'ಅಕ್ವಾನ್ ಚಂಡಮಾರುತ': ಒಡಿಶಾದ ಗೋಪಾಲಪುರ ಸಮೀಪ ಪ್ರವೇಶ ಪ್ರಕ್ರಿಯೆ ಆರಂಭ; 3 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

ಹವಾಮಾನ ಇಲಾಖೆ ತನ್ನ ಬುಲೆಟಿನ್‌ನಲ್ಲಿ, ಇತ್ತೀಚಿನ ಉಪಗ್ರಹ ಚಿತ್ರಗಳು ಚಂಡಮಾರುತವು ಭೂಭಾಗದೊಂದಿಗೆ ಸಂವಹನ ಆರಂಭಿಸಿರುವುದನ್ನು ಸೂಚಿಸಿದ್ದು, ಇದು ಉತ್ತರ–ವಾಯವ್ಯ ದಿಕ್ಕಿನಲ್ಲಿ ಚಲಿಸಿ ಇಂದು ಮಧ್ಯಾಹ್ನದ ವೇಳೆಗೆ ಗೋಪಾಲಪುರದ ಸಮೀಪ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
Cyclone Akvan weakens while approaching Odisha coast, landfall expected near Gopalpur within hours
ಒಡಿಶಾ ಕರಾವಳಿಯತ್ತ ಸಾಗುತ್ತಿರುವ ಅಕ್ವಾನ್ ಚಂಡಮಾರುತ ದುರ್ಬಲ; ಕೆಲವೇ ಗಂಟೆಗಳಲ್ಲಿ ಗೋಪಾಲಪುರದ ಸಮೀಪ ಭೂಭಾಗ ಪ್ರವೇಶಿಸುವ ಸಾಧ್ಯತೆ
Updated on: 

ಒಡಿಶಾದ ಗೋಪಾಲಪುರದ ಸಮೀಪ ಚಂಡಮಾರುತ ಅಕ್ವಾನ್‌ನ ಭೂಭಾಗ ಪ್ರವೇಶ ಪ್ರಕ್ರಿಯೆ ಇಂದು ಶುಕ್ರವಾರ ಆರಂಭವಾಗಿದ್ದು, ಮುಂದಿನ ಎರಡು ಗಂಟೆಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಹವಾಮಾನ ಇಲಾಖೆ ತನ್ನ ಬುಲೆಟಿನ್‌ನಲ್ಲಿ, ಇತ್ತೀಚಿನ ಉಪಗ್ರಹ ಚಿತ್ರಗಳು ಚಂಡಮಾರುತವು ಭೂಭಾಗದೊಂದಿಗೆ ಸಂವಹನ ಆರಂಭಿಸಿರುವುದನ್ನು ಸೂಚಿಸಿದ್ದು, ಇದು ಉತ್ತರ–ವಾಯವ್ಯ ದಿಕ್ಕಿನಲ್ಲಿ ಚಲಿಸಿ ಇಂದು ಮಧ್ಯಾಹ್ನದ ವೇಳೆಗೆ ಗೋಪಾಲಪುರದ ಸಮೀಪ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ವ್ಯವಸ್ಥೆಯಿಂದ ಗಂಟೆಗೆ 70–80 ಕಿ.ಮೀ. ಗರಿಷ್ಠ ನಿರಂತರ ಗಾಳಿಯ ವೇಗ ಉಂಟಾಗಲಿದ್ದು, ಗಾಳಿಯ ವೇಗವು ಗಂಟೆಗೆ 90 ಕಿ.ಮೀ. ವರೆಗೆ ಹೆಚ್ಚುವ ಸಾಧ್ಯತೆಯಿದೆ.

ವಿಶಾಖಪಟ್ಟಣ ಮತ್ತು ಗೋಪಾಲಪುರದಲ್ಲಿರುವ ಡಾಪ್ಲರ್ ಹವಾಮಾನ ರಾಡಾರ್‌ಗಳ ಮೂಲಕ ಚಂಡಮಾರುತದ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂದು ಐಎಂಡಿ ತಿಳಿಸಿದೆ.

ಇತ್ತೀಚಿನ ಉಪಗ್ರಹ ಚಿತ್ರಗಳು, ಚಂಡಮಾರುತ ಅಕ್ವಾನ್‌ಗೆ ಸಂಬಂಧಿಸಿದ ಮೋಡಗಳ ಸಮೂಹವು ಉತ್ತರ ಆಂಧ್ರಪ್ರದೇಶ–ದಕ್ಷಿಣ ಒಡಿಶಾ ಕರಾವಳಿಯನ್ನು ಪ್ರವೇಶಿಸಿರುವುದರಿಂದ ಭೂಭಾಗದೊಂದಿಗೆ ಸಂವಹನ ಆರಂಭವಾಗಿದೆ ಎಂಬುದನ್ನು ಸೂಚಿಸುತ್ತವೆ ಎಂದು ತಿಳಿಸಿದೆ.

ಭೂಭಾಗ ಪ್ರವೇಶ ಪ್ರಕ್ರಿಯೆ ಆರಂಭವಾದಾಗ ಗಾಳಿಯ ವೇಗ ಗಂಟೆಗೆ 70–90 ಕಿ.ಮೀ. ಇತ್ತು. ಇದೇ ಗಾಳಿಯ ವೇಗ ಮುಂದಿನ ಆರು ಗಂಟೆಗಳ ಕಾಲ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.

