SBI ಬ್ಯಾಂಕ್ ಮ್ಯಾನೇಜರ್ ಕೆನ್ನೆಗೆ ಬಾರಿಸಿದ ಪ್ರಕರಣ: ಎಂ ಕರುಣಾನಿಧಿ ಮೊಮ್ಮಗಳು ಬಂಧನ!

ಭಾರತೀಯ ನಾಗರಿಕ ಸುರಕ್ಷಾ ಸಂಹಿತ (ಬಿಎನ್‌ಎಸ್‌ಎಸ್) ಅಡಿಯಲ್ಲಿ ಜುಲೈ 28 ರಂದು ಸಮನ್ಸ್ ಜಾರಿಯಾದ ನಂತರ ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಅವರು ಹಾಜರಾದರು.
granddaughter of DMK patriarch M Karunanidhi
ಎಂ ಕರುಣಾನಿಧಿ ಅವರ ಮೊಮ್ಮಗಳು ಕಾಯಲ್ವಿಳಿ
Updated on

ಚೆನ್ನೈ: ಎಸ್‌ಬಿಐ ಶಾಖೆಯ ವ್ಯವಸ್ಥಾಪಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಎಂ ಕೆ ಅಳಗಿರಿ ಅವರ ಪುತ್ರಿ ಮತ್ತು ಎಂ ಕರುಣಾನಿಧಿ ಅವರ ಮೊಮ್ಮಗಳು ಕಾಯಲ್ವಿಳಿ ಅಳಗಿರಿ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದು, ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತ (ಬಿಎನ್‌ಎಸ್‌ಎಸ್) ಅಡಿಯಲ್ಲಿ ಜುಲೈ 28 ರಂದು ಸಮನ್ಸ್ ಜಾರಿಯಾದ ನಂತರ ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಅವರು ಹಾಜರಾದರು.

ಸುಮಾರು ಎರಡು ಗಂಟೆಗಳ ವಿಚಾರಣೆಯ ನಂತರ, ಅವರನ್ನು ಔಪಚಾರಿಕವಾಗಿ ಬಂಧಿಸಲಾಯಿತು. ಬಳಿಕ ಸ್ಟೇಷನ್ ಜಾಮೀನು ನೀಡಲಾಯಿತು. ಏಕೆಂದರೆ ಅವರ ವಿರುದ್ಧ ದಾಖಲಾಗಿರುವ ಅಪರಾಧಗಳಿಗೆ ಗರಿಷ್ಠ ಮೂರು ವರ್ಷಗಳಿಗಿಂತ ಕಡಿಮೆ ಶಿಕ್ಷೆ ವಿಧಿಸಬಹುದು.

ಜಾಮೀನು ಷರತ್ತುಗಳ ಭಾಗವಾಗಿ, ತನಿಖೆಗೆ ಸಹಕರಿಸಲು ಮತ್ತು ನಗರವನ್ನು ತೊರೆಯುವ ಮುನ್ನ ಅಧಿಕಾರಿಗಳಿಗೆ ತಿಳಿಸಲು ಕಾಯಲ್ವಿಳಿ ಅವರಿಗೆ ಪೂಲೀಸರು ಸೂಚಿಸಿದ್ದಾರೆ. ಜುಲೈ 20 ರಂದು ಅಡ್ಯಾರ್‌ನಲ್ಲಿರುವ ಎಸ್‌ಬಿಐ ಎನ್‌ಆರ್‌ಐ ಶಾಖೆಯಲ್ಲಿ ನಡೆದ ಘಟನೆಯ ನಂತರ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ.

granddaughter of DMK patriarch M Karunanidhi
ಚೆನ್ನೈ: SBI ಬ್ರಾಂಚ್ ಮ್ಯಾನೇಜರ್ ಗೆ ಮಾಜಿ ಕೇಂದ್ರ ಸಚಿವ ಎಂಕೆ ಅಳಗಿರಿ ಪುತ್ರಿಯಿಂದ ಕಪಾಳಮೋಕ್ಷ! Video ವೈರಲ್

ಈ ಬ್ಯಾಂಕ್ ಕಾಯಲ್ವಿಳಿ ಒಡೆತನದ ವಾಣಿಜ್ಯ ಕಟ್ಟಡದಲ್ಲಿದೆ. ಶಾಖಾ ವ್ಯವಸ್ಥಾಪಕ ಹರ್ಷಿನ್ ಸಿಂಗ್ ಅವರು ಆವರಣದಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಲಿಫ್ಟ್ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಮಾತಿಗೆ ಮಾತು ಬೆಳೆದು ಕಾಯಲ್ವಿಳಿ ಬ್ಯಾಂಕ್ ಮ್ಯಾನೇಜರ್ ಗೆ ಕಪಾಳ ಮೋಕ್ಷ ಮಾಡಿದ್ದರು.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com