ಆಜಾದ್ ನಗರ: ಕಚ್ಚಾ ಬಾಂಬ್ ತಯಾರಿಕೆ ವೇಳೆ ಸ್ಫೋಟ, 4 ಮಂದಿಗೆ ಗಾಯ, ರೌಡಿ ಶೀಟರ್ ಸಾವು.. Video

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಸುಂದರಪಾದ ಪ್ರದೇಶದ ಅಜಾದ್ ನಗರದ ಮನೆಯೊಂದರ ತಾರಸಿಯಲ್ಲಿ ಬಾಂಬ್ ತಯಾರಿಕೆ ವೇಳೆ ಆಕಸ್ಮಿಕವಾಗಿ ಭಾರಿ ಬಾಂಬ್ ಸ್ಫೋಟವಾಗಿದೆ.
Explosion during raw bomb making
ಬಾಂಬ್ ತಯಾರಿಕೆ ವೇಳೆ ಸ್ಫೋಟ
Updated on

ಭುವನೇಶ್ವರ: ಕಚ್ಚಾ ಬಾಂಬ್ ತಯಾರಿಕೆ ವೇಳೆ ಆಕಸ್ಮಿಕ ಸ್ಫೋಟಗೊಂಡ ಪರಿಣಾಮ ರೌಡಿ ಶೀಟರ್ ಶಹನವಾಜ್ ಮಲಿಕ್ (26) ಸೇರಿ 4 ಮಂದಿ ಗಾಯಗೊಂಡ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಸುಂದರಪಾದ ಪ್ರದೇಶದ ಅಜಾದ್ ನಗರದ ಮನೆಯೊಂದರ ತಾರಸಿಯಲ್ಲಿ ಬಾಂಬ್ ತಯಾರಿಕೆ ವೇಳೆ ಆಕಸ್ಮಿಕವಾಗಿ ಭಾರಿ ಬಾಂಬ್ ಸ್ಫೋಟವಾಗಿದೆ. ಕಚ್ಚಾ ಬಾಂಬ್‌ಗಳನ್ನು ಜೋಡಿಸುತ್ತಿದ್ದ ಮನೆಯೊಳಗೆ ಸ್ಫೋಟ ಸಂಭವಿಸಿದೆ.

ಈ ವೇಳೆ ತಾರಸಿಯಲ್ಲಿದ್ದ ರೌಡಿ ಶೀಟರ್ ಶಹನವಾಜ್ ಮಲಿಕ್ ಸೇರಿದಂತೆ ಆತನ 4 ಕುಟುಂಬಸ್ಥರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಹನವಾಜ್ ಅವರ ತಾಯಿ ಲಿಜಾತುನ್ ಬೀಬಿ (51), ಅವರ ನಿಶ್ಚಿತಾರ್ಥದ ಪತ್ನಿ ತೃಪ್ತಿಮಯೀ ಮಹಲ್ (23) ಮತ್ತು ಸ್ನೇಹಿತ ಅಮಿಯಾ ರಂಜನ್ ಮಲ್ಲಿಕ್ (27) ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡರು.

ಮೂಲಗಳ ಪ್ರಕಾರ ಜನವರಿ 27ರಂದು ಈ ಘಟನೆ ನಡೆದಿದ್ದು, ಸ್ಫೋಟದ ಸಿಸಿಟಿವಿ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ರೌಡಿ ಶೀಟರ್ ಶಾನವಾಜ್ ನವಾಬ್ ಮನೆಯ ತಾರಸಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Explosion during raw bomb making
184 ಕಿ.ಮೀ ಕನ್ವರ್ ಯಾತ್ರೆ: ಬುರ್ಕಾ ಧರಿಸ್ತೀನಿ.. ಆದರೆ ಬೋಲೆನಾಥ್ ಅಜ್ಞಾನ ಕಳೆಯುತ್ತಾರೆ; ಶಿವನಿಗೆ ಜಲಾಭಿಷೇಕ ಮಾಡಿದ ತಮನ್ನಾ, Video!

NIA ಎಂಟ್ರಿ

ಇನ್ನು ಈ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಮಾಹಿತಿ ನೀಡಿದ್ದು, ವಿಚಾರ ತಿಳಿದ ಕೂಡಲೇ ದೌಡಾಯಿಸಿದ ಎನ್ಐಎ ತಂಡವು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ವೀಡಿಯೊವನ್ನು ಒಂದೊಂದಾಗಿ ಪರಿಶೀಲಿಸುತ್ತಿದೆ.

ಮಲಿಕ್ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು, ಇತರರೊಂದಿಗೆ ಬಾಂಬ್‌ಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಹನವಾಜ್ ಮಲಿಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದು, ಲಿಜಾತುನ್ ಬೀಬಿ ಕೂಡ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ತೃಪ್ತಿಮಯೀ ಮತ್ತು ಅಮಿಯಾ ರಂಜನ್ ಇನ್ನೂ ಆಸ್ಪತ್ರೆಯಲ್ಲಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಸ್ಫೋಟದಲ್ಲಿ ರೌಡಿ ಶೀಟರ್ ಕೂಡ ಗಾಯಗೊಂಡಿದ್ದಾನೆ. ಅಂತೆಯೇ ಮೂವರು ಹೆಂಗಸರು ಕೂಡ ಇದ್ದರು ಅವರಿಗೂ ಗಾಯಗಳಾಗಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಕಚ್ಚಾ ಬಾಂಬ್ ತಯಾರಿಸಲು ಕಾರಣವೇನು ಅದನ್ನು ಎಲ್ಲಿಗೆ ಸರಬರಾಜು ಮಾಡುತ್ತಿದ್ದ ಎಂದು ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸಾಕ್ಷ್ಯಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ಘಟನಾ ಸ್ಥಳಕ್ಕೆ ವೈಜ್ಞಾನಿಕ ತಂಡವನ್ನು ಕಳುಹಿಸಲಾಗಿದೆ. ಅಕ್ರಮ ಬಾಂಬ್ ತಯಾರಿಕೆಯಲ್ಲಿ ಇತರರು ಭಾಗಿಯಾಗಿದ್ದರೆ, ಅವರ ಬಗ್ಗೆ ಮಾಹಿತಿ ಪಡೆಯಲು ಗಾಯಾಳುಗಳು ಚೇತರಿಸಿಕೊಂಡ ನಂತರ ಅವರನ್ನು ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com