ಮಮತಾಗೆ ಆಘಾತ, ಟಿಎಂಸಿಯಲ್ಲಿ ಬಂಡಾಯ ತೀವ್ರ; ಸ್ಪೀಕರ್‌ಗೆ ಸಲ್ಲಿಸಿದ 19 ಬಂಡಾಯ ಸಂಸದರ ಪಟ್ಟಿ ಬಹಿರಂಗ

ಸ್ಪೀಕರ್ ಕಚೇರಿಗೆ ಹೆಸರು ಸಲ್ಲಿಸಿರುವ 20 ಬಂಡಾಯ ಸಂಸದರ ಪೈಕಿ 19 ಮಂದಿಯ ಪಟ್ಟಿ ಹೀಗಿದೆ
Saayoni Ghosh, Mamata Banerjee, Yusuf Pathan
ಪಶ್ಚಿಮ ಬಂಗಾಳ ಟಿಎಂಸಿಯಲ್ಲಿ ತೀವ್ರಗೊಂಡ ಬಂಡಾಯ
Updated on

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ನಡುವೆ, ಮೇ 18ರಂದು ಲೋಕಸಭೆ ಸ್ಪೀಕರ್ ಕಚೇರಿಗೆ ತಮ್ಮ ಹೆಸರುಗಳನ್ನು ಸಲ್ಲಿಸಿದ್ದ 19 ಬಂಡಾಯ ಸಂಸದರ ಹೆಸರುಗಳು ಇಂದು ಶುಕ್ರವಾರ ಬಹಿರಂಗಗೊಂಡಿವೆ.

ಸ್ಪೀಕರ್ ಕಚೇರಿಗೆ ಹೆಸರು ಸಲ್ಲಿಸಿರುವ 20 ಬಂಡಾಯ ಸಂಸದರ ಪೈಕಿ 19 ಮಂದಿಯ ಪಟ್ಟಿ ಹೀಗಿದೆ:

  1. ಕಾಕೋಲಿ ಘೋಷ್ ದಸ್ತಿದಾರ್

  2. ಶತಾಬ್ದಿ ರಾಯ್

  3. ಬಾಪಿ ಹಾಲ್ದಾರ್

  4. ಶರ್ಮಿಳಾ ಸರ್ಕಾರ್

  5. ಪ್ರಸೂನ್ ಬಂದ್ಯೋಪಾಧ್ಯಾಯ

  6. ಜಗದೀಶ್ ಬರ್ಮಾ ಬಸುನಿಯಾ

  7. ಅಸಿತ್ ಕುಮಾರ್ ಮಾಲ್

  8. ಅರೂಪ್ ಚಕ್ರವರ್ತಿ

  9. ರಚನಾ ಬ್ಯಾನರ್ಜಿ

  10. ಸಾಯೋನಿ ಘೋಷ್

  11. ಖಲೀಲುರ್ ರಹಮಾನ್

  12. ಅಬು ತಾಹೇರ್ ಖಾನ್

  13. ಯೂಸುಫ್ ಪಠಾಣ್

  14. ಮಿತಾಲಿ ಬಾಗ್

  15. ಮಾಲಾ ರಾಯ್

  16. ಕಾಲಿಪದ ಸೊರೇನ್

  17. ದೀಪಕ್ ಅಧಿಕಾರಿ (ದೇವ್)

  18. ಜೂನ್ ಮಾಲಿಯಾ

  19. ಪಾರ್ಥ ಭೌಮಿಕ್

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಟಿಎಂಸಿ ಗಂಭೀರ ಸಂಕಷ್ಟವನ್ನು ಎದುರಿಸುತ್ತಿದೆ. ಪಕ್ಷದ ಸಂಘಟನಾ ಹಾಗೂ ಶಾಸಕಾಂಗದ ಶಕ್ತಿಯನ್ನು ದುರ್ಬಲಗೊಳಿಸಿರುವ ಬಂಡಾಯದಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿದೆ.

ಕಳೆದ ವಾರ, ಟಿಎಂಸಿ ಶಾಸಕಾಂಗ ಪಕ್ಷದ 80 ಶಾಸಕರ ಪೈಕಿ 58ಕ್ಕೂ ಹೆಚ್ಚು ಶಾಸಕರು ಅಧಿಕೃತ ಪಕ್ಷದಿಂದ ಬೇರ್ಪಟ್ಟು, ಪಕ್ಷದಿಂದ ಉಚ್ಚಾಟನೆಗೊಂಡಿದ್ದ ರಿತಬ್ರತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಮುಖ ಪ್ರತಿಪಕ್ಷ ಗುಂಪಾಗಿ ಮಾನ್ಯತೆ ಪಡೆದಿದ್ದರು.

ಬಂಡಾಯ ಶಿಬಿರವು ತನ್ನ ಬಲ ಮತ್ತಷ್ಟು ಹೆಚ್ಚಾಗಿದೆ ಎಂದು ಈಗಾಗಲೇ ಹೇಳಿಕೊಂಡಿದೆ. ನಂತರ ಈ ಬಿಕ್ಕಟ್ಟು ಸಂಸತ್ತಿಗೂ ವ್ಯಾಪಿಸಿದ್ದು, ಕಕೊಲಿ ಘೋಷ್ ದಸ್ತೀದಾರ್ ನೇತೃತ್ವದ ಬಂಡಾಯ ಸಂಸದರು ಲೋಕಸಭೆಯ 20ಕ್ಕೂ ಹೆಚ್ಚು ಸದಸ್ಯರ ಬೆಂಬಲ ತಮ್ಮೊಂದಿಗೆ ಇದೆ ಎಂದು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com