ಹೇ.. ನಿಂಗೆ ಗೊತ್ತ, ನಮ್ಮ ತಾತ ಸಬ್ ಇನ್ಸ್‌ಪೆಕ್ಟರ್‌: ಕಾರು ಚಲಾಯಿಸಿದ್ದ 6 ವರ್ಷದ ಬಾಲಕಿಯಿಂದ ಸಾರ್ವಜನಿಕರಿಗೆ ಅವಾಜ್, Video!

ಹೈದರಾಬಾದ್ ಪೊಲೀಸ್ ಇನ್ಸ್‌ಪೆಕ್ಟರ್‌ ಘೋರ ನಿರ್ಲಕ್ಷ್ಯ ತೋರಿದ್ದು 6 ವರ್ಷದ ಮೊಮ್ಮಗಳಿಗೆ ವಾಹನ ಚಲಾಯಿಸಲು ಅವಕಾಶ ನೀಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
6 ವರ್ಷದ ಬಾಲಕಿಯಿಂದ ಕಾರು ಚಾಲನೆ
6 ವರ್ಷದ ಬಾಲಕಿಯಿಂದ ಕಾರು ಚಾಲನೆ
Updated on

ಹೈದರಾಬಾದ್: ಹೈದರಾಬಾದ್ ಪೊಲೀಸ್ ಇನ್ಸ್‌ಪೆಕ್ಟರ್‌ ಘೋರ ನಿರ್ಲಕ್ಷ್ಯ ತೋರಿದ್ದು 6 ವರ್ಷದ ಮೊಮ್ಮಗಳಿಗೆ ವಾಹನ ಚಲಾಯಿಸಲು ಅವಕಾಶ ನೀಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (SI) ಪೂಜಾರಿ ತಿರುಪತಿ ತಮ್ಮ 6 ವರ್ಷದ ಮೊಮ್ಮಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಲಾಯಿಸಲು ಅವಕಾಶ ನೀಡಿದ್ದು ಘಟನೆಯ ವೀಡಿಯೊ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಜುಲೈ 11ರಂದು ಸಂಜೆ 5 ಗಂಟೆ ಸುಮಾರಿಗೆ ನಗರದ ಹೊರವಲಯದಲ್ಲಿರುವ ಗಂಧಮ್‌ಗುಡ-ಬೈರಗಿಗುಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪೂಜಾರಿ ತಿರುಪತಿ ತಮ್ಮ ಆರು ವರ್ಷದ ಮೊಮ್ಮಗಳಿಗೆ ತಮ್ಮ ಕಾರು ಚಲಾಯಿಸಲು ಅವಕಾಶ ನೀಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ 6 ವರ್ಷದ ಬಾಲಕಿ ಸಾರ್ವಜನಿಕರಿಗೆ ಅವಾಜ್ ಹಾಕಿದ್ದಾಳೆ. ಹೇ ನಿಂಗೆ ಗೊತ್ತ ನಮ್ಮ ತಾತ ಸಬ್ ಇನ್ಸ್‌ಪೆಕ್ಟರ್‌ ಎಂದು ಹೇಳಿದ್ದು ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪೂಜಾರಿ ಸುಮ್ಮನೆ ನೋಡುತ್ತಿದ್ದರು.

6 ವರ್ಷದ ಬಾಲಕಿಯಿಂದ ಕಾರು ಚಾಲನೆ
ವಿಚಿತ್ರ ಆದ್ರೂ ಸತ್ಯ.. ಹೆಂಡತಿ ಎಸೆದ ಮೊಬೈಲ್ ತಲೆಗೆ ಬಡಿದು ಗಂಡ ಸಾವು!

ಈ ಕುರಿತು ವಿಡಿಯೋ ವೈರಲ್ ಆದ ನಂತರ, ನರಸಿಂಗಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಕಾನೂನಿನ ಉಲ್ಲಂಘನೆಯಾಗಿದ್ದು, ಗಂಭೀರ ರಸ್ತೆ ಅಪಘಾತಕ್ಕೆ ಕಾರಣವಾಗಬಹುದು ಎಂದು ಪೊಲೀಸರು ಹೇಳುತ್ತಾರೆ.

ಪೊಲೀಸರು ಸಬ್ ಇನ್ಸ್‌ಪೆಕ್ಟರ್ ಪೂಜಾರಿ ತಿರುಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 125 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ಮತ್ತು 180 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸೆಕ್ಷನ್‌ಗಳಲ್ಲಿ ನಿರ್ಲಕ್ಷ್ಯದಿಂದ ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮತ್ತು ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡುವಂತಹ ಆರೋಪಗಳು ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com