ಮಿತಿ ಮೀರುತ್ತಿದ್ದೀರಾ? ಒಕ್ಕೂಟ ವ್ಯವಸ್ಥೆಯ ಕಥೆಯೇನು?: ತಮಿಳುನಾಡು ಕೇಸ್ ನಲ್ಲಿ ED ವಿರುದ್ಧ 'ಸುಪ್ರೀಂ' ಗರಂ; ಕೋರ್ಟ್ ಚಾಟಿಗೆ ತನಿಖಾ ಸಂಸ್ಥೆ ಬೇಸ್ತು!

ಮಾರ್ಚ್‌ನಲ್ಲಿ ನಡೆಸಿದ ಎರಡು ದಾಳಿಗಳು, ಅಪರಾಧಕ್ಕೆ ಕಾರಣವಾಗುವ ವಸ್ತುಗಳ ಪತ್ತೆ ಕುರಿತು 6 ತಿಂಗಳಲ್ಲಿ ಎರಡನೇ ಬಾರಿಗೆ ನ್ಯಾಯಾಲಯ ತನಿಖಾ ಸಂಸ್ಥೆಯನ್ನು ಪ್ರಶ್ನಿಸಿದೆ ಮತ್ತು ಸ್ವತಃ ವಿವರಣೆ ನೀಡಲು ಕೇಳಿದೆ.
ED- Supreme Court
ಜಾರಿ ನಿರ್ದೇಶನಾಲಯ- ಸುಪ್ರೀಂ ಕೋರ್ಟ್ online desk
Updated on

ನವದೆಹಲಿ: TASMAC ಅಥವಾ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ ನ್ನು ಒಳಗೊಂಡ ಮದ್ಯ ಹಗರಣದ ತನಿಖೆಯ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ಗಂಭೀರ ಪ್ರಶ್ನೆಯೊಂದನ್ನು ಕೇಳಿದೆ.

ಮಾರ್ಚ್‌ನಲ್ಲಿ ನಡೆಸಿದ ಎರಡು ದಾಳಿಗಳು, ಅಪರಾಧಕ್ಕೆ ಕಾರಣವಾಗುವ ವಸ್ತುಗಳ ಪತ್ತೆ ಕುರಿತು 6 ತಿಂಗಳಲ್ಲಿ ಎರಡನೇ ಬಾರಿಗೆ ನ್ಯಾಯಾಲಯ ತನಿಖಾ ಸಂಸ್ಥೆಯನ್ನು ಪ್ರಶ್ನಿಸಿದೆ ಮತ್ತು ಸ್ವತಃ ವಿವರಣೆ ನೀಡುವಂತೆ ಕೇಳಿದೆ.

"ಒಕ್ಕೂಟ ವ್ಯವಸ್ಥೆಯ ಕಥೆಯೇನು? ನೀವು ರಾಜ್ಯ ಸರ್ಕಾರದ ತನಿಖೆ ಮಾಡುವ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲವೇ?" ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಕೇಂದ್ರ ಸಂಸ್ಥೆಯನ್ನು ಪ್ರಶ್ನಿಸಿದೆ. 'ರಾಜ್ಯವು ಅಪರಾಧದ ತನಿಖೆ ನಡೆಸುತ್ತಿಲ್ಲವೇ', ನಿಮಗೆ ಸಂದೇಹ ಬಂದಾಗಲೆಲ್ಲಾ, ನೀವೇ ಹೋಗಿ ಅದನ್ನು ಮಾಡಬಹುದೇ?" ಎಂದು ಕೋರ್ಟ್ ಕೇಳಿದೆ.

"ಕಳೆದ ಆರು ವರ್ಷಗಳಲ್ಲಿ, ನಾನು ED ತನಿಖೆ ಮಾಡಿದ ಅನೇಕ ಪ್ರಕರಣಗಳನ್ನು ನೋಡಿದ್ದೇನೆ ... ಆದರೆ ಈಗ ನಾನು ಏನನ್ನೂ ಹೇಳಲು ಬಯಸುವುದಿಲ್ಲ, ಇಲ್ಲದಿದ್ದರೆ ಅದನ್ನು (ಮಾಧ್ಯಮದಿಂದ) ಮತ್ತೆ ವರದಿ ಮಾಡಲಾಗುತ್ತದೆ." ಎಂದು ಸಿಜೆಐ ಹೇಳಿದ್ದಾರೆ.

