ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ: ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆ, ಹಾಡುವಾಗ ಎದ್ದು ನಿಲ್ಲದಿದ್ದರೆ ಶಿಕ್ಷೆ-ದಂಡಕ್ಕೆ ಅರ್ಹ..!

ವಂದೇ ಮಾತರಂ' ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾಷ್ಟ್ರಗೀತೆ 'ಜನ ಗಣ ಮನ' ಹಾಡುವಾಗ ಪಾಲಿಸುವ ಶಿಷ್ಟಾಚಾರಗಳನ್ನು (Protocols) 'ವಂದೇ ಮಾತರಂ'ಗೂ ಕಡ್ಡಾಯಗೊಳಿಸಿದೆ.
file photo
ಸಂಗ್ರಹ ಚಿತ್ರ
Updated on

ನವದೆಹಲಿ: ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ್ದು, ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆಗೊಳಿಸಿದೆ.

ವಂದೇ ಮಾತರಂ' ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾಷ್ಟ್ರಗೀತೆ 'ಜನ ಗಣ ಮನ' ಹಾಡುವಾಗ ಪಾಲಿಸುವ ಶಿಷ್ಟಾಚಾರಗಳನ್ನು (Protocols) 'ವಂದೇ ಮಾತರಂ'ಗೂ ಕಡ್ಡಾಯಗೊಳಿಸಿದೆ.

'ವಂದೇ ಮಾತರಂ' ಗೀತೆ ಪ್ರಸಾರವಾಗುವಾಗ ಅಥವಾ ಹಾಡುವಾಗ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸೂಚಿಸುವುದು ಕಡ್ಡಾಯವಾಗಿದೆ. ಎಲ್ಲಾ ಸರ್ಕಾರಿ ಸಮಾರಂಭಗಳು ಮತ್ತು ಶಾಲೆಗಳಲ್ಲಿ 'ಜನ ಗಣ ಮನ' ಹಾಡಿದ ತಕ್ಷಣವೇ 'ವಂದೇ ಮಾತರಂ' ಗೀತೆಯನ್ನು ಹಾಡಬೇಕೆಂದು ತಿಳಿಸಲಾಗಿದೆ.

ಆದೇಶದ ಪ್ರಕಾರ, ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡಬೇಕು ಎಂದು ಸೂಚನೆ ನೀಡಲಾಗಿದೆ. ಹಾಗೆಯೇ ಗೀತೆಯನ್ನು ನುಡಿಸಿದರೆ ಅಥವಾ ಹಾಡಿದರೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆರು ಚರಣಗಳನ್ನು ವಂದೇ ಮಾತರಂ ಗೀತೆಯ 3.10 ನಿಮಿಷಗಳ ಗೀತೆಯನ್ನು ನುಡಿಸಬೇಕು ಅಥವಾ ಹಾಡಬೇಕು. ಇದರಲ್ಲಿ ತ್ರಿವರ್ಣ ಧ್ವಜ ಹಾರಿಸುವಾಗ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ಸಮಯದಲ್ಲಿ, ಅವರ ಭಾಷಣಗಳು ಮತ್ತು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೊದಲು ಮತ್ತು ನಂತರ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರವೂ ಸೇರಿದೆ.

file photo
ಕಾಂಗ್ರೆಸ್ ಸಂಸದರ ಸಭೆ: ವಂದೇ ಮಾತರಂ, ಚುನಾವಣಾ ಸುಧಾರಣೆಗಳ ವಿಷಯದಲ್ಲಿ ಸರ್ಕಾರ 'ಒತ್ತಡಕ್ಕೊಳಗಾಗಿದೆ'- ರಾಹುಲ್ ಗಾಂಧಿ

ಯಾವುದೇ ಸಾಕ್ಷ್ಯಚಿತ್ರಗಳ ಪ್ರದರ್ಶನಗಳ ಮಧ್ಯೆ ಗೀತೆ ಹಾಡಿದರೆ ಎದ್ದುನಿಲ್ಲುವ ಅಗತ್ಯವಿಲ್ಲ.6 ಚರಣಗಳಿರುವ ವಂದೇ ಮಾತರಂ ಗೀತೆಯನ್ನು ಹಾಡುವುದು ಕಡ್ಡಾಯ ಈ ನಿರ್ದೇಶನವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ನೀಡಲಾಗಿದೆ.

ಇಲ್ಲಿಯವರೆಗೆ, ವಂದೇ ಮಾತರಂ ಹಾಡಲು ಯಾವುದೇ ಅಧಿಕೃತ ಶಿಷ್ಟಾಚಾರವಿರಲಿಲ್ಲ. ಆದರೆ ಜನ ಗಣ ಮನ ಗೀತೆಯು ರಾಗ, ಸಮಯ ಮತ್ತು ಗಾಯನದ ಬಗ್ಗೆ ಸ್ಪಷ್ಟ ನಿಯಮಗಳನ್ನು ಹೊಂದಿತ್ತು. ಹಾಡಿನ ವಿಸ್ತೃತ, ಆರು-ಚರಣಗಳ ಆವೃತ್ತಿಯನ್ನು ಇಲ್ಲಿಯವರೆಗೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಿರಲಿಲ್ಲ, ಆದರೆ ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ.

