಿರ್ಮಿಸಲಾಗಿದ್ದು, ವಾರ್ಷಿಕವಾಗಿ ಒಂದು ಕೋಟಿ ಪ್ರಯಾಣಿಕರನ್ನು ನಿರ್ವಹಿಸಬಹುದಾಗಿದೆ.

ಇದೇ ವೇಳೆ 1,410 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಬಿಹ್ತಾ ವಿಮಾನ ನಿಲ್ದಾಣದ ಹೊಸ ನಾಗರಿಕ ಎನ್‌ಕ್ಲೇವ್‌ಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Operation Sindoor
ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳು ಪ್ರಾಕ್ಸಿ ಯುದ್ಧವಲ್ಲ, ಆಪರೇಷನ್ ಸಿಂಧೂರ್ ಗೆ ಪುರಾವೆಗಳಿವೆ: ಪ್ರಧಾನಿ ಮೋದಿ

ನಂತರ, ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಿಂದ ರಾಜ್ಯ ಬಿಜೆಪಿ ಕಚೇರಿ ವರೆಗೆ ರೋಡ್ ಶೋ ನಡೆಸಲಿದ್ದಾರೆ.

ರೋಡ್ ಶೋ ಮಾರ್ಗದುದ್ದಕ್ಕೂ ಪೋಸ್ಟರ್‌ಗಳು ಮತ್ತು ಜಾಹೀರಾತು ಫಲಕಗಳನ್ನು ಹಾಕಲಾಗಿದ್ದು, 'ಆಪರೇಷನ್ ಸಿಂಧೂರ್' ಯಶಸ್ಸಿಗಾಗಿ ಪ್ರಧಾನಿ ಮತ್ತು ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಲಾಗಿದೆ.

ಕಾರ್ಯಾಚರಣೆಯ ಸಮಯದಲ್ಲಿ ಬಳಸಲಾದ ಬ್ರಹ್ಮೋಸ್ ಕ್ಷಿಪಣಿಗಳ ಮಾದರಿಯ ಪೋಸ್ಟರ್ ಗಳನ್ನು ನಗರದ ವಿವಿಧ ಭಾಗಗಳಲ್ಲಿ ಹಾಕಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com