ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video

ಬಿಳಿ ಬಣ್ಣದ ಕಾರು OMRನಲ್ಲಿ ಸಾಗುತ್ತಿದ್ದ ವೇಳೆ, ರಸ್ತೆ ಮಧ್ಯಭಾಗದ ಸಮೀಪದ ಒಂದು ಭಾಗ ಏಕಾಏಕಿ ಕುಸಿದಿದೆ. ಪರಿಣಾಮ ಕಾರಿನ ಮುಂಭಾಗದ ಒಂದು ಚಕ್ರ ಗುಂಡಿಯಲ್ಲಿ ಸಿಲುಕಿಕೊಂಡಿದೆ.
Car plunges into sinkhole after OMR section caves in near Tidel Park in Chennai
ದಿಢೀರ್ ಕುಸಿತಗೊಂಡ ರಸ್ತೆ
Updated on: 

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ರಸ್ತೆಯೊಂದು ದಿಢೀರ್ ಕುಸಿದು ಕಾರೊಂದು ಉರುಳಿ ಬಿದ್ದಿರುವ ಘಟನೆ ವರದಿಯಾಗಿದೆ.

ಹೌದು.. ಚೆನ್ನೈನ ಟೈಡಲ್ ಪಾರ್ಕ್ ಸಮೀಪ ಗುರುವಾರ ಬೆಳಗ್ಗೆ ಹಳೆಯ ಮಹಾಬಲಿಪುರಂ ರಸ್ತೆ (OMR)ಯ ಒಂದು ಭಾಗ ಏಕಾಏಕಿ ಕುಸಿದು, ಚಲಿಸುತ್ತಿದ್ದ ಕಾರೊಂದು ಭಾರಿ ಗುಂಡಿಯೊಳಗೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ಟೈಡಲ್ ಪಾರ್ಕ್ ಸಮೀಪದ ತಿರುವನ್ಮಿಯೂರ್ ಎಂಆರ್‌ಟಿಎಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಇಲ್ಲಿ ಸುರಂಗ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಸಮೀಪವೇ ರಸ್ತೆ ಕುಸಿದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬಿಳಿ ಬಣ್ಣದ ಕಾರು OMRನಲ್ಲಿ ಸಾಗುತ್ತಿದ್ದ ವೇಳೆ, ರಸ್ತೆ ಮಧ್ಯಭಾಗದ ಸಮೀಪದ ಒಂದು ಭಾಗ ಏಕಾಏಕಿ ಕುಸಿದಿದೆ. ಪರಿಣಾಮ ಕಾರಿನ ಮುಂಭಾಗದ ಒಂದು ಚಕ್ರ ಗುಂಡಿಯಲ್ಲಿ ಸಿಲುಕಿಕೊಂಡಿದೆ. ಇದೇ ವೇಳೆ ಕಾರಿನ ಪಕ್ಕದಲ್ಲಿ ಎಂಟಿಸಿ ಬಸ್ ಹಾಗೂ ಮೆಟ್ರೋ ಬ್ಯಾರಿಕೇಡ್ ನಡುವೆ ಸಾಗಲು ಪ್ರಯತ್ನಿಸಿದೆ.

ಆಗ ಕಾರು ಏಕಾಏಕಿ ಬೃಹತ್ ಗುಂಡಿ ಬಿದ್ದು, ಸಂಪೂರ್ಣವಾಗಿ ತಲೆಕೆಳಗಾಗಿ ಬಿದ್ದಿದೆ. ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Car plunges into sinkhole after OMR section caves in near Tidel Park in Chennai
ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕ್ರೇನ್ ಮೂಲಕ ಕಾರು ತೆರವು ಕಾರ್ಯ

ಇನ್ನು ರಸ್ತೆ ಕುಸಿತದಿಂದ ಆ ಭಾಗದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಕಾರನ್ನು ಗುಂಡಿಯಿಂದ ಹೊರತೆಗೆಯಲು ಕ್ರೇನ್ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೊತೆಗೆ ಗುಂಡಿಯನ್ನು ಮುಚ್ಚುವ ಕಾಮಗಾರಿಯೂ ನಡೆಯುತ್ತಿದೆ. ಘಟನೆಯಿಂದ OMRನ ಈ ಪ್ರಮುಖ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಮೆಟ್ರೋ ಕಾಮಗಾರಿಯಿಂದಲೇ ರಸ್ತೆ ಕುಸಿತವೇ?

ಭೂಗತ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪವೇ ರಸ್ತೆ ಕುಸಿದಿರುವುದರಿಂದ, ಮೆಟ್ರೋ ಕಾಮಗಾರಿಗೂ ರಸ್ತೆ ಕುಸಿತಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ ರಸ್ತೆ ಕುಸಿತಕ್ಕೆ ಮೆಟ್ರೋ ಕಾಮಗಾರಿಯೇ ಕಾರಣವೇ ಎಂಬುದನ್ನು ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ (CMRL) ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.

ಪೊಲೀಸ್ ಮೂಲಗಳ ಪ್ರಕಾರ, ಮೆಟ್ರೋ ಕಾಮಗಾರಿ ಆರಂಭಿಸುವ ಮುನ್ನ ಭೂಗತ ನೀರಿನ ಸಂಪರ್ಕ ಸೇರಿದಂತೆ ವಿವಿಧ ಯುಟಿಲಿಟಿ ಲೈನ್‌ಗಳನ್ನು ಸ್ಥಳಾಂತರಿಸಲಾಗಿತ್ತು. ಹೀಗಾಗಿ ಮೆಟ್ರೋ ವಾಟರ್ ಪೈಪ್‌ಲೈನ್ ಒಡೆದು ನೀರು ಸೋರಿಕೆಯಾಗಿರುವುದರಿಂದ ರಸ್ತೆ ಕುಸಿದಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ರಸ್ತೆ ಕುಸಿತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಪರಿಶೀಲನೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com