ಈ ಆದೇಶವು ಕಾರ್ಯಕ್ರಮಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸುತ್ತದೆ. ಮೊದಲ ವರ್ಗವು ನಾಗರಿಕ ಪುರಸ್ಕಾರ ಸಮಾರಂಭಗಳು, ಔಪಚಾರಿಕ ರಾಜ್ಯ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನ, ಅಖಿಲ ಭಾರತ ರೇಡಿಯೋ ಮತ್ತು ದೂರದರ್ಶನದಲ್ಲಿ ರಾಷ್ಟ್ರಪತಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣದ ಮೊದಲು ಮತ್ತು ನಂತರ, ಔಪಚಾರಿಕ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರು ಅಥವಾ ಲೆಫ್ಟಿನೆಂಟ್ ಗವರ್ನರ್ ಆಗಮನ ಮತ್ತು ನಿರ್ಗಮನ ಮತ್ತು ಮೆರವಣಿಗೆಗಳಲ್ಲಿ ರಾಷ್ಟ್ರಧ್ವಜದ ಪ್ರಸ್ತುತಿ ಮುಂತಾದ ರಾಷ್ಟ್ರಗೀತೆಯನ್ನು ಪ್ರತ್ಯೇಕವಾಗಿ ನುಡಿಸುವ ಸಂದರ್ಭಗಳನ್ನು ಒಳಗೊಂಡಿದೆ.

ಎರಡನೇ ವರ್ಗವು ಸಾಮೂಹಿಕ ಗಾಯನದ ಜೊತೆಗೆ ಹಾಡನ್ನು ನುಡಿಸುವ ಘಟನೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು, ಸಾಂಸ್ಕೃತಿಕ ಮತ್ತು ವಿಧ್ಯುಕ್ತ ಕಾರ್ಯಕ್ರಮಗಳು (ಮೆರವಣಿಗೆಗಳನ್ನು ಹೊರತುಪಡಿಸಿ), ಮತ್ತು ಯಾವುದೇ ಸರ್ಕಾರಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನದಂತಹ ಸಂದರ್ಭಗಳು ಸೇರಿವೆ. ಈ ಉದ್ದೇಶಕ್ಕಾಗಿ, ಅಗತ್ಯವಿದ್ದರೆ, ಗಾಯಕ ಗೀತೆ, ಧ್ವನಿ ವ್ಯವಸ್ಥೆ ಮತ್ತು ಹಾಡಿನ ಸಾಹಿತ್ಯ ವಿತರಣೆಯನ್ನು ಸಹ ಶಿಫಾರಸು ಮಾಡಲಾಗಿದೆ.

ಮೂರನೇ ವರ್ಗವು ಶಾಲಾ ಕಾರ್ಯಕ್ರಮಗಳಂತಹ 'ವಂದೇ ಮಾತರಂ' ಹಾಡಬಹುದಾದ ಸಂದರ್ಭಗಳನ್ನು ಒಳಗೊಂಡಿದೆ. ಶಾಲೆಗಳು ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದಿನವನ್ನು ಪ್ರಾರಂಭಿಸಬಹುದು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಚಿಹ್ನೆಗಳಿಗೆ ಗೌರವವನ್ನು ಮೂಡಿಸಲು ಪ್ರಯತ್ನಿಸಬೇಕು ಎಂದು ಆದೇಶವು ಹೇಳುತ್ತದೆ.

file photo
ರಾಷ್ಟ್ರಗೀತೆಯಂತೆಯೇ ವಂದೇ ಮಾತರಂಗೂ ಶಿಷ್ಟಾಚಾರ ಗೌರವ!

ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಸೇರ್ಪಡೆ

ಅತ್ಯಂತ ಗಮನಾರ್ಹ ಬದಲಾವಣೆಯೆಂದರೆ, ಈ ಹಿಂದೆ 1937ರಲ್ಲಿ ಕಾಂಗ್ರೆಸ್ ಪಕ್ಷವು ತೆಗೆದುಹಾಕಿದ್ದ ನಾಲ್ಕು ಚರಣಗಳು ಸೇರಿದಂತೆ ಒಟ್ಟು ಆರೂ ಚರಣಗಳನ್ನು ಈಗ ನುಡಿಸಲು ನಿರ್ಧರಿಸಲಾಗಿದೆ. ಇದು ಮಹತ್ವದ ಬದಲಾವಣೆಯಾಗಿದೆ.

