PoKನಲ್ಲಿ ನಿರಾಯುಧ 30 ಜನರ ಹತ್ಯೆ, ಜಗತ್ತು ನೋಡುತ್ತಿದೆ: ಪಾಕ್‌ನ ಕ್ರೌರ್ಯ ಖಂಡಿಸಿದ ಭಾರತ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಅಮಾಯಕ ನಾಗರಿಕರು ಮತ್ತು ಪ್ರತಿಭಟನಾಕಾರರ ಮೇಲೆ ಬಹಿರಂಗವಾಗಿ ಗುಂಡು ಹಾರಿಸಿದ್ದಕ್ಕೆ ಭಾರತ ಪ್ರತಿಕ್ರಿಯಿಸಿದೆ. ಭಾರತೀಯ ವಿದೇಶಾಂಗ ಸಚಿವಾಲಯವು ಪಾಕಿಸ್ತಾನವನ್ನು ಟೀಕಿಸಿದೆ.
Randhir Jaiswal
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್
Updated on

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಅಮಾಯಕ ನಾಗರಿಕರು ಮತ್ತು ಪ್ರತಿಭಟನಾಕಾರರ ಮೇಲೆ ಬಹಿರಂಗವಾಗಿ ಗುಂಡು ಹಾರಿಸಿದ್ದಕ್ಕೆ ಭಾರತ ಪ್ರತಿಕ್ರಿಯಿಸಿದೆ. ಭಾರತೀಯ ವಿದೇಶಾಂಗ ಸಚಿವಾಲಯವು ಪಾಕಿಸ್ತಾನವನ್ನು ಟೀಕಿಸಿದ್ದು, ಸಚಿವಾಲಯವು ಈ ವಿಷಯವನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನಾವು ಪಾಕಿಸ್ತಾನದಿಂದ ನಿರಂತರ ನಕಲಿ ಸುದ್ದಿ ಮತ್ತು ವೀಡಿಯೊಗಳ ಸರಣಿಯನ್ನು ನೋಡುತ್ತಿದ್ದೇವೆ. ಇದು ಪಾಕಿಸ್ತಾನವು ತನ್ನ ವೈಫಲ್ಯಗಳನ್ನು ಮರೆಮಾಡಲು ಮತ್ತು ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಮಾಡುತ್ತಿರುವ ಹತಾಶ ಪ್ರಯತ್ನವಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಪೊಲೀಸರ ಭೀಕರ ದಾಳಿಗಳ ಬಗ್ಗೆ ವರದಿಗಳಿವೆ. ಇದರಲ್ಲಿ ಹಲವಾರು ಪ್ರತಿಭಟನಾಕಾರರು ಸಾವನ್ನಪ್ಪಿದ್ದು ಇತರರು ಗಾಯಗೊಂಡಿದ್ದಾರೆ. ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನವನ್ನು ತನ್ನ ದುಷ್ಕೃತ್ಯಗಳು ಮತ್ತು ದೌರ್ಜನ್ಯಗಳಿಗೆ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು.

ಪಿಒಕೆಯಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ನಡುವೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್‌ಪಿ ವೈದ್ಯ ಪ್ರತಿಕ್ರಿಯಿಸಿದ್ದು, ಪಿಒಕೆಯಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಇದು ನಾಗರಿಕರ ಹತ್ಯಾಕಾಂಡ. ಇದು ಜಲಿಯನ್ ವಾಲಾಬಾಗ್‌ನಂತಿದೆ. ಈ ಘಟನೆಯಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜನರಲ್ ಡಯರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಿರಾಯುಧ ಜನರ ಮೇಲೆ ಗುಂಡು ಹಾರಿಸಲು ಆದೇಶಿಸುತ್ತಿದ್ದಾರೆ. ಜನರು ಗೋದಿ ಹಿಟ್ಟು ಮತ್ತು ವಿದ್ಯುತ್ ಅಗ್ಗವಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇವು ನ್ಯಾಯಯುತ ಬೇಡಿಕೆಗಳಾಗಿವೆ. ಆದರೆ ಮುನೀರ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶಿಸುತ್ತಿದ್ದಾರೆ ಎಂದು ರಣಧೀರ್ ಆರೋಪಿಸಿದರು.

ವಾಸ್ತವವಾಗಿ, ಕೆಲ ದಿನಗಳಿಂದ ಪಿಒಕೆಯ ಜನರು ಶಹಬಾಜ್ ಸರ್ಕಾರ ಮತ್ತು ಪಿಒಕೆಯಲ್ಲಿನ ಅದರ ಕೈಗೊಂಬೆ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈ ಪ್ರತಿಭಟನೆಯ ಧ್ವನಿ ಪಾಕಿಸ್ತಾನಿ ಆಡಳಿತಗಾರರಿಗೆ ಇಷ್ಟವಾಗಲಿಲ್ಲ. ಪ್ರತಿಭಟನೆಯ ಧ್ವನಿಯನ್ನು ಅಡಗಿಸಲು, ಶಹಬಾಜ್ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಯುನೈಟೆಡ್ ಅವಾಮಿ ಆಕ್ಷನ್ ಕಮಿಟಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಪಾಕಿಸ್ತಾನ ಸರ್ಕಾರವು ಈ ಪ್ರದೇಶದ ಜನರನ್ನು ಮಲತಾಯಿ ವರ್ತನೆಯಿಂದ ನಡೆಸಿಕೊಂಡಿದೆ. ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಕಸಿದುಕೊಳ್ಳಲಾಗಿದೆ ಮತ್ತು ಪ್ರತಿಯಾಗಿ, ದಬ್ಬಾಳಿಕೆ ಮತ್ತು ದೌರ್ಜನ್ಯಗಳನ್ನು ಮಾತ್ರ ಮಾಡಲಾಗಿದೆ.

Randhir Jaiswal
Pakistan-occupied Kashmir: JAAC ಬ್ಯಾನ್ ಬಳಿಕ ಭುಗಿಲೆದ್ದ ಹಿಂಸಾಚಾರ; 11 ಜನರ ಸಾವು! Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com