ಸಾರ್ವಜನಿಕವಾಗಿ ನಿನ್ನ ಬೆತ್ತಲೆಗೊಳಿಸುತ್ತೇನೆ: ಮಹಿಳಾ ವೈದ್ಯೆಗೆ ಬೆದರಿಕೆ; ಜಮ್ಮು-ಕಾಶ್ಮೀರದ ಏಕೈಕ AAP ಶಾಸಕನ ವಿರುದ್ಧ FIR

ಜಮ್ಮು ಮತ್ತು ಕಾಶ್ಮೀರದ ಆಮ್ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ವಿರುದ್ಧ ಮಹಿಳಾ ವೈದ್ಯೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಆರೋಪಗಳ ಆಧಾರದ ಮೇಲೆ ಎಎಪಿ ಶಾಸಕನ ವಿರುದ್ಧ FIR ದಾಖಲಾಗಿದೆ.
ಮೆಹ್ರಾಜ್ ಮಲಿಕ್
ಮೆಹ್ರಾಜ್ ಮಲಿಕ್
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆಮ್ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ವಿರುದ್ಧ ಮಹಿಳಾ ವೈದ್ಯೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಆರೋಪಗಳ ಆಧಾರದ ಮೇಲೆ ಎಎಪಿ ಶಾಸಕನ ವಿರುದ್ಧ FIR ದಾಖಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಅಶ್ಲೀಲ ನಿಂದನೆಗಳನ್ನು ಮಾಡಲಾಗುತ್ತಿದ್ದು ಆಸ್ಪತ್ರೆಯಲ್ಲಿ ಗದ್ದಲವೂ ಸೃಷ್ಟಿಯಾಗಿದೆ ಎಂದು ಮಹಿಳಾ ವೈದ್ಯೆ ಎಎಪಿ ಶಾಸಕನ ವಿರುದ್ಧ ಆರೋಪಿಸಿದ್ದಾರೆ.

ಎಎಪಿ ಶಾಸಕ ಮೆಹ್ರಾಜ್ ಮಲಿಕ್ ದೋಡಾದಲ್ಲಿನ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಟೀಕಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿಯೂ ಈ ವಿಷಯವನ್ನು ಎತ್ತಿದ್ದರು. ಈ ಬಗ್ಗೆ ಸ್ಪಷ್ಟೀಕರಣಕ್ಕೆಂದು ಕರೆ ಮಾಡಿದಾಗ ಶಾಸಕರ ಮೊಬೈಲ್ ಸ್ವಿಚ್ ಆಪ್ ಆಗಿರುವುದು ತಿಳಿದುಬಂದಿದೆ. ತಮ್ಮ ದೂರಿನಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಮಹಿಳಾ ವೈದ್ಯೆ ಹೇಳಿದ್ದಾರೆ. ಹಲವು ಸಂದರ್ಭಗಳಲ್ಲಿ ನಾನು ನಿಮ್ಮನ್ನು ಎಳೆದುಕೊಂಡು ಹೋಗುತ್ತೇನೆ, ನಿಮ್ಮನ್ನು ಬೆತ್ತಲೆಯಾಗಿಸುತ್ತೇನೆ ಎಂದು ಹೇಳಲಾಗಿದೆ. ಇವು ಕೇವಲ ಪದಗಳಲ್ಲ, ಮಹಿಳಾ ವೈದ್ಯೆಯಾಗಿ ನನ್ನ ಗುರುತಿನ ಮೇಲಿನ ದಾಳಿ, ನನ್ನ ಸುರಕ್ಷತೆಗೂ ದೊಡ್ಡ ಬೆದರಿಕೆ ಇದೆ. ಶಾಸಕರು ನಿರಂತರವಾಗಿ ಕಳ್ಳ, ದಲ್ಲಾಳಿ ಮತ್ತು ಕೊಲೆಗಾರ ಮುಂತಾದ ಪದಗಳನ್ನು ಬಳಸುತ್ತಿದ್ದಾರೆ ಎಂಬ ಅಂಶವನ್ನು ಪೊಲೀಸರು ಗಮನಿಸಬೇಕು ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆಸ್ಪತ್ರೆ ನಿಮ್ಮ ತಂದೆಗೆ ಸೇರಿಲ್ಲ ಎಂದು ಶಾಸಕರು ಹೇಳುತ್ತಿರುವುದು ಹೆಚ್ಚು ನೋವಿನ ಸಂಗತಿ. ಇದು ಶಾಸಕರ ದುರಹಂಕಾರವನ್ನು ಮಾತ್ರವಲ್ಲದೆ ನನ್ನ ತಂದೆ 12 ವರ್ಷಗಳ ಹಿಂದೆ ನಿಧನರಾದ ಕಾರಣ ಸಂವೇದನಾಶೀಲತೆಯ ಕೊರತೆಯನ್ನೂ ತೋರಿಸುತ್ತದೆ.