ಶಾಲೆಗಳಲ್ಲೂ ವಂದೇ ಮಾತರಂ ಹಾಡಲು ಸೂಚನೆ

ಎಲ್ಲಾ ಶಾಲೆಗಳು ತಮ್ಮ ದಿನವನ್ನು ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಪ್ರಾರಂಭಿಸಲಾಗುತ್ತದೆ. ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಇನ್ನು ಮುಂದೆ ಅದರ ಜತೆ ವಂದೇ ಮಾತರಂ ಕೂಡ ಹಾಡಬೇಕಿದೆ.

ಚಿತ್ರಮಂದಿರಗಳಿಗೆ ವಿನಾಯಿತಿ

ಸಿನಿಮಾ ಮಂದಿರಗಳಲ್ಲಿ 'ವಂದೇ ಮಾತರಂ' ನುಡಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹಾಡುವಾಗ ಎದ್ದುನಿಲ್ಲದಿದ್ದರೆ ಶಿಕ್ಷೆಗೆ ಅರ್ಹ

ʻರಾಷ್ಟ್ರದ ಗೌರವಕ್ಕೆ ಅಪಮಾನ ತಡೆʼ ಕಾಯ್ದೆ ಅಡಿಯಲ್ಲಿ ರಾಷ್ಟ್ರಗೀತೆಗೆ (ಮತ್ತು ಈಗ ರಾಷ್ಟ್ರೀಯ ಗೀತೆ) ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನ ತಡೆಯುವ ಯಾವುದೇ ವ್ಯಕ್ತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡಕ್ಕೆ ಅರ್ಹರಾಗಿರುತ್ತಾರೆ.

ದೇಶಭಕ್ತಿ ಗೀತೆಯಾಗಿರುವ ವಂದೇ ಮಾತರಂ ಗೀತೆಯನ್ನು ಬಂಕಿಮ್‌ ಚಂದ್ರ ಅವರು 1875 ರಲ್ಲಿ ರಚಿಸಿದ್ದು, ಇದರ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಬ್ರಿಟಿಷ್‌ ಆಡಳಿತಗಾರರು ಪ್ರತಿ ಸಮಾರಂಭದಲ್ಲಿ ಇಂಗ್ಲೆಂಡ್‌ ರಾಣಿಗೆ ಗೌರವ ಸಲ್ಲಿಸುವ ಸೇವ್‌ ದಿ ಕ್ವೀನ್‌‍ ಎಂಬ ಹಾಡನ್ನು ಹಾಡುವುದನ್ನು ಕಡ್ಡಾಯಗೊಳಿಸಿದ್ದರು.

ಇದು ಬಂಕಿಮ್‌ ಚಂದ್ರ ಸೇರಿದಂತೆ ಅನೇಕ ದೇಶವಾಸಿಗಳನ್ನು ಕೆರಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು 1874 ರಲ್ಲಿ ವಂದೇ ಮಾತರಂ ಎಂಬ ಹಾಡನ್ನು ರಚಿಸಿದರು. ಈ ಹಾಡಿನ ಪ್ರಮುಖ ವಿಷಯವೆಂದರೆ ಭಾರತದ ಭೂಮಿಯನ್ನು ತಾಯಿ ಎಂದು ಸಂಬೋಧಿಸುವುದು.

ಈ ಹಾಡನ್ನು ನಂತರ ಅವರ 1882 ರ ಕಾದಂಬರಿ ಆನಂದಮಠದಲ್ಲಿ ಸೇರಿಸಲಾಯಿತು. ಐತಿಹಾಸಿಕ ಮತ್ತು ಸಾಮಾಜಿಕ ರಚನೆಗಳಿಂದ ಹೆಣೆಯಲಾದ ಈ ಕಾದಂಬರಿಯು ದೇಶದಲ್ಲಿ ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸಲು ಗಮನಾರ್ಹವಾಗಿ ಕೊಡುಗೆ ನೀಡಿತು.

ವಂದೇ ಮಾತರಂ ಅನ್ನು ಮೊದಲ ಬಾರಿಗೆ ಹಾಡಿದ್ದು 1896 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‍ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಲ್ಪಾವಧಿಯಲ್ಲಿಯೇ, ದೇಶಭಕ್ತಿಯ ಸಂಕೇತವಾದ ಈ ಹಾಡು ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಭಾರತೀಯ ಕ್ರಾಂತಿಕಾರಿಗಳ ನೆಚ್ಚಿನ ಹಾಡು ಮತ್ತು ಮುಖ್ಯ ಘೋಷಣೆಯಾಯಿತು. ದೇಶಾದ್ಯಂತ, ಕ್ರಾಂತಿಕಾರಿ ಮಕ್ಕಳು, ಯುವಕರು, ವಯಸ್ಕರು ಮಾತ್ರವಲ್ಲದೆ, ಭಾರತೀಯ ಮಹಿಳೆಯರು ಸಹ ಸ್ವಾತಂತ್ರ್ಯ ಹೋರಾಟದ ಅದೇ ಘೋಷಣೆಯನ್ನು ಪ್ರತಿಧ್ವನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com