

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದವರು ಬಂಗಾಳಿಗಳೇ ಅಲ್ಲ.. ಅವರಿಗೆ ನಮ್ಮ ರಾಜ್ಯದಲ್ಲಿ ವಾಸಿಸುವ ಯಾವುದೇ ಹಕ್ಕು ಇಲ್ಲ ಎಂದು ಟಿಎಂ ಸಂಸದೆ ಮಹುವಾ ಮೋಯಿತ್ರಾ ಹೇಳಿದ್ದಾರೆ.
ಕೋಲ್ಕತ್ತಾದ ಧರ್ಮತಾಲಾದಲ್ಲಿ ಎಸ್‌ಐಆರ್ ವಿಷಯದ ಕುರಿತು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮೊಯಿತ್ರಾ ಈ ಹೇಳಿಕೆಗಳನ್ನು ನೀಡಿದ್ದು ಅವರ ಭಾಷಣದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಈ ವೇಳೆ ಮಾತನಾಡಿದ ಮಹುವಾ, 'ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದ ಜನರ ಪರವಾಗಿ ರಾಜಕೀಯ ಹೋರಾಟ ನಡೆಸುತ್ತಿದ್ದಾರೆ.
ಟಿಎಂಸಿಯೊಂದಿಗೆ ಈಗ ಇಲ್ಲದಿರುವವರು ಬಂಗಾಳಿಗಳಲ್ಲ, ಅವರಿಗೆ ಬಂಗಾಳದಲ್ಲಿ ಉಳಿಯುವ ಹಕ್ಕಿಲ್ಲ.. ಏಕೆಂದರೆ ಮಮತಾ ದೀದಿ ಬಂಗಾಳದ ಜನರಿಗಾಗಿ ಈ ಯುದ್ಧ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಟೀಕೆ
ಇನ್ನು ಸಂಸದೆ ಮಹುವಾ ಮೋಯಿತ್ರಾ ಹೇಳಿಕೆಗೆ ಬಿಜೆಪಿ ತೀವ್ರ ಕಿಡಿಕಾರಿದ್ದು, ಇದು ಟಿಎಂಸಿ ಅಸಹಿಷ್ಣುತೆಯ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂದು ಹೇಳಿದರು, "ಟಿಎಂಸಿ ತನಶಾಹಿ, ಮಾನಸಿಕ್ತ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಮತ್ತು ಮಹುವಾ ಮೊಯಿತ್ರಾ ಅವರ ಹೇಳಿಕೆಯು ಇಂದಿರಾ ಗಾಂಧಿಯವರ ಅದೇ ತನಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಪೂನವಾಲ್ಲಾ ಹೇಳಿದರು.
ಅಲ್ಲದೆ 'ಇಂದಿರಾ ಗಾಂಧಿ ಒಮ್ಮೆ “ಭಾರತವೇ ಇಂದಿರಾ, ಇಂದಿರಾವೇ ಭಾರತ” ಎಂದು ಹೇಳಿದ್ದರು. ಇಂದು, ಮಹುವಾ ಮೊಯಿತ್ರಾ “ಟಿಎಂಸಿ ಬಂಗಾಳಿ, ಬಂಗಾಳಿಯೇ ಟಿಎಂಸಿ” ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆಗಳು “ಹಿಟ್ಲರ್-ಶೈಲಿಯ ಮನಸ್ಥಿತಿ” ಮತ್ತು ಇಂದಿರಾ ಗಾಂಧಿಯ ಶೈಲಿಯನ್ನು ನೆನಪಿಸುತ್ತವೆ ಎಂದು ಅವರು ಹೇಳಿದರು.
ರಾಷ್ಟ್ರಪತಿಗಳಿಗೂ ಅಪಮಾನ
ಇದೇ ವೇಳೆ ಪೂನಾವಾಲಾ ಮಮತಾ ಸರ್ಕಾರ ಬಂಗಾಳಿಗಳಿಗೆ ಮಾತ್ರವಲ್ಲ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಅಪಮಾನಿಸುವ ಮೂಲಕ ಆದಿವಾಸಿ ಸಮುದಾಯಕ್ಕೂ ಅಪಮಾನಿಸಿದೆ. 'ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಮೇಲಿನ ದಾಳಿಗೆ ಇದೇ ಮನಸ್ಥಿತಿಯೇ ಕಾರಣ. ಅವರು ಬುಡಕಟ್ಟು ಸಮುದಾಯ, ಆದಿವಾಸಿ ಸಮುದಾಯವನ್ನು ಅವರು ರಾಷ್ಟ್ರಪತಿಗಳೊಂದಿಗೆ ನಡೆಸಿಕೊಂಡ ರೀತಿಯಲ್ಲಿ ಅವಮಾನಿಸುತ್ತಾರೆ. ಅವರು ಜನರ ಮೇಲೆಯೂ ದಾಳಿ ಮಾಡುತ್ತಾರೆ" ಎಂದು ಬಿಜೆಪಿ ವಕ್ತಾರರು ಟೀಕಿಸಿದರು.
Advertisement