ಪ್ರಧಾನಿ ಮೋದಿ ಮನೆ ಸಮೀಪದ ಮಸೀದಿ ನಂತರ ಮತ್ತೊಂದು ಮಸೀದಿ ತೆರವಿಗೆ ಕೇಂದ್ರ ನಿರ್ಧಾರ; ಹೈಕೋರ್ಟ್‌ಗೆ ಮಾಹಿತಿ!

ಕೃಷಿ ಭವನದಲ್ಲಿರುವ ಶತಮಾನದಷ್ಟು ಹಳೆಯದಾದ ಮಸೀದಿಯನ್ನು ತೆರವುಗೊಳಿಸಬೇಕೆಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Mosque can't be allowed inside govt complex: Centre to Delhi High Court
ಕೃಷಿ ಭವನ
Updated on: 

ನವದೆಹಲಿ: ಪ್ರಧಾನ ನರೇಂದ್ರ ಮೋದಿ ಅವರ ನಿವಾಸದ ಸಮೀಪವಿರುವ ಶತಮಾನದಷ್ಟು ಹಳೆಯದಾದ 'ರೇಸ್ ಕೋರ್ಸ್ ಮಸೀದಿ'ಯನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ಅಧಿಕಾರಿಗಳು ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ ಮತ್ತೊಂದು ಮಸೀದಿ ತೆರವಿಗೆ ಮುಂದಾಗಿರುವ, ಕೇಂದ್ರ ಸರ್ಕಾರ, ಸರ್ಕಾರಿ ಕಟ್ಟಡದಲ್ಲಿ ಜಾತ್ಯತೀತ ಸ್ವರೂಪಕ್ಕೆ ಈ ಮಸೀದಿ ಹೊಂದಿಕೆಯಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.

ಕೃಷಿ ಭವನದಲ್ಲಿರುವ ಶತಮಾನದಷ್ಟು ಹಳೆಯದಾದ ಮಸೀದಿಯನ್ನು ತೆರವುಗೊಳಿಸಬೇಕೆಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸರ್ಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿ ಶಾಶ್ವತ ಧಾರ್ಮಿಕ ರಚನೆಯನ್ನು ಸ್ಥಾಪಿಸುವುದು ಅನುಮತಿಗೆ ವಿರುದ್ಧವಾದುದು ಮತ್ತು ಸರ್ಕಾರಿ ಕಟ್ಟಡದಲ್ಲಿ "ಜಾತ್ಯತೀತ" ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶದ ಆಡಳಿತಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಆಧುನೀಕರಿಸುವ ಉದ್ದೇಶದಿಂದ, 'ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಮಾಸ್ಟರ್ ಪ್ಲಾನ್' (Central Vista Redevelopment Master Plan) ಅಡಿಯಲ್ಲಿ 'ಕಾಮನ್ ಸೆಂಟ್ರಲ್ ಸೆಕ್ರೆಟರಿಯೇಟ್' (CCS) ಕಟ್ಟಡಗಳು 4 ಮತ್ತು 5 ಅನ್ನು ಪುನರಾಭಿವೃದ್ಧಿ ಮತ್ತು ಪುನರ್ನಿರ್ಮಾಣ ಮಾಡಲಾಗುತ್ತಿದೆ ಎಂದು ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ. ಇದು ಪ್ಲಾಟ್ ಸಂಖ್ಯೆ 120 ರಲ್ಲಿ ಬರುವ ಶಾಸ್ತ್ರಿ ಭವನ ಮತ್ತು ಕೃಷಿ ಭವನಗಳಿರುವ ಜಾಗವನ್ನು ಒಳಗೊಂಡಿದೆ.

Mosque can't be allowed inside govt complex: Centre to Delhi High Court
ಪ್ರಧಾನಿ ಮೋದಿ ನಿವಾಸದ ಸಮೀಪವಿರುವ ಮಸೀದಿಗೆ ತೆರವು ನೋಟಿಸ್; ಕೇಂದ್ರದ ವಿರುದ್ಧ ಮೆಹಬೂಬಾ ಮುಫ್ತಿ ಕೆಂಡಾಮಂಡಲ

CCS ಕಟ್ಟಡಗಳು 4 ಮತ್ತು 5 ರ ನಿರ್ಮಾಣವು ಅತ್ಯಂತ ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಸಾರ್ವಜನಿಕ ಯೋಜನೆಯಾಗಿದೆ ಎಂದು ಸರ್ಕಾರ ಹೇಳಿದೆ.

ಈ ಯೋಜನಾ ಸ್ಥಳದಲ್ಲಿ 'ಕದೀಮಿ ಮಸೀದಿ' (Qadeemi Masjid) ಇದ್ದು, ಯೋಜನೆಯ ಅನುಷ್ಠಾನಕ್ಕಾಗಿ ಅದನ್ನು ಅಲ್ಲಿಂದ ತೆರವುಗೊಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.

"ಕೃಷಿ ಭವನ ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್ ಸಂಕೀರ್ಣವು ಜಾತ್ಯತೀತ ಸಾರ್ವಜನಿಕ ಆವರಣಗಳಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ಸರ್ಕಾರಿ, ಆಡಳಿತಾತ್ಮಕ ಮತ್ತು ಸಾರ್ವಜನಿಕ ಸೇವಾ ಕಾರ್ಯಗಳಿಗಾಗಿ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿ ಶಾಶ್ವತ ಧಾರ್ಮಿಕ ರಚನೆಯನ್ನು ಸ್ಥಾಪಿಸುವುದು ಅಥವಾ ಉಳಿಸಿಕೊಳ್ಳುವುದು ಅಥವಾ ಅಂತಹ ರಚನೆಗಾಗಿ ಬೇಡಿಕೆ ಇಡುವುದು ಅನುಮತಿಗೆ ವಿರುದ್ಧವಾದುದು ಮತ್ತು ಸರ್ಕಾರಿ ಆಸ್ತಿಯ ಜಾತ್ಯತೀತ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ" ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ 'ಭೂಮಿ ಮತ್ತು ಅಭಿವೃದ್ಧಿ ಕಚೇರಿ' (L&DO) ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X