ತಮಿಳುನಾಡಿನಲ್ಲಿ SIR: ಅಂತಿಮ ಪಟ್ಟಿ ಬಿಡುಗಡೆ; 74 ಲಕ್ಷ ಮತದಾರರ ಹೆಸರು ಡಿಲೀಟ್

SIR ಅವಧಿಯ ನಂತರ ಡಿಸೆಂಬರ್ 19 ರಂದು ಕರಡು ಪಟ್ಟಿಯನ್ನು ಪ್ರಕಟಿಸಿದಾಗ, 97.34 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
After SIR, TN voter count drops to 5.67 crore; around 74 lakh names removed from pre-revision list
Updated on

ಚೆನ್ನೈ: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ನಂತರ, ಒಟ್ಟು ಮತದಾರರ ಸಂಖ್ಯೆ 5.67 ಕೋಟಿಗೆ ಇಳಿದಿದೆ. ಇದು ಅಕ್ಟೋಬರ್ 27, 2025 ರಂದು ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಒಟ್ಟು 6.41 ಕೋಟಿ ಮತದಾರಿದ್ದರು. ಹೊಸ ಪಟ್ಟಿಯಿಂದ ಸುಮಾರು 74 ಲಕ್ಷ ಮತದಾರರ ಹೆಸರು ತೆಗೆದು ಹಾಕಲಾಗಿದೆ.

SIR ಅವಧಿಯ ನಂತರ ಡಿಸೆಂಬರ್ 19 ರಂದು ಕರಡು ಪಟ್ಟಿಯನ್ನು ಪ್ರಕಟಿಸಿದಾಗ, 97.34 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.

ಇಂದು ರಾಜ್ಯ ಸಚಿವಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್, ಜನವರಿ 30, 2026 ರಂದು ಹಕ್ಕು ಮತ್ತು ಆಕ್ಷೇಪಣೆಗಳ ಅವಧಿ ಮುಗಿದ ನಂತರ, 27.53 ಲಕ್ಷ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸಲಾಗಿದೆ ಮತ್ತು 4.23 ಲಕ್ಷ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದರು.

After SIR, TN voter count drops to 5.67 crore; around 74 lakh names removed from pre-revision list
ಕೇರಳ SIR ಅಂತಿಮ ಪಟ್ಟಿ ಬಿಡುಗಡೆ: ಸುಮಾರು 9 ಲಕ್ಷ ಮತದಾರರ ಹೆಸರು ಡಿಲೀಟ್

ಸುಮಾರು 2,000 ಹೆಸರುಗಳನ್ನು ಹೊರತುಪಡಿಸಿ, 'ಮ್ಯಾಪಿಂಗ್ ಸಮಸ್ಯೆಯಿಂದ' ನೋಟಿಸ್ ನೀಡಲಾಗಿದ್ದ ಸುಮಾರು 13 ಲಕ್ಷ ಮತದಾರರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪಟ್ನಾಯಕ್ ಹೇಳಿದರು.

ಒಟ್ಟು 5.67 ಕೋಟಿ ಮತದಾರರಲ್ಲಿ, 2.77 ಕೋಟಿ ಪುರುಷರು ಮತ್ತು 2.89 ಕೋಟಿ ಮಹಿಳೆಯರು, 18-19 ವರ್ಷ ವಯಸ್ಸಿನ 12.51 ಲಕ್ಷ ಮತದಾರರಿದ್ದಾರೆ. ಪಟ್ಟಿಯಲ್ಲಿ 4.63 ಲಕ್ಷ ಅಂಗವಿಕಲ ಮತದಾರರು ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 3.99 ಲಕ್ಷ ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕ್ಷೇತ್ರಗಳ ಪೈಕಿ, ಶೋಲಿಂಗನಲ್ಲೂರಿನಲ್ಲಿ ಅತಿ ಹೆಚ್ಚು 5.36 ಲಕ್ಷ ಮತದಾರರಿದ್ದಾರೆ, ಆದರೆ ಹಾರ್ಬರ್‌ನಲ್ಲಿ ಅತಿ ಕಡಿಮೆ ಅಂದರೆ 1.16 ಲಕ್ಷ ಮತದಾರರಿದ್ದಾರೆ.

ಮತದಾರರ ಪಟ್ಟಿಯ ನಿರಂತರ ನವೀಕರಣ ಕಾರ್ಯ ನಡೆಯುತ್ತಿರುತ್ತದೆ. ಅರ್ಹ ಮತದಾರರು ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ನಮೂನೆ 6 ಅನ್ನು ಸಲ್ಲಿಸಬಹುದು ಎಂದು ಪಟ್ನಾಯಕ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com