ಯೂಟರ್ನ್ ಹೊಡೆದ AIADMK ಬಂಡಾಯ ಬಣ; ವೇಲುಮಣಿ, ಬೆಂಬಲಿಗ ಶಾಸಕರಿಂದ ಪಳನಿಸ್ವಾಮಿ ಭೇಟಿ

ಪಕ್ಷವು ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಬೆಂಬಲಿಸಬೇಕೆಂದು ಒತ್ತಾಯಿಸಿದ್ದ ಮಾಜಿ ರಾಜ್ಯ ಸಚಿವ ಸಿವಿ ಷಣ್ಮುಗಂ ಸಭೆಯಲ್ಲಿ ಗೈರಾಗಿದ್ದರು.
SP Velumani and supporting MLAs meet Speaker JCD Prabhakar amid political developments in AIADMK camp.
ಎಐಎಡಿಎಂಕೆ ಪಾಳಯದಲ್ಲಿನ ರಾಜಕೀಯ ಬೆಳವಣಿಗೆಗಳ ನಡುವೆ ಎಸ್‌ಪಿ ವೇಲುಮಣಿ ಮತ್ತು ಬೆಂಬಲಿಗ ಶಾಸಕರು ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರನ್ನು ಭೇಟಿ ಮಾಡಿದ್ದಾರೆ.
Updated on

ಚೆನ್ನೈ: ಕಳೆದ ವಿಧಾನಸಭೆ ಚುನಾವಣೆಯ ನಂತರ ತಮಿಳುನಾಡಿನ ರಾಜಕೀಯ ಚಿತ್ರಣವೇ ಬದಲಾಗಿದ್ದು, ಹಳೆಯ ದ್ರಾವಿಡ ಪಕ್ಷವಾದ ಎಐಎಡಿಎಂಕೆಯಲ್ಲಿ ಬಣಗಳು ಉಲ್ಭಣಗೊಂಡಿದ್ದವು. ಆದರೆ, ಇದೀಗ ಪಕ್ಷದೊಳಗೆ ಮತ್ತೆ ಹೊಂದಾಣಿಕೆ ಮೂಡುತ್ತಿರುವಂತೆ ತೋರುತ್ತಿದೆ.

ಮಾಜಿ ಸಚಿವ ಎಸ್‌ಪಿ ವೇಲುಮಣಿ ನೇತೃತ್ವದ ಬಂಡಾಯ ಶಾಸಕರು ಬುಧವಾರ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷದ ನಾಯಕನಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಸಮಯದಲ್ಲಿ ಸುಮಾರು 13 ಶಾಸಕರು ವೇಲುಮಣಿ ಜೊತೆಗಿದ್ದರು ಎನ್ನಲಾಗಿದೆ.

ಪಕ್ಷವು ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಬೆಂಬಲಿಸಬೇಕೆಂದು ಒತ್ತಾಯಿಸಿದ್ದ ಮಾಜಿ ರಾಜ್ಯ ಸಚಿವ ಸಿವಿ ಷಣ್ಮುಗಂ ಸಭೆಯಲ್ಲಿ ಗೈರಾಗಿದ್ದು ಎದ್ದು ಕಾಣುತ್ತಿತ್ತು. ವೇಲುಮಣಿ ಮತ್ತು ಇತರ ಶಾಸಕರೊಂದಿಗೆ ಷಣ್ಮುಗಂ ಗುರುತಿಸಿಕೊಂಡಿದ್ದರು.

SP Velumani and supporting MLAs meet Speaker JCD Prabhakar amid political developments in AIADMK camp.
'ಬಾಲ ಅಲ್ಲಾಡಿಸಲು ಹೋಗುತ್ತಿದ್ದಾರೆ': ನಟ ವಿಜಯ್ ಗೆ AIADMK ರೆಬೆಲ್ ಶಾಸಕರ ಬೆಂಬಲ; ಪಳನಿಸ್ವಾಮಿ ಕೆಂಡಾಮಂಡಲ

ಅವರ ನಿವಾಸದಲ್ಲಿ ಪಳನಿಸ್ವಾಮಿ ಅವರನ್ನು ಭೇಟಿಯಾದ ನಂತರ, ವೇಲುಮಣಿ ಮಾಜಿ ಸಚಿವ ಡಾ. ಸಿ. ವಿಜಯಭಾಸ್ಕರ್ ಅವರು ತಮ್ಮನ್ನು ಬೆಂಬಲಿಸುವ ಇತರ ಶಾಸಕರು ಮತ್ತು ಅಗ್ರಿ ಎಸ್ಎಸ್ ಕೃಷ್ಣಮೂರ್ತಿ ಸೇರಿದಂತೆ ಹಿರಿಯ ನಾಯಕರೊಂದಿಗೆ ತಮಿಳುನಾಡು ವಿಧಾನಸಭಾ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿ ಮಾಡಿ, ವಿಧಾನಸಭೆಯಲ್ಲಿ ಒಂದೇ ಪಕ್ಷವಾಗಿ ಒಟ್ಟಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಪತ್ರವನ್ನು ಸಲ್ಲಿಸಿದರು. ಕೃಷ್ಣಮೂರ್ತಿ ಪಳನಿಸ್ವಾಮಿ ಅವರನ್ನೇ ಬೆಂಬಲಿಸಿದ್ದರು.

ಇದಕ್ಕೂ ಮೊದಲು ವಿಜಯ್‌ಭಾಸ್ಕರ್ ಅವರು ಸ್ಪೀಕರ್ ತಮ್ಮನ್ನು ಎಐಎಡಿಎಂಕೆ ಪಕ್ಷದ ಸಚೇತಕರನ್ನಾಗಿ ಗುರುತಿಸುವಂತೆ ಕೋರಿ ಬರೆದಿದ್ದ ತಮ್ಮ ಹಿಂದಿನ ಪತ್ರವನ್ನು ಹಿಂತೆಗೆದುಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com