ಬಿಹಾರ ವಿಧಾನಸಭೆಯಲ್ಲಿ 'ಖೈನಿ' ಸೇವಿಸಿದರೇ ಡಿಸಿಎಂ ಸಮ್ರಾಟ್ ಚೌಧರಿ? Viral Video

ವಿಡಿಯೊ ಕ್ಲಿಪ್‌ನಲ್ಲಿ ಸಮ್ರಾಟ್ ಚೌಧರಿ ಅವರು ತಮ್ಮ ಕೈಯಲ್ಲಿ ಒಂದು ಪದಾರ್ಥವನ್ನು ಒರೆಸಿ, ನಂತರ ಅದನ್ನು ಬಾಯಿಗೆ ಹಾಕಿಕೊಳ್ಳುತ್ತಿರುವುದು ಕಾಣಿಸುತ್ತದೆ.
Bihar Dy CM Samrat Choudhary
ವಿಧಾನಸಭೆಯಲ್ಲಿ ಸಮ್ರಾಟ್ ಚೌಧರಿ
Updated on

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ನಡೆದ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಹಾರ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಮ್ರಾಟ್ ಚೌಧರಿ ಅವರು ಸದನ ನಡೆಯುತ್ತಿರುವಾಗ ಯಾವುದೋ ವಸ್ತುವನ್ನು ಬಾಯೊಳಗೆ ಹಾಕಿಕೊಳ್ಳುತ್ತಿರುವಂತೆ ಕಾಣುತ್ತದೆ.

ವಿಡಿಯೊ ಕ್ಲಿಪ್‌ನಲ್ಲಿ ಸಮ್ರಾಟ್ ಚೌಧರಿ ಅವರು ತಮ್ಮ ಕೈಯಲ್ಲಿ ಒಂದು ಪದಾರ್ಥವನ್ನು ಒರೆಸಿ, ನಂತರ ಅದನ್ನು ಬಾಯಿಗೆ ಹಾಕಿಕೊಳ್ಳುತ್ತಿರುವುದು ಕಾಣಿಸುತ್ತದೆ. ವಿರೋಧ ಪಕ್ಷದ ನಾಯಕರು, ವಿಧಾನಸಭೆಯೊಳಗೆ ಸಮ್ರಾಟ್ ಚೌಧರಿ ‘ಖೈನಿ’ (ತುಪಾಕನ್ನು ಮಿಶ್ರಣ ಮಾಡಿ ಬಾಯಲ್ಲಿ ಇಟ್ಟುಕೊಳ್ಳುವುದು) ಸೇವಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (RJD) ಈ ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಚೌಧರಿ ವಿರುದ್ಧ ಟೀಕೆ ಮಾಡಿದೆ. “80 ಚುಟ್ಕಿ 90 ತಾಳ್, ರಗಡ್ಕೆ ಮೂಹ್ ಮೇ ದಾಲ್” ಎಂಬ ಶೀರ್ಷಿಕೆಯೊಂದಿಗೆ, “ಸದನದಲ್ಲಿ ಖೈನಿ ತಿನ್ನುವ ನಿಂಜಾ ತಂತ್ರ!” ಎಂದು ವ್ಯಂಗ್ಯವಾಡಿದೆ.

ಈ ವಿಡಿಯೋ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಕೆಲವರು ವಿಧಾನಸಭೆ ಪ್ರಜಾಪ್ರಭುತ್ವದ ದೇವಾಲಯವಾಗಿರುವುದರಿಂದ, ಇದು ಸತ್ಯವಾಗಿದ್ದರೆ ಶಿಸ್ತಿನ ಉಲ್ಲಂಘನೆ ಎಂದು ಟೀಕಿಸಿದರು. ಇನ್ನೂ ಕೆಲವರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದರು.

ಇನ್ನೊಂದೆಡೆ, ಉಪ ಮುಖ್ಯಮಂತ್ರಿಯವರ ಬೆಂಬಲಿಗರು, ಚೌಧರಿಯವರು ತುಪಾಕು ಸೇವಿಸಿರದೇ ಇರಬಹುದು; ಬದಲಾಗಿ ಮೌತ್ ಫ್ರೆಶ್ನರ್ ಅಥವಾ ಏಲಕ್ಕಿ ತೆಗೆದುಕೊಂಡಿರಬಹುದು ಎಂದು ವಾದಿಸಿದ್ದಾರೆ. ಈ ವೈರಲ್ ವಿಡಿಯೋ ಕುರಿತು ಸಮ್ರಾಟ್ ಚೌಧರಿ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com