ನಟ ವಿಜಯ್ ರೋಡ್ ಶೋ ವೇಳೆ ಮತ್ತೊಂದು ದುರಂತ: Selfie ತೆಗೆದುಕೊಳ್ಳುವ ವೇಳೆ ಬೈಕ್ ಸ್ಕಿಡ್, ಅಪಘಾತ! Video

ಶುಕ್ರವಾರ ತಮಿಳುನಾಡಿನ ಶಿವಗಂಗಾದಲ್ಲಿ ನಡೆದ ರೋಡ್ ಶೋ ವೇಳೆ ಮೋಟಾರ್ ಸೈಕಲ್‌ನಲ್ಲಿದ್ದ ಯುವಕನೊಬ್ಬ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
Bike-Borne Man Skids Taking Selfie With TVK Chief Vijay in Tamil Nadu
ನಟ ವಿಜಯ್ ರೋಡ್ ಶೋ ವೇಳೆ ಅಪಘಾತ
Updated on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ನಿಮಿತ್ತ ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದರ ನಡುವೆಯೇ ಅಲ್ಲಲ್ಲಿ ಸಣ್ಣಪುಟ್ಟ ದುರಂತಗಳು ಸಂಭವಿಸುತ್ತಲೇ ಇವೆ.

ತಮಿಳಗಾ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಮತ್ತು ನಟ-ರಾಜಕಾರಣಿ ವಿಜಯ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮತ್ತೊಂದು ದುರಂತ ಸಂಭವಿಸಿದ್ದು, ಶುಕ್ರವಾರ ತಮಿಳುನಾಡಿನ ಶಿವಗಂಗಾದಲ್ಲಿ ನಡೆದ ರೋಡ್ ಶೋ ವೇಳೆ ಮೋಟಾರ್ ಸೈಕಲ್‌ನಲ್ಲಿದ್ದ ಯುವಕನೊಬ್ಬ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಈ ಹಿಂದೆಯೂ ಕೂಡ ತೂತುಕುಡಿಯಲ್ಲಿ ವಿಜಯ್ ರೋಡ್ ಶೋ ನಡೆಸುತ್ತಿದ್ದ ವೇಳೆ ಅವರ ಹಿಂದೆಯೇ ನೂರಾರು ಯುವಕರು ಬೈಕ್ ಗಳಲ್ಲಿ ಹಿಂಬಾಲಿಸುತ್ತಿದ್ದಾಗ ಒಂದು ಬೈಕ್ ನಿಯಂತ್ರಣ ತಪ್ಪಿ ಬಿದ್ದಿತ್ತು. ಈ ವೇಳೆ ಅದರ ಹಿಂದೆ ಬರುತ್ತಿದ್ದ ಹಲವು ಬೈಕ್ ಗಳು ಕೂಡ ಅಪಘಾತಕ್ಕೀಡಾಗಿದ್ದವು. ಇದೀಗ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

ಶಿವಗಂಗಾ ಹೆದ್ದಾರಿಯಲ್ಲಿ ನಟ ವಿಜಯ್ ಅವರ ವಾಹನಗಳು ತೆರಳುತ್ತಿದ್ದಾಗ ಕೆಲ ಯುವಕರ ಗುಂಪು ತಮ್ಮ ಬೈಕ್ ಗಳಲ್ಲಿ ಅವರನ್ನು ಹಿಂಬಾಲಿಸಿದ್ದು, ಈ ವೇಳೆ ಓರ್ವ ಯುವಕ ಚಲಿಸುತ್ತಿದ್ದ ಬೈಕ್ ನಿಂದಲೇ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದೆ. ಈ ಅಪಘಾತದಲ್ಲಿ ಚಾಲಕನಿಗೆ ಗಂಭೀರ ಪೆಟ್ಟಾಗಿದೆ ಎಂದು ಹೇಳಲಾಗಿದೆ.

Bike-Borne Man Skids Taking Selfie With TVK Chief Vijay in Tamil Nadu
ಆಗ ಮಂಡ್ಯ, ಈಗ ತಮಿಳುನಾಡು: 3 ವಿಜಯ್, 2 ಜೊಸೆಫ್..; ಒಂದೇ ಹೆಸರಿನ ಅಭ್ಯರ್ಥಿಗಳ ನಾಮಪತ್ರ; ನಟ Vijay ಹಣಿಯಲು ಏನೆಲ್ಲಾ ಕಸರತ್ತು!

ವಿಡಿಯೋ ವೈರಲ್

ಇನ್ನು ನಟ ವಿಜಯ್ ಪ್ರಚಾರ ಕಾರ್ಯವನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಅವರ ತಂಡ ವಿಡಿಯೋ ಚಿತ್ರೀಕರಿಸುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಅಲ್ಲದೆ ಇದು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಅಂತೆಯೇ ಈ ವಿಡಿಯೋ ಜನಸಂದಣಿಯ ನಿರ್ವಹಣೆಯ ಬಗ್ಗೆ ಹೊಸ ಕಳವಳವನ್ನು ಹುಟ್ಟುಹಾಕಿದೆ.

ಕರೂರ್ ಕಾಲ್ತುಳಿತ

ಇನ್ನು ನಟ ವಿಜಯ್ ಅವರ ಪ್ರಚಾರ ಕಾರ್ಯಕ್ರಮಗಳಲ್ಲಿ ಅಪಘಾತ ಇದೇ ಮೊದಲೇನಲ್ಲ.. ಈ ಹಿಂದೆ ಅಂದರೆ ಕಳೆದ ವರ್ಷ ಕರೂರಿನಲ್ಲೂ ಇದಕ್ಕಿಂತಲೂ ದೊಡ್ಡದಾದ ಕಾಲ್ತುಳಿತ ದುರಂತ ಸಂಭವಿಸಿತ್ತು. ಸೆಪ್ಟೆಂಬರ್‌ನಲ್ಲಿ, ಕರೂರ್ ಜಿಲ್ಲೆಯಲ್ಲಿ ವಿಜಯ್ ಅವರ ರ್ಯಾಲಿಯೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 41 ಜನರು ಪ್ರಾಣ ಕಳೆದುಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com