Rahul gandhi
ರಾಹುಲ್ ಗಾಂಧಿ

'ಭಾರತವನ್ನು ಮಾರಾಟ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ?' ಲೋಕಸಭೆಯಲ್ಲಿ ರಾಹುಲ್ ಗಾಂಧಿ ಬೆಂಕಿ ಭಾಷಣ!

ಯುದ್ಧದ ಯುಗ ಮುಗಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಆದರೆ, ನಾವು ಯುದ್ಧದ ಯುಗಕ್ಕೆ ಚಲಿಸುತ್ತಿದ್ದೇವೆ ಅಪಾಯಕಾರಿ ಜಗತ್ತಿಗೆ ಸಾಗುವಾಗ, ನಾವು ನಮ್ಮ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು .
Published on

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿದ್ದ ಮೋದಿ ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.

ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತ- ಅಮೆರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ಅವರು ವಿವರವಾಗಿ ಚರ್ಚಿಸಿದರು. ಒಪ್ಪಂದವು ಸಂಪೂರ್ಣವಾಗಿ ಏಕಪಕ್ಷೀಯವಾಗಿದ್ದು, ಕೇಂದ್ರ ಸರ್ಕಾರ ಭಾರತವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ನಾವು ಸ್ಥಿರತೆಯ ಪ್ರಪಂಚದಿಂದ ಅಸ್ಥಿರತೆಯ ಜಗತ್ತಿಗೆ ಚಲಿಸುತ್ತಿದ್ದೇವೆ, ಯುದ್ಧದ ಯುಗ ಮುಗಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಆದರೆ, ನಾವು ಯುದ್ಧದ ಯುಗಕ್ಕೆ ಚಲಿಸುತ್ತಿದ್ದೇವೆ ಎಂದು ಅವರು ಹೇಳಿದರು. ಅಪಾಯಕಾರಿ ಜಗತ್ತಿಗೆ ಚಲಿಸುವಾಗ, ನಾವು ನಮ್ಮ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

ಇಂಧನ ಮತ್ತು ಹಣಕಾಸು ಶಸ್ತ್ರಾಸ್ತ್ರೀಕರಣಗೊಳ್ಳುತ್ತಿದೆ ಎಂದು ಬಜೆಟ್ ಒಪ್ಪಿಕೊಂಡಿದೆ, ಆದರೆ ಇದನ್ನು ಪರಿಹರಿಸುವ ಯಾವುದೇ ಅಂಶ ಬಜೆಟ್‌ನಲ್ಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ನಮ್ಮ ಜನರು, ಡೇಟಾ, ಆಹಾರ ಸರಬರಾಜು ಮತ್ತು ಇಂಧನ ವ್ಯವಸ್ಥೆಗಳನ್ನು ನಾವು ರಕ್ಷಿಸಬೇಕು ಎಂದು ಅವರು ಹೇಳಿದರು. ಲೋಕಸಭೆಯಲ್ಲಿ ಬಜೆಟ್ ಚರ್ಚೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ, "ನಾವು ಅಪಾಯಕಾರಿ ಪ್ರಪಂಚದತ್ತ ಸಾಗುತ್ತಿದ್ದೇವೆ ಮತ್ತು ನಮ್ಮ ಸಾಮರ್ಥ್ಯಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ದೇಶದ ದೊಡ್ಡ ಶಕ್ತಿ ನಮ್ಮ ಜನರಲ್ಲಿದೆ" ಎಂದು ಹೇಳಿದರು.

Rahul gandhi
ನೀವು ಪೆಂಗ್ವಿನ್ ಸಂಸ್ಥೆಯನ್ನು ನಂಬುತ್ತೀರೋ ಅಥವಾ ನರವಾಣೆ ಅವರನ್ನು ನಂಬುತ್ತೀರೋ?: ವರದಿಗಾರರಿಗೆ ರಾಹುಲ್ ಗಾಂಧಿ ಪ್ರಶ್ನೆ

ಬಿಜೆಪಿಯು ತನ್ನ ಆರ್ಥಿಕ ಸ್ವರೂಪವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಭಾರತೀಯರ ಭವಿಷ್ಯವನ್ನು ಬಲಿಕೊಟ್ಟಿದ್ದಾರೆ ಎಂದು ರಾಹುಲ್ ಆರೋಪಿಸಿದರು.

ಸರ್ಕಾರವು 'ಭಾರತ ಮಾತೆಯನ್ನು' ಮಾರಾಟ ಮಾಡುತ್ತಿದೆ. ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಏಕಪಕ್ಷೀಯ ಎಂದು ಕರೆದರು, ಇದು ರೈತರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತಿದೆ ಎಂದರು. ಅಮೆರಿಕದ ಕೃಷಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗಳಲ್ಲಿ ಪ್ರವಾಹವನ್ನುಂಟುಮಾಡುವುದರಿಂದ ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದರು.

ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ರೈತರು ಭಾರಿ ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ನೀವು ಬಡ ರೈತರನ್ನು ಹತ್ತಿಕ್ಕಲು ಬಾಗಿಲು ತೆರೆದಿದ್ದೀರಿ, ಯಾವುದೇ ಪ್ರಧಾನಿ ಇದನ್ನು ಎಂದಿಗೂ ಮಾಡಿರಲಿಲ್ಲಲ್ಲ" ಎಂದು ರಾಹುಲ್ ಹೇಳಿದರು.

ಭಾರತೀಯ ಜವಳಿ ಉದ್ಯಮವು ಕತೆ ಮುಗಿದಿದೆ ಎಂದು ಅವರು ಆರೋಪಿಸಿದರು. ಇಂಧನ ಭದ್ರತೆಯು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಹೂತು ಹೋಗಿದೆ, ನಾವು ಯಾರಿಂದ ತೈಲವನ್ನು ಖರೀದಿಸುತ್ತೇವೆ ಎಂದು ಯುಎಸ್ ನಿರ್ಧರಿಸುತ್ತದೆ ಎಂದು ಟೀಕಿಸಿದರು. ಇಂಡಿಯಾ ಒಕ್ಕೂಟ ಅಧಿಕಾರದಲ್ಲಿದ್ದಿದ್ದರೆ, ನಾವು ನಮ್ಮ ರೈತರನ್ನು ರಕ್ಷಿಸುತ್ತೇವೆ, ನಮ್ಮ ಇಂಧನವನ್ನು ರಕ್ಷಿಸುತ್ತೇವೆ ಎಂದು ಟ್ರಂಪ್‌ಗೆ " ಹೇಳುತ್ತಿತ್ತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com