West Bengal Elections: ಟಿಎಂಸಿ ಕಾರ್ಯಕರ್ತರಿಂದ ಏಟು; "ಬಿದ್ದಂಬೀಳ" ಓಡಿದ ಬಿಜೆಪಿ ಅಭ್ಯರ್ಥಿ; Video ವೈರಲ್!

ಬಿಜೆಪಿ ಅಭ್ಯರ್ಥಿಯನ್ನು ತಡೆದು ಥಳಿಸಲಾಗಿದ್ದು, ತದನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.
BJP Candidate Suvendu Sarkar Slapped
ಹಲ್ಲೆಗೊಳಗಾದ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್
Updated on

ಕುಮಾರ್‌ಗಂಜ್: ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರ ಸಮ್ಮುಖದಲ್ಲಿ ಟಿಎಂಸಿ ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಹೀಗಾಗಿ ಕುಮಾರ್‌ಗಂಜ್‌ನಲ್ಲಿ ಮತದಾನದ ಮೇಲೆ ಹಿಂಸಾಚಾರದ ಕರಿನೆರಳು ಆವರಿಸಿತು. ಪ್ರದೇಶದಲ್ಲಿ ಗಲಭೆ ಆಗಿದೆ ಎಂಬ ವರದಿಗಳ ನಂತರ ಸರ್ಕಾರ್ ಮತಗಟ್ಟೆಯತ್ತ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಬಿಜೆಪಿ ಅಭ್ಯರ್ಥಿಯನ್ನು ತಡೆದು ಥಳಿಸಲಾಗಿದ್ದು, ತದನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ದಾಳಿ ನಡೆದಿದೆ ಎಂದು ಪಕ್ಷ ಹೇಳಿಕೊಂಡಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಚುನಾವಣಾ ಆಯೋಗ, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ, ಹಲ್ಲೆಗೆ ಸಂಬಂಧಿಸಿದ ವೀಡಿಯೊ ದೃಶ್ಯಗಳಲ್ಲಿ ಕಂಡುಬರುವ ವ್ಯಕ್ತಿಗಳನ್ನು ಬಂಧಿಸಲು ಆದೇಶಿಸಿದೆ.

ಬಿಜೆಪಿಯ ಮತಗಟ್ಟೆ ಏಜೆಂಟ್ ಅನ್ನು ಟಿಎಂಸಿ ಕಾರ್ಯಕರ್ತರು ಮತಗಟ್ಟೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಇದು ಕ್ಷೇತ್ರದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಆದಾಗ್ಯೂ, ಆಡಳಿತಾರೂಢ ಟಿಎಂಸಿ ಆರೋಪಗಳನ್ನು ನಿರಾಕರಿಸಿದೆ.

BJP Candidate Suvendu Sarkar Slapped
Tamilnadu & West Bengal Election 2026 Live Updates | ಮಧ್ಯಾಹ್ನ 3 ಗಂಟೆ ವೇಳೆಗೆ ತಮಿಳುನಾಡು ಶೇ. 70, ಪಶ್ಚಿಮ ಬಂಗಾಳ ಹಂತ-I ಶೇ.78.77 ಮತದಾನ

ಪಶ್ಚಿಮ ಬಂಗಾಳದ 152 ಕ್ಷೇತ್ರಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಹಲವು ಕಡೆಗಳಲ್ಲಿ ಹಿಂಸಾಚಾರ ಮತ್ತು ಘರ್ಷಣೆಯ ಘಟನೆಗಳು ವರದಿಯಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com