ಅಸ್ಸಾಂನಲ್ಲಿ ಘೋರ ದುರಂತ: ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್‌ಗೆ ಟ್ರಕ್ ಡಿಕ್ಕಿ, 24 ಸಾವು

ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪದ ರಂಗಜಾನ್ ಎಂಬಲ್ಲಿ ಟೆಂಪೋ ಟ್ರಾವೆಲರ್ ಮತ್ತು ಕಂಟೈನರ್ ಟ್ರಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Assam Road Accident: Over 20 Feared Dead As Tempo Traveller Collides With Container Truck Near Kaziranga National Park
ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್‌ಗೆ ಟ್ರಕ್ ಡಿಕ್ಕಿOnline Desk
Updated on: 

ರಂಗಜಾನ್ (ಅಸ್ಸಾಂ): ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ರಂಗಜಾನ್ ಎಂಬಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ (ಮಿನಿ ಬಸ್) ಮತ್ತು ಕಂಟೈನರ್ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಗೋಲಾಘಾಟ್ ಜಿಲ್ಲೆಯ ಕಾಜಿರಂಗದ ಕೊಹೊರಾ ವ್ಯಾಪ್ತಿಯ ಹಾಥಿಕುಲಿ ಟೀ ಎಸ್ಟೇಟ್ ಸಮೀಪದ ರಂಗಜಾನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ (NH-715) ಮೇಲೆ ಈ ಅಪಘಾತ ಸಂಭವಿಸಿದೆ. ಬೊಕಾಖಾಟ್‌ನಿಂದ ನಾಗಾಂವ್ ಕಡೆಗೆ ಚಲಿಸುತ್ತಿದ್ದ ಪ್ರಯಾಣಿಕರ ಮಿನಿ ಬಸ್, ಗುವಾಹಟಿ ಕಡೆಯಿಂದ ಬರುತ್ತಿದ್ದ ಕಂಟೈನರ್ ಟ್ರಕ್‌ಗೆ (KA01AT0977 ನೋಂದಣಿ ಸಂಖ್ಯೆಯ ಟ್ರಕ್) ಡಿಕ್ಕಿ ಹೊಡೆದಿದೆ. ಇನ್ನು, ಮಿನಿ ಬಸ್‌ನಲ್ಲಿ ಸುಮಾರು 35 ರಿಂದ 40 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಅವರಲ್ಲಿ ಹೆಚ್ಚಿನವರು ಶಾಲಾ-ಕಾಲೇಜು ವಿದ್ಯಾರ್ಥಿಗಳಾಗಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಏತನ್ಮಧ್ಯೆ, ಡಿಕ್ಕಿಯ ತೀವ್ರತೆಗೆ ಟ್ರಾವೆಲರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, 24 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 19 ಮಂದಿಗೆ ಗಾಯಗಳಾಗಿದೆ.

Assam Road Accident: Over 20 Feared Dead As Tempo Traveller Collides With Container Truck Near Kaziranga National Park
ವೇಶ್ಯಾವಾಟಿಕೆ ಆರೋಪ: ನಡು ರಸ್ತೆಯಲ್ಲೇ ಮಹಿಳೆಯರಿಗೆ ಥಳಿಸಿದ ಶಿವಸೇನೆ ಕಾರ್ಯಕರ್ತೆಯರು; ವಿಡಿಯೋ ವೈರಲ್​!

ಅಪಘಾತಕ್ಕೆ ಕಾರಣವೇನು?

ರಾಷ್ಟ್ರೀಯ ಉದ್ಯಾನವನದ ಬಳಿ ನಿಗದಿಪಡಿಸಲಾದ ವೇಗದ ಮಿತಿಯನ್ನು ಉಲ್ಲಂಘಿಸಿ ಮಿನಿ ಬಸ್ ಅತಿ ವೇಗದಲ್ಲಿ ಚಲಿಸುತ್ತಿತ್ತು ಎಂದು ಗೋಲಾಘಾಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಸ್ವಪ್ನನೀಲ್ ದೇಕಾ ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ವಾಹನವು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X