Video: ಮತ್ತೊಂದು ಗ್ಯಾಸ್ ಬಲೂನ್ ದುರಂತ: ಸಿಲಿಂಡರ್ ಸ್ಫೋಟ, 4 ಮಂದಿಗೆ ಗಾಯ, ಸ್ಥಳದಲ್ಲಿ ಆತಂಕ

ಬಲೂನ್ ಮಾರಾಟಗಾರನೊಬ್ಬ ಹೀಲಿಯಂ ಗ್ಯಾಸ್ ಬಳಸಿ ಬಲೂನ್‌ಗಳನ್ನು ತುಂಬುತ್ತಿದ್ದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ಕೆಲವರು ಗಾಯಗೊಂಡಿದೆ.
Cylinder Explosion in Miyapur
ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟ
Updated on

ಹೈದರಾಬಾದ್: ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುತ್ತಿದ್ದ ವೇಳೆ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಹೈದರಾಬಾದ್‌ನ ಮಿಯಾಪುರದಲ್ಲಿರುವ GSM ಮಾಲ್ ಸಮೀಪ ಶನಿವಾರ ಸಂಜೆ ನಡೆದಿದೆ.

ಮಿಯಾಪುರ ಪೊಲೀಸರ ಪ್ರಕಾರ, ಸಂಜೆ ಸುಮಾರು 4.30ರ ವೇಳೆಗೆ ಬಲೂನ್ ಮಾರಾಟಗಾರನೊಬ್ಬ ಹೀಲಿಯಂ ಗ್ಯಾಸ್ ಬಳಸಿ ಬಲೂನ್‌ಗಳನ್ನು ತುಂಬುತ್ತಿದ್ದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ಕೆಲವರು ಗಾಯಗೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸ್ಫೋಟದಲ್ಲಿ 19 ವರ್ಷದ ವಿವೇಕ್ ಪಾಲ್ ಎಂಬ ಐಸ್‌ಕ್ರೀಂ ಮಾರಾಟಗಾರನ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ವೇಳೆ ಸಮೀಪದಲ್ಲಿದ್ದ ಖಾಸಗಿ ಕಂಪನಿಯ ಉದ್ಯೋಗಿ, 16 ವರ್ಷದ ವಿದ್ಯಾರ್ಥಿ ಹಾಗೂ 25 ವರ್ಷದ ಟೆಕ್ಕಿ ಸೇರಿದಂತೆ ಮೂವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Cylinder Explosion in Miyapur
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ: ಆರು ತಿಂಗಳ ಬಳಿಕ ಕೊಲೆಗಾತಿ ಪತ್ನಿ, ಪ್ರಿಯಕರನ ಬಂಧನ!

ಸ್ಫೋಟದಲ್ಲಿ ಬಲೂನ್ ಮಾರಾಟಗಾರನ ಕೈಗೂ ಗಾಯವಾಗಿದ್ದು, ಘಟನೆ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪದಡಿ ಬಲೂನ್ ಮಾರಾಟಗಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಲಿಂಡರ್ ಅನ್ನು ಹೇಗೆ ನಿರ್ವಹಿಸಲಾಗುತ್ತಿತ್ತು ಹಾಗೂ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಿಕೊಂಡು ಬಲೂನ್‌ಗಳನ್ನು ತುಂಬುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಇಂತಹ ಅಪಘಾತಗಳಿಗೆ ಕಾರಣವಾಗಬಹುದು ಎಂಬ ಆತಂಕವೂ ಇದೀಗ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com