ಇಂದಿನ ವಿಚಾರಣೆಯಲ್ಲಿ, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟ್ಗಿ ಅವರು ತಮಿಳುನಾಡು ಸರ್ಕಾರದ ಪರವಾಗಿ ವಾದ ಮಂಡಿಸಿ, ಆಪಾದಿತ ಅಪರಾಧಗಳ ತನಿಖೆಗಾಗಿ ಪೊಲೀಸ್ ಪ್ರಕರಣಗಳನ್ನು ದಾಖಲಿಸಿದ್ದರೂ, ಸರ್ಕಾರಿ ಸ್ವಾಮ್ಯದ ಕಂಪನಿಯ ಮೇಲೆ ದಾಳಿ ಮಾಡಿ ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಹೇಗೆ ವಶಪಡಿಸಿಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.

"ನಾವು ಈಗಾಗಲೇ ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ, ಆದರೆ ಅವರು (ED) ಏಕೆ ಮಧ್ಯೆ ಬರುತ್ತಿದ್ದಾರೆ?" ಎಂದು ಸಿಬಲ್ ವಾದಿಸಿದರು, ರೋಹಟ್ಗಿ "ಟ್ಯಾಸ್ಮ್ಯಾಕ್ ಸಿಬ್ಬಂದಿಯ ಗೌಪ್ಯತೆಯ ಹಕ್ಕಿಗೆ ಏನಾಗುತ್ತದೆ... ಅವರು ಸಿಬ್ಬಂದಿಯ ಮೊಬೈಲ್‌ಗಳನ್ನು ಹೇಗೆ ವಶಕ್ಕೆ ಪಡೆಯಬಹುದು? ಮಹಿಳಾ ಉದ್ಯೋಗಿಗಳನ್ನು ತಡೆಹಿಡಿಯಲಾಗಿದೆ..." ಎಂದು ಕೇಳಿದ್ದಾರೆ.

ED- Supreme Court
ಆನ್‌ಲೈನ್ ಬೆಟ್ಟಿಂಗ್ ಹಗರಣದಲ್ಲಿ ED ಯಿಂದ ಶಾಸಕ ವೀರೇಂದ್ರ ಪಪ್ಪಿ ತನಿಖೆ: ಲಾಕರ್ ನಲ್ಲಿ ಪತ್ತೆಯಾಗಿದ್ದು 40 ಕೆ.ಜಿ ಚಿನ್ನ!

ಇದಕ್ಕೆ ತನಿಖಾ ಸಂಸ್ಥೆಯ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಪ್ರತಿವಾದ ಮಂಡಿಸಿದ್ದು, ರಾಜ್ಯ ಈಗಾಗಲೇ 47 ಪೊಲೀಸ್ ಪ್ರಕರಣಗಳನ್ನು ದಾಖಲಿಸಿದ್ದರ ಹೊರತಾಗಿಯೂ, 'ಅತಿಯಾದ ಭ್ರಷ್ಟಾಚಾರ' ಮುಂದುವರಿದರೆ, ED ತನಿಖೆ ನಡೆಸಬಹುದು ಎಂದು ಹೇಳಿದರು.

"47 ಪೊಲೀಸ್ ಪ್ರಕರಣಗಳಿವೆ... ದೊಡ್ಡ ಪ್ರಮಾಣದ ಅಕ್ರಮಗಳು, ದೊಡ್ಡ ಪ್ರಮಾಣದ ಭ್ರಷ್ಟಾಚಾರವಿದೆ. ನಾವು ಹಣ ವರ್ಗಾವಣೆ ಅಂಶವನ್ನು ಮಾತ್ರ ತನಿಖೆ ಮಾಡುತ್ತಿದ್ದೇವೆ. ಇವೆಲ್ಲವೂ ಪೂರ್ವಭಾವಿ ಅಪರಾಧಗಳು." ಎಂದು ಕೋರ್ಟ್ ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹೇಳಿದ್ದಾರೆ.

