ಜೆಜೆಡಿ ನಾಯಕ ತೇಜ್ ಪ್ರತಾಪ್ ಯಾದವ್-ಪ್ರಶಾಂತ್ ಕಿಶೋರ್ ಭೇಟಿ: ಬದಲಾಗುತ್ತಾ ಬಿಹಾರ ರಾಜಕೀಯ ಸಮೀಕರಣ?

ಮಹಿಳೆಯೊಬ್ಬರೊಂದಿಗಿನ ಸಂಬಂಧದ ಆರೋಪದ ಮೇಲೆ ತೇಜ್ ಪ್ರತಾಪ್ ಅವರನ್ನು ಕಳೆದ ವರ್ಷ ಆರ್‌ಜೆಡಿಯಿಂದ ಹೊರಹಾಕಲಾಯಿತು. ನಂತರ, ಅವರು ಹೊಸ ಪಕ್ಷವನ್ನು ಸ್ಥಾಪಿಸಿದರು.
Prashant Kishor - Tej Pratap Yadav
ಪ್ರಶಾಂತ್ ಕಿಶೋರ್ - ತೇಜ್ ಪ್ರತಾಪ್ ಯಾದವ್
Updated on

ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ಮತ್ತು ಜನಶಕ್ತಿ ಜನತಾ ದಳ (ಜೆಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಅವರು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿದ್ದು, ಬಿಹಾರದಲ್ಲಿ ಹೊಸ ರಾಜಕೀಯ ಸಮೀಕರದ ಊಹಾಪೋಹಗಳಿಗೆ ಕಾರಣವಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ರಾಜಕೀಯ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಪಾಟ್ನಾದಲ್ಲಿ ತೇಜ್ ಪ್ರತಾಪ್ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಭೇಟಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ತೇಜ್ ಪ್ರತಾಪ್ ತಮ್ಮ ಎಕ್ಸ್ ಖಾತೆಯಲ್ಲಿ ಸಭೆಯ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

'ರಾಜಕೀಯ ದೃಷ್ಟಿಕೋನದಿಂದ ಇದು ಸಾಕಷ್ಟು ಮಹತ್ವದ ದಿನವಾಗಿತ್ತು. ನಾನು ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾದೆ. ನಾವು ಸಾರ್ವಜನಿಕ ಹಿತಾಸಕ್ತಿ ಮತ್ತು ಭವಿಷ್ಯದ ರಾಜಕೀಯದ ಕುರಿತು ಆಳವಾದ ಚರ್ಚೆಯಲ್ಲಿ ತೊಡಗಿದ್ದೇವೆ. ಜನರ ನಿರೀಕ್ಷೆಗಳು ಮತ್ತು ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ಬಗ್ಗೆ ನಾವು ವ್ಯಾಪಕವಾಗಿ ಮಾತನಾಡಿದ್ದೇವೆ' ಎಂದು ಅವರು ಹೇಳಿದ್ದಾರೆ.

'ಈ ಸಭೆಯು ಕೇವಲ ಔಪಚಾರಿಕ ಸಭೆಯಾಗಿರಲಿಲ್ಲ, ಬದಲಾಗಿ ಮುಂಬರುವ ರಾಜಕೀಯದ ದಿಕ್ಕನ್ನು ರೂಪಿಸಬಹುದಾದ ಹಲವಾರು ವಿಷಯಗಳ ಕುರಿತು ಚರ್ಚೆಗಳನ್ನು ಒಳಗೊಂಡಿತ್ತು. ಸಕಾರಾತ್ಮಕ ಮನಸ್ಥಿತಿ ಮತ್ತು ಸಾರ್ವಜನಿಕ ಸೇವೆಯ ಮನೋಭಾವದೊಂದಿಗೆ ಮುಂದುವರಿಯುವ ನನ್ನ ಸಂಕಲ್ಪ ಬಲಗೊಂಡಿರುವಾಗ ಈ ಸಂವಾದವನ್ನು ನನ್ನ ರಾಜಕೀಯ ಜೀವನದಲ್ಲಿ ಒಂದು ಮಹತ್ವದ ಅನುಭವವೆಂದು ನಾನು ನೋಡುತ್ತೇನೆ' ಎಂದು ಅವರು ಹೇಳಿದರು.

ಮಹಿಳೆಯೊಬ್ಬರೊಂದಿಗಿನ ಸಂಬಂಧದ ಆರೋಪದ ಮೇಲೆ ತೇಜ್ ಪ್ರತಾಪ್ ಅವರನ್ನು ಕಳೆದ ವರ್ಷ ಆರ್‌ಜೆಡಿಯಿಂದ ಹೊರಹಾಕಲಾಯಿತು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಶಿಸ್ತು ಕ್ರಮ ಕೈಗೊಂಡರು. ನಂತರ, ತೇಜ್ ಪ್ರತಾಪ್ ಪಕ್ಷವನ್ನು ಸ್ಥಾಪಿಸಿ 2025ರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು.

ಆದರೆ, ಜೆಜೆಎಸ್ ಒಂದೇ ಒಂದು ಸ್ಥಾನವನ್ನು ಗೆಲ್ಲಲಿಲ್ಲ. ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಸೋಲು ಕಂಡರು. ಈಮಧ್ಯೆ, ಚಿರಾಗ್ ಪಾಸ್ವಾನ್ ಲೋಕ ಜನಶಕ್ತಿ ಪಕ್ಷದ (ಆರ್‌ವಿ) ಅಭ್ಯರ್ಥಿ ಸಂಜಯ್ ಕುಮಾರ್ ಅವರು ಮಹುವಾ ಕ್ಷೇತ್ರದಿಂದ ಸುಮಾರು 44,000 ಮತಗಳ ಅಂತರದಿಂದ ಜಯಗಳಿಸಿದರು.

ಮತ್ತೊಂದೆಡೆ, ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು 243 ಸ್ಥಾನಗಳ ಪೈಕಿ 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ, ಖಾತೆ ತೆರೆಯಲು ವಿಫಲವಾಯಿತು. ಆದಾಗ್ಯೂ, ಚುನಾವಣೆಯಲ್ಲಿ ಜೆಜೆಎಸ್‌ನ ಕಳಪೆ ಪ್ರದರ್ಶನಕ್ಕೆ ಎನ್‌ಡಿಎ 1.5 ಕೋಟಿಗೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ ತಲಾ ₹10,000 ನೀಡುವ ಭರವಸೆ ಕಾರಣ ಎಂದು ದೂಷಿಸಿದರು.

ಎನ್‌ಡಿಎ ಸರ್ಕಾರ 'ಹಿಂಬಾಗಿಲಿನ' ಮೂಲಕ ಮತ್ತೆ ಅಧಿಕಾರಕ್ಕೆ ಬಂದಿದೆ ಎಂದು ಅವರು ಆರೋಪಿಸಿದರು.

Prashant Kishor - Tej Pratap Yadav
ಬಿಹಾರ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅಧಿಕಾರ ಸ್ವೀಕಾರ; Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com