Cyclone Akvan weakens while approaching Odisha coast, landfall expected near Gopalpur within hours
'ಅಕ್ವಾನ್' ಚಂಡಮಾರುತ: ಒಡಿಶಾದಲ್ಲಿ 1.2 ಲಕ್ಷ ಜನರನ್ನು ಸ್ಥಳಾಂತರ, 69 ರೈಲು ಸೇವೆ ರದ್ದು

ಇದೇ ವೇಳೆ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ರಾಜ್ಯದ ಸಿದ್ಧತೆಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆಗಾಗಿ ನಿನ್ನೆ ತಡರಾತ್ರಿ ಸಭೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ 20 ಜಿಲ್ಲೆಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

ಸುಮಾರು 4,170 ಗರ್ಭಿಣಿಯರನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ 1,317 ಮಂದಿ ಹೆರಿಗೆಯಾದ ಮಹಿಳೆಯರಾಗಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಮೂರನೇ ಚಂಡಮಾರುತವಾಗಿದೆ. ಹಿಂದಿನ ಎರಡು ಚಂಡಮಾರುತಗಳು ಆಂಧ್ರ ಕರಾವಳಿಗೆ ಅಪ್ಪಳಿಸಿದ್ದರೆ, ಈ ಬಾರಿ ಒಡಿಶಾ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾ ಸರ್ಕಾರವು 9,299 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಒಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. 305 ತುರ್ತು ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

Cyclone Akvan weakens while approaching Odisha coast, landfall expected near Gopalpur within hours
ಅಕ್ವಾನ್ ಚಂಡಮಾರುತ: ಆಂಧ್ರಪ್ರದೇಶದ 80 ಮೀನುಗಾರರು ಒಡಿಶಾದ ಗಂಜಾಂನಲ್ಲಿ ಸಿಲುಕಿ ಆತಂಕ; ನವೆಂಬರ್ 21ರವರೆಗೆ ಎಚ್ಚರಿಕೆ!

ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್‌ಎಎಫ್)ಯ 60 ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ 14 ತಂಡಗಳು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 131 ತಂಡಗಳನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ಕಡೆ ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಕ್ಷೇತ್ರಮಟ್ಟದ ಕಾರ್ಯಾಚರಣೆಗಳಿಗಾಗಿ ಒಟ್ಟು 418 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್‌ಎಎಫ್)ಯ 60 ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ 14 ತಂಡಗಳು, ಒಡಿಶಾ ಅಗ್ನಿಶಾಮಕ ಸೇವೆಯ 216 ತಂಡಗಳು ಹಾಗೂ ಒಡಿಶಾ ಅರಣ್ಯ ಅಭಿವೃದ್ಧಿ ನಿಗಮದ (ಒಎಫ್‌ಡಿಸಿ) 128 ಮರ ಕಡಿಯುವ ತಂಡಗಳು ಸೇರಿವೆ. ಹೆಚ್ಚುವರಿಯಾಗಿ, ಅಗ್ನಿಶಾಮಕ ಸೇವೆಯ 28 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಭಾರಿ ಮಳೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಅಪಾಯದಂಚಿನಲ್ಲಿರುವ ಗುಡ್ಡದ ಮೇಲಿನ ಹಾಗೂ ತಪ್ಪಲಿನ ಗ್ರಾಮಗಳ ನಿವಾಸಿಗಳನ್ನೂ ಸರ್ಕಾರ ಸ್ಥಳಾಂತರಿಸಿದೆ. ಗಂಜಾಂ, ಗಜಪತಿ, ರಾಯಗಡ, ಕಂಧಮಾಲ್, ಮಲ್ಕಂಗಿರಿ ಮತ್ತು ಕೊರಾಪುಟ್ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಬಹುದಾದ 941 ಗ್ರಾಮಗಳನ್ನು ಗುರುತಿಸಲಾಗಿದೆ.

ಚಂಡಮಾರುತದಿಂದಾಗಿ ರಸ್ತೆಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯನ್ನು ಎದುರಿಸಲು ಒಡಿಶಾ ಅರಣ್ಯ ಅಭಿವೃದ್ಧಿ ನಿಗಮವು 100 ತಂಡಗಳನ್ನು ನಿಯೋಜಿಸಿದೆ.

ಆಂಧ್ರಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತವು ಉತ್ತರ ಆಂಧ್ರದ ಜಿಲ್ಲೆಗಳ ಸಮೀಪ ಚಲಿಸುತ್ತಿರುವ ಹಿನ್ನೆಲೆಯಲ್ಲಿ, ಶ್ರೀಕಾಕುಳಂ, ಪಾರ್ವತೀಪುರಂ ಮನ್ಯಂ, ವಿಜಯನಗರಂ, ವಿಶಾಖಪಟ್ಟಣ, ಅನಕಾಪಲ್ಲಿ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲೂರಿ ಸೀತಾರಾಮ ರಾಜು ಮತ್ತು ಕೋನಸೀಮಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದ್ದು, ರೈತರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X