ಸಿಬಲ್ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 66(2) ಅನ್ನು ಉಲ್ಲೇಖಿಸಿದ್ದು, ಆ ಸೆಕ್ಷನ್ "ತನಿಖೆಯ ಸಮಯದಲ್ಲಿ ಮತ್ತೊಂದು ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ಪುರಾವೆಗಳನ್ನು ಸಂಸ್ಥೆ ಕಂಡುಕೊಂಡರೆ, ಮುಂದಿನ ಕ್ರಮಕ್ಕಾಗಿ ಆ ಮಾಹಿತಿಯನ್ನು ಸಂಬಂಧಿತ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲು ಬಾಧ್ಯತೆ ಹೊಂದಿದೆ ಎಂದು ಹೇಳುತ್ತದೆ" ಎಂದಿದ್ದಾರೆ.

ED- Supreme Court
RSS ಚುಟುವಟಿಕೆಗೆ ನಿರ್ಬಂಧ: ತಮಿಳುನಾಡು ನೀತಿ ಅಧ್ಯಯನಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಈ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಕೂಡ ರಾಜು ಅವರನ್ನು ಪ್ರಶ್ನಿಸಿದ್ದು, "ಒಕ್ಕೂಟ ವ್ಯವಸ್ಥೆ ರಚನೆಗೆ ಏನಾಗುತ್ತದೆ? 66(2) ರ ಕಥೆ ಏನು?" ಎಂದು ಕೇಳಿದರು ಇದಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್, "ನಾವು ಅಪರಾಧ ಸಾಬೀತಾದ ಪುರಾವೆಗಳನ್ನು ಕಂಡುಕೊಂಡಿದ್ದೇವೆ. ಎಫ್‌ಐಆರ್‌ಗಳ ಸ್ವರೂಪವನ್ನು ನೋಡಿ, ಭ್ರಷ್ಟಾಚಾರ ಎಷ್ಟು ವ್ಯಾಪಕವಾಗಿದೆ ಎಂದು ನೋಡಿ" ಎಂದು ಕೋರ್ಟ್ ಗಮನ ಸೆಳೆದರು.

"ಹಾಗಾದರೆ ಅವರು ಅದನ್ನು ನಮಗೆ ನೀಡಬೇಕು... ನೀವು ಫೋನ್‌ಗಳನ್ನು, ವಿವರವಾದ ಚಾಟ್‌ಗಳನ್ನು ತೆಗೆದುಕೊಳ್ಳಿ..." ಎಂದು ಸಿಬಲ್ ಹೇಳಿದರು. ಕಳೆದ ವಿಚಾರಣೆಯಲ್ಲೂ, ಮೇ ತಿಂಗಳಲ್ಲಿ, ಉನ್ನತ ನ್ಯಾಯಾಲಯವು ಇಡಿಗೆ ಕಠಿಣ ಪ್ರಶ್ನೆಗಳನ್ನು ಕೇಳಿತ್ತು.

"ನೀವು ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಬಹುದು ಆದರೆ ನಿಗಮಗಳ ವಿರುದ್ಧ? ಹೇಗೆ ದಾಖಲಿಸಲು ಸಾಧ್ಯ? ED ಎಲ್ಲಾ ಮಿತಿಗಳನ್ನು ಮೀರುತ್ತಿವೆ! ನೋಟಿಸ್ ನೀಡಿ, ರಜೆಯ ನಂತರ ವಿಚಾರಣೆ ಮುಂದುವರೆಯಲಿದೆ" ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ED ಗೆ ಹೇಳಿದ್ದು, ತನಿಖೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸಂಸ್ಥೆಗೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com