Matrimonial Website Scam: ವಿದೇಶಿ ಹೈ ಪ್ರೊಫೈಲ್ ವರನ ನಂಬಿ 10 ಲಕ್ಷ ರೂ. ಕಳೆದುಕೊಂಡ 33 ವರ್ಷದ ಮಹಿಳೆ!

ಬ್ಯಾಂಕಿಂಗ್ ವೃತ್ತಿಪರ ಮಹಿಳೆ ವಂಚನೆಗೊಳಗಾಗಿದ್ದು, ವೈವಾಹಿಕ ವೆಬ್ಸೈಟ್ನಲ್ಲಿ ಪರಿಚಯವಾದ ವಂಚಕನಿಂದ ಬರೊಬ್ಬರಿ 10 ಲಕ್ಷ ರೂ ನೀಡಿ ವಂಚನೆಗೊಳಗಾಗಿದ್ದಾರೆ.
Matrimonial Website Scam
ಮ್ಯಾಟ್ರಿಮೋನಿ ಹಗರಣ
Updated on

ಥಾಣೆ: 33 ವರ್ಷದ ಅವಿವಾಹಿತ ಮಹಿಳೆಯೊಬ್ಬರು ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಯವಾದ ಹೈ ಪ್ರೊಫೈಲ್ ವರನ ಮದುವೆಯಾಗಲು ಹೋಗಿ ಬರೊಬ್ಬರಿ 10 ಲಕ್ಷ ರೂ.ಗಳನ್ನು ಕಳೆದುಕೊಂಡ ಆಘಾತಕಾರಿ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕಿಂಗ್ ವೃತ್ತಿಪರ ಮಹಿಳೆ ವಂಚನೆಗೊಳಗಾಗಿದ್ದು, ವೈವಾಹಿಕ ವೆಬ್ಸೈಟ್ನಲ್ಲಿ ಪರಿಚಯವಾದ ವಂಚಕನಿಂದ ಬರೊಬ್ಬರಿ 10 ಲಕ್ಷ ರೂ ನೀಡಿ ವಂಚನೆಗೊಳಗಾಗಿದ್ದಾರೆ.

ವಂಚಕ ತಾನೋರ್ವ ಬ್ರಿಟನ್ ನಿವಾಸಿಯಾಗಿದ್ದು, ನೆದರ್ಲೆಂಡ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಆತ ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ಹೇಳಿದ್ದು, ತನ್ನ ಕುಟುಂಬಸ್ಥರಿಗೂ ಆಕೆ ಇಷ್ಟವಾಗಿದ್ದಾಳೆ ಎಂದು ನಂಬಿಸಿದ್ದಾನೆ.

ಬಳಿಕ ಇಬ್ಬರೂ ಪರಸ್ಪರ ಚಾಟಿಂಗ್ ಮಾಡಿದ್ದು, ಈ ವೇಳೆ ವಂಚಕ ಚಿನ್ನಾಭರಣಗಳು, ಪೌಂಡ್‌ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಅವಳ ಹುಟ್ಟುಹಬ್ಬಕ್ಕಾಗಿ ಅನೇಕ ಉಡುಗೊರೆಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದಾನೆ.

Matrimonial Website Scam
ಹುಡುಗರು ಒಪ್ತಿಲ್ಲ.. ಮದುವೆ ವಿಳಂಬ, ತಾಯಿ ಅನಾರೋಗ್ಯ: ಹುಸೇನ್ ಸಾಗರ್ ಗೆ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ!

ಪಾರ್ಸೆಲ್ ಆಗಮನದ ಬಗ್ಗೆ ಕೊರಿಯರ್ ಕಂಪನಿಯಿಂದ ಶೀಘ್ರದಲ್ಲೇ ಮಹಿಳೆಗೆ ಇಮೇಲ್ ಬಂದಿತು. ಆದರೆ ಈ ಉಡುಗೊರೆಗಳನ್ನು ಆಕೆ ಸ್ವೀಕರಿಸಲು ಕಸ್ಟಮ್ಸ್ (ತೆರಿಗೆ) ಶುಲ್ಕ ಪಾವತಿ ಮಾಡುವಂತೆ ಒತ್ತಾಯಿಸಿದ್ದಾನೆ. ಆತನ ಮಾತು ನಂಬಿದ ಮಹಿಳೆ ಕೊರಿಯರ್-ಇಮೇಲ್ ನಲ್ಲಿ ಬಂದ ಲಿಂಕ್ ಗೆ ಹಲವು ಬಾರಿ ಸುಮಾರು 10 ಲಕ್ಷ ರೂಗಳಿಗೂ ಹೆಚ್ಚು ಹಣವನ್ನು ಪಾವತಿ ಮಾಡಿದ್ದಾರೆ.

ವಿತರಣಾ ಶುಲ್ಕಗಳು, ಕಸ್ಟಮ್ಸ್ ಶುಲ್ಕಗಳು ಮತ್ತು ಕಾನೂನು ಪ್ರಮಾಣಪತ್ರ ವೆಚ್ಚಗಳಂತಹ ನೆಪಗಳನ್ನು ನೀಡಿ, ವಂಚಕನು ಅವಳನ್ನು ಬಹು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಪ್ರೇರೇಪಿಸಿದ್ದಾನೆ. ಆತನ ಮಾತು ನಂಬಿದ ಮಹಿಳೆ ಎಲ್ಲ ಪಾವತಿಗಳನ್ನು ಮಾಡಿದ್ದು, ಪಾವತಿಗಳ ಹೊರತಾಗಿಯೂ, ಯಾವುದೇ ಪಾರ್ಸೆಲ್ ಬಂದಿರಲ್ಲ.

ಏತನ್ಮಧ್ಯೆ ಡಿಸೆಂಬರ್‌ನಲ್ಲಿ, ವಂಚಕನು ತಾನು ಭಾರತಕ್ಕೆ ಬಂದಿರುವುದಾಗಿ ಹೇಳಿಕೊಂಡನು. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಿಡುಗಡೆಗಾಗಿ ಹಣಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಮತ್ತೆ ಆಕೆಗೆ ಕರೆ ಮಾಡಿದ್ದಾನೆ. ಈ ವೇಳೆ ಆತನ ಮೇಲೆ ಅನುಮಾನಗೊಂಡ ಮಹಿಳೆ ಆನ್ಲೈನ್ ನಲ್ಲಿ ದೂರು ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com