‘ನಿಮ್ಮನ್ನು ಯಾರು ಕಾಪಾಡುತ್ತಾರೆ?’; ಅಂದು ಮಾತು, ಇಂದು ಕಾರ್ಯರೂಪ, ಪೈಲಟ್ ಸ್ಮಿತ್ ಮಚ್ಚರ್ ಹಳೆಯ ವಿಡಿಯೋ ವೈರಲ್!

“ನಾವು ಆಕಾಶದಲ್ಲಿದ್ದಾಗ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ಕಾಪಾಡುತ್ತಾರೆ?” ಎಂದು ಫ್ಲೈದುಬೈನ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಒಂದು ವರ್ಷದ ಹಿಂದೆ ಹೇಳಿದ್ದ ಈ ಮಾತುಗಳು ಇದೀಗ..
flydubai pilot Smit Machchhars old video gains new meaning after his heroics
ಸ್ಮಿತ್ ಮಚ್ಚರ್ ಹಳೆಯ ವಿಡಿಯೋ ವೈರಲ್
Updated on: 

ನವದೆಹಲಿ: ಫ್ಲೈ ದುಬೈ ವಿಮಾನದಲ್ಲಿ ಸಹ ಪೈಲಟ್ ದಾಳಿಯನ್ನು ಎದುರಿಸಿ ಪ್ರಯಾಣಿಕರ ರಕ್ಷಿಸಿದ್ದ ಭಾರತ ಮೂಲದ ಪೈಲಟ್ ಸ್ಮಿತ್ ಮಚ್ಚರ್ ಹಳೆಯ ವಿಡಿಯೋವೊಂದು ಇದೀಗ ಫುಲ್ ವೈರಲ್ ಆಗುತ್ತಿದೆ.

ಹೌದು.. ಸಂದರ್ಶನವೊಂದರಲ್ಲಿ “ನಾವು ಆಕಾಶದಲ್ಲಿದ್ದಾಗ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ಕಾಪಾಡುತ್ತಾರೆ?” ಎಂದು ಫ್ಲೈದುಬೈನ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಒಂದು ವರ್ಷದ ಹಿಂದೆ ಹೇಳಿದ್ದ ಈ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದುಬೈ-ಟೆಲ್ ಅವೀವ್ ಮಾರ್ಗದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನೊಂದಿಗೆ ನಡೆದ ಗಂಭೀರ ಕಾಕ್‌ಪಿಟ್ ಘರ್ಷಣೆಯಲ್ಲಿ ಗಾಯಗೊಂಡ ಬಳಿಕ, ಸ್ಮಿತ್ ಮಚ್ಚರ್ ಅವರ ಹಳೆಯ ಪಾಡ್‌ಕಾಸ್ಟ್ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ.

2025ರ ಅಕ್ಟೋಬರ್‌ನಲ್ಲಿ ‘ಬೊನಾಫೈಡ್ ಬ್ಯಾಂಟರ್’ ಪಾಡ್‌ಕಾಸ್ಟ್‌ನಲ್ಲಿ ಝಲಕ್ ಮೆಹ್ತಾ ಅವರೊಂದಿಗೆ ಮಾತನಾಡಿದ್ದ ಸ್ಮಿತ್ ಮಚ್ಚರ್, ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ತರಬೇತಿ ಪಡೆದ ಸಿಬ್ಬಂದಿಯ ಮಹತ್ವದ ಕುರಿತು ಮಾತನಾಡಿದ್ದರು.

flydubai pilot Smit Machchhars old video gains new meaning after his heroics
‘ದಿನವಿಡೀ ಪ್ರಾರ್ಥನೆ, ಮೂಲಭೂತವಾದಿ, ಮಹಿಳೆಯರೊಂದಿಗೆ ಹ್ಯಾಂಡ್ ಶೇಕ್ ಕೂಡ ಮಾಡ್ತಿರ್ಲಿಲ್ಲ': ಫ್ಲೈದುಬೈ ಸಹೋದ್ಯೋಗಿ ಆಘಾತಕಾರಿ ಮಾಹಿತಿ!

ತರಬೇತಿಯ ಮಹತ್ವ ಹೇಳಿದ ಮಚ್ಚರ್

“ನಾವು ಆಕಾಶದಲ್ಲಿದ್ದಾಗ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ಕಾಪಾಡುತ್ತಾರೆ? ವಿಮಾನದಲ್ಲಿ ವೈದ್ಯರೊಬ್ಬರು ಇದ್ದರೆ ನೀವು ಅದೃಷ್ಟಶಾಲಿಗಳು. ಇಲ್ಲದಿದ್ದರೂ ಕ್ಯಾಬಿನ್ ಸಿಬ್ಬಂದಿಗೆ ತರಬೇತಿ ಇರುತ್ತದೆ. ಅವರು ಶಸ್ತ್ರಚಿಕಿತ್ಸೆ ಮಾಡುವಷ್ಟು ತರಬೇತಿ ಪಡೆದಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ ನಿಮ್ಮ ಜೀವ ಉಳಿಸಲು ಅವರು ನೆರವಾಗಬಹುದು,” ಎಂದು ಅವರು ಹೇಳಿದ್ದರು.

ನುಡಿದಂತೆ ನಡೆದ ಮಚ್ಚರ್!

ಬುಧವಾರ ನಡೆದ ಫ್ಲೈದುಬೈ ವಿಮಾನ ಘಟನೆಯ ಬಳಿಕ ಈ ಮಾತುಗಳಿಗೆ ಹೊಸ ಅರ್ಥ ಬಂದಿದೆ. ಎಫ್‌ಜೆ1073 ವಿಮಾನದ ಕ್ಯಾಪ್ಟನ್ ಆಗಿದ್ದ ಸ್ಮಿತ್ ಮಚ್ಚರ್ ಅವರು ಕಾಕ್‌ಪಿಟ್‌ನಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡು ಸಹಾಯಕ್ಕಾಗಿ ಕೂಗಿದ್ದರು. ಈ ವೇಳೆ ಸಹ ಪ್ರಯಾಣಿಕರು ಧಾವಿಸಿ ದಾಳಿಕೋರ ಪೈಲಟ್ ನನ್ನು ಹಿಡಿದುಕೊಂಡರು.

ವಿಮಾನ ಪತನಕ್ಕೆ ಸಂಚು

ಇಸ್ರೇಲಿ ಅಧಿಕಾರಿಗಳ ಪ್ರಕಾರ, ಓಮನ್ ಮೂಲದ ಸಹ ಪೈಲಟ್ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದು ಅದನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಯತ್ನಿಸಿದ್ದಾನೆ ಎಂಬ ಶಂಕೆ ಇದೆ.

ಘಟನೆ ವೇಳೆ ವಿಮಾನ ಸುಮಾರು 33,000 ಅಡಿ ಎತ್ತರದಿಂದ ಕೇವಲ 30 ಸೆಕೆಂಡ್‌ಗಳಲ್ಲಿ ಸುಮಾರು 17,000 ಅಡಿಗೆ ಕುಸಿದಿತ್ತು ಎಂದು ಅಸೋಸಿಯೇಟೆಡ್ ಪ್ರೆಸ್ ಉಲ್ಲೇಖಿಸಿರುವ ಪ್ರತ್ಯಕ್ಷದರ್ಶಿಗಳ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com