Women's Reservation Bill: ಮಹಿಳೆಯರ ಕೋಪ ತಟ್ಟದೇ ಬಿಡಲ್ಲ..; ವಿಪಕ್ಷಗಳ ವಿರುದ್ಧ Amit Shah ಕೆಂಡಾಮಂಡಲ!

ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆಯನ್ನು ತಿರಸ್ಕರಿಸುವುದು, ಅದನ್ನು ಆಚರಿಸುವುದು ಮತ್ತು ಅದರ ಮೇಲೆ ವಿಜಯೋತ್ಸವ ಕೂಗುವುದು ನಿಜಕ್ಕೂ ಖಂಡನೀಯ..
Amit Shah warns Congress allies
ಕೇಂದ್ರ ಸಚಿವ ಅಮಿತ್ ಶಾ
Updated on

ನವದೆಹಲಿ: ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ತಿರಸ್ಕರಿಸುವುದು, ಅದನ್ನು ಸಂಭ್ರಮಿಸಿ, ವಿಜಯೋತ್ಸವ ಕೂಗುವುದು ನಿಜಕ್ಕೂ ಖಂಡನೀಯ ಮತ್ತು ಕಲ್ಪನೆಗೂ ಮೀರಿದ ಕೃತ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ಮಹಿಳಾ ಮೀಸಲಾತಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆಯನ್ನು ತಿರಸ್ಕರಿಸುವುದು, ಅದನ್ನು ಆಚರಿಸುವುದು ಮತ್ತು ಅದರ ಮೇಲೆ ವಿಜಯೋತ್ಸವ ಕೂಗುವುದು ನಿಜಕ್ಕೂ ಖಂಡನೀಯ' ಎಂದು ಹೇಳಿದ್ದಾರೆ.

"ಇಂದು, ಲೋಕಸಭೆಯಲ್ಲಿ ಬಹಳ ವಿಚಿತ್ರ ದೃಶ್ಯವೊಂದು ಬಯಲಾಯಿತು. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ನಾರಿ ಶಕ್ತಿ ವಂದನ ಆಡಳಿತಕ್ಕಾಗಿ ಅಗತ್ಯವಾದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡಲಿಲ್ಲ. ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆಯನ್ನು ತಿರಸ್ಕರಿಸುವುದು, ಅದನ್ನು ಆಚರಿಸುವುದು ಮತ್ತು ಅದರ ಮೇಲೆ ವಿಜಯೋತ್ಸವ ಕೂಗುವುದು ನಿಜಕ್ಕೂ ಖಂಡನೀಯ ಮತ್ತು ಕಲ್ಪನೆಗೂ ಮೀರಿದ ಸಂಗತಿ ಎಂದಿದ್ದಾರೆ.

Amit Shah warns Congress allies
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು; ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ NDA ವಿಫಲ

ಅಂತೆಯೇ 'ಈಗ, ದೇಶದ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33% ಮೀಸಲಾತಿ ಸಿಗುವುದಿಲ್ಲ, ಅದು ಅವರ ಹಕ್ಕಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದನ್ನು ಮೊದಲ ಬಾರಿಗೆ ಅಲ್ಲ, ಪದೇ ಪದೇ ಮಾಡಿವೆ. ಅವರ ಮನಸ್ಥಿತಿ ಮಹಿಳೆಯರ ಹಿತಾಸಕ್ತಿಗಾಗಿ ಅಥವಾ ದೇಶದ ಹಿತಾಸಕ್ತಿಗಾಗಿ ಅಲ್ಲ. ನಾರಿ ಶಕ್ತಿಗೆ ಈ ಅವಮಾನ ಇಲ್ಲಿಗೆ ನಿಲ್ಲುವುದಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ ಎಂದರು.

ಅಲ್ಲದೆ ಅದು ಬಹಳ ದೂರ ಪ್ರಯಾಣಿಸುತ್ತದೆ. ವಿರೋಧ ಪಕ್ಷವು 2029 ರ ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ, ಪ್ರತಿಯೊಂದು ಹಂತದಲ್ಲೂ, ಪ್ರತಿ ಚುನಾವಣೆಯಲ್ಲೂ ಮತ್ತು ಪ್ರತಿಯೊಂದು ಸ್ಥಳದಲ್ಲೂ 'ಮಹಿಳೆಯರ ಕೋಪ'ವನ್ನು ಎದುರಿಸಬೇಕಾಗುತ್ತದೆ." ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ; ಮಹಿಳಾ ಮೀಸಲಾತಿ ಮಸೂದೆ ಸೋಲು

ಇನ್ನು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದು, 2026ರ ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು.

ಆದರೆ 489 ಮತಗಳಲ್ಲಿ 278 ಮತಗಳು ಮಸೂದೆಯ ಪರವಾಗಿ ಚಲಾವಣೆಯಾಗಿದ್ದರೆ 211 ಮತಗಳು ವಿರುದ್ಧವಾಗಿ ಚಲಾವಣೆಯಾದವು. ಮಹಿಳಾ ಮೀಸಲಾತಿ ಮಸೂದೆಯು ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ 2/3 ಮೆಜಾರಿಟಿ ಪಡೆಯುವಲ್ಲಿ ಎನ್.ಡಿ.ಎ ಸರ್ಕಾರ ವಿಫಲವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com