ರಿಷಿಕೇಶದ ಪವಿತ್ರ ಗಂಗಾ ನದಿ ದಡದ ಬಳಿ ಡ್ರಿಂಕ್ಸ್ : ತಡೆಯಲು ಹೋದ ಪೊಲೀಸರೊಂದಿಗೆ ಮಹಿಳೆಯ ರಂಪಾಟ! Video ವೈರಲ್

ಮಾತಿನ ಚಕಮಕಿ ವೇಳೆ "ತುಮ್ಹಾರಿ ರೋಜಿ ರೋಟಿ ಹಮ್ಸೆ ಚಲ್ತಿ ಹೈ" ( ನಮ್ಮಿಂದ ನಿಮ್ಮ ಬದುಕು ನಡೆಯುತ್ತಿರೋದು) ಎಂದು ಮಹಿಳೆ ಹೇಳುವುದು ವಿಡಿಯೋದಲ್ಲಿದೆ.
The argument escalated until the woman
ಪೊಲೀಸರೊಂದಿಗೆ ರಂಪಾಟ ನಡೆಸುತ್ತಿರುವ ಮಹಿಳೆಯ ಚಿತ್ರ
Updated on

ರಿಷಿಕೇಶ: ಉತ್ತರಾಖಂಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ರಿಷಿಕೇಶದ ಪವಿತ್ರ ಗಂಗಾ ನದಿಯ ದಡದ ಬಳಿ ಡ್ರಿಂಕ್ಸ್ ಮಾಡುವುದನ್ನು ತಡೆದ ಬಳಿಕ ಹರಿಯಾಣದ ಮಹಿಳಾ ಪ್ರವಾಸಿ ಮತ್ತು ಸ್ಥಳೀಯ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಹಿಳೆ ಗಂಗಾ ನದಿಯ ಸಮೀಪವಿರುವ ಪವಿತ್ರ ಪ್ರದೇಶದಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಅದನ್ನು ತಡೆಯಲು ಬಂದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕೂಗಾಡುವ ಮೂಲಕ ರಂಪಾಟ ನಡೆಸಿದ್ದಾರೆ. ಏಪ್ರಿಲ್ 6 ರಂದು ನೀಲಕಂಠ ಮಾರ್ಗದ ಫೂಲ್ ಚಟ್ಟಿ ಪ್ರದೇಶದ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಮಾತಿನ ಚಕಮಕಿ ವೇಳೆ "ತುಮ್ಹಾರಿ ರೋಜಿ ರೋಟಿ ಹಮ್ಸೆ ಚಲ್ತಿ ಹೈ" ( ನಮ್ಮಿಂದ ನಿಮ್ಮ ಬದುಕು ನಡೆಯುತ್ತಿರೋದು) ಎಂದು ಮಹಿಳೆ ಹೇಳುವುದು ವಿಡಿಯೋದಲ್ಲಿದೆ.

ಪ್ರವಾಸಿಯಾಗಿ ಬಂದಿದ್ದು, ತನ್ನ ಸ್ವಂತ ಹಣದಿಂದ ಕುಡಿಯುತ್ತಿದೆ. ಅನ್ಯಾಯಯುತವಾಗಿ ಪ್ರವಾಸಿಗರನ್ನು ಸುಖಾ ಸುಮ್ಮನೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಕೆ ಬೈದಾಡಿದ್ದಾಳೆ. ಬಳಿಕ ಮಹಿಳೆಯ ಪತಿ ಮಧ್ಯಪ್ರವೇಶಿಸಿ ಆಕೆಯನ್ನು ಅಲ್ಲಿಂದ ಕರೆದೊಯ್ದಿದ್ದಾರೆ. ಅಲ್ಲಿಯವರೆಗೂ ಮಹಿಳೆ ಪೊಲೀಸರೊಂದಿಗೆ ರಂಪಾಟ ಮಾಡಿದ್ದಾರೆ.

ರಿಷಿಕೇಶ ಪ್ರಸಿದ್ಧ ಆಧ್ಯಾತ್ಮಿಕ ತಾಣವಾಗಿದ್ದು, ಪವಿತ್ರ ನದಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಅನೇಕ ಪ್ರದೇಶಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ ಆಗಾಗ್ಗೆ ಇಂತಹ ಘಟನೆಗಳು ನಡೆಯುವುದರೊಂದಿಗೆ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ.

The argument escalated until the woman
ಗಂಗಾ ನದಿಯಲ್ಲಿ ಇಫ್ತಾರ್ ಕೂಟ: ಚಿಕನ್ ಬಿರಿಯಾನಿ ಸೇವನೆ; 14 ಆರೋಪಿಗಳಿಗೆ ಜಾಮೀನು ನಿರಾಕರಣೆ!

ನೆಟ್ಟಿಗರೊಬ್ಬರು ಮಹಿಳೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೇಡಂ, ನಿಮ್ಮ ಹಣ ಸ್ವಾಗತಾರ್ಹ, ಆದರೆ ಗಂಗಾ ನಿಮ್ಮ ವೈಯಕ್ತಿಕ ಬಾರ್ ಸ್ಟೂಲ್ ಅಲ್ಲ. ಶಾಂತಿ ಮತ್ತು ಆಧ್ಯಾತ್ಮಿಕತೆಗಾಗಿ ಬನ್ನಿ, ಪವಿತ್ರ ನದಿ ದಂಡೆಯನ್ನು ಪಾರ್ಟಿ ಸ್ಥಳವನ್ನಾಗಿಸಲು ಬರಬೇಡಿ. ಈ ಪವಿತ್ರ ತಾಣವನ್ನು ಗೌರವಿಸಿ ಇಲ್ಲದಿದ್ದರೆ ಮನೆಯಲ್ಲಿಯೇ ಇರಿ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com