ಮಹಿಳಾ ವೈದ್ಯೆಯ ಪ್ರಕಾರ, ಮಲಿಕ್ ಆಸ್ಪತ್ರೆಗೆ ಹಲವು ಬಾರಿ ಬಂದಿದ್ದರು. ಅಲ್ಲಿಯೂ ಅವರು ಬೆದರಿಕೆ ಹಾಕಿದ್ದರು. ಎಎಪಿ ಶಾಸಕರು ಹೆರಿಗೆ ಕೋಣೆ ಸೂಕ್ಷ್ಮ ಮತ್ತು ನಿರ್ಬಂಧಿತ ಪ್ರದೇಶವಾಗಿದ್ದರೂ ಅದರೊಳಗೆ ಬಲವಂತವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಪ್ ಶಾಸಕರ ಈ ರೀತಿಯ ವರ್ತನೆಯಿಂದಾಗಿ, ವೈದ್ಯಕೀಯ ಕಾಲೇಜಿನ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ರೋಗಿಗಳು ಸಹ ಅಸಮಾಧಾನಗೊಂಡಿದ್ದಾರೆ. ಎಎಪಿ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಈ ಆರೋಪಗಳ ಬಗ್ಗೆ ಎಎಪಿ ಶಾಸಕ ಮೆಹ್ರಾಜ್ ಮಲಿಕ್ ಇಲ್ಲಿಯವರೆಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ, ಆದರೆ ಅವರ ಹಳೆಯ ದಾಖಲೆಯು ಈ ಆಸ್ಪತ್ರೆಯ ವಿರುದ್ಧ ಹಲವು ಸಂದರ್ಭಗಳಲ್ಲಿ ರಾಜಕೀಯ ಯುದ್ಧವನ್ನು ನಡೆಸಿದ್ದಾರೆ ಎಂದು ತೋರಿಸುತ್ತದೆ.

ಮೆಹ್ರಾಜ್ ಮಲಿಕ್
ಭಾರತ-ಪಾಕ್ ಯುದ್ಧ ತಡೆದಿದ್ದೇ ನಾವು: ಟ್ರಂಪ್ ಪುನರುಚ್ಛಾರ; ಪ್ರಧಾನಿ ಮೋದಿ ಮೌನ ಮುರಿಯುವುದೆಂದು?

ಮೆಹ್ರಾಜ್ ಮಲಿಕ್ ಯಾರು?

ಅಂದಹಾಗೆ, ಕಳೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆಯಿತು. ಆಮ್ ಆದ್ಮಿ ಪಕ್ಷದ ಮೆಹ್ರಾಜ್ ಮಲಿಕ್ ಬಿಜೆಪಿ ಅಭ್ಯರ್ಥಿಯನ್ನು 4538 ಮತಗಳ ಅಂತರದಿಂದ ಸೋಲಿಸಿದರು. ಮೆಹ್ರಾಜ್ ಮಲಿಕ್ 23228 ಮತಗಳನ್ನು ಪಡೆದರೆ, ಗಜಯ್ ಸಿಂಗ್ ರಾಣಾ 18690 ಮತಗಳನ್ನು ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com