ನಿತೀಶ್ ಕುಮಾರ್‌ಗಾಗಿ ‘ಒಂಬತ್ತು ಜನರ ಹತ್ಯೆ’ ಮಾಡಿಸಿದೆ: ಜೆಡಿ(ಯು) ಶಾಸಕ ಅನಂತ್ ಸಿಂಗ್ ಸ್ಫೋಟಕ ಹೇಳಿಕೆ!

“ನಿತೀಶ್ ಕುಮಾರ್ ಅವರ ರಾಜಕೀಯ ಜೀವನದ ಆರಂಭದಲ್ಲಿ ನಾನು ಅವರಿಗಾಗಿ ದೊಡ್ಡ ತ್ಯಾಗಗಳನ್ನು ಮಾಡಿದ್ದೇನೆ. ಪಕ್ಷದ ಬೇರೆ ಯಾವ ಸದಸ್ಯರೂ ಅವರಿಗಾಗಿ(ನಿತೀಶ್ ಕುಮಾರ್) ನಾನು ಮಾಡಿದಷ್ಟು ತ್ಯಾಗ ಮಾಡಿಲ್ಲ,”
JD(U)'S Anant Singh claims he got ‘nine people murdered’ for Nitish Kumar during early political days
ಶಾಸಕ ಅನಂತ್ ಸಿಂಗ್
Updated on: 

ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿ(ಯು) ವರಿಷ್ಠ ನಿತೀಶ್ ಕುಮಾರ್ ಅವರ ರಾಜಕೀಯ ಪಯಣದ ಆರಂಭದಲ್ಲಿ, ಅವರಿಗೆ ಸಹಾಯ ಮಾಡಲು ತಾನು 'ಒಂಬತ್ತು ಜನರನ್ನು ಹತ್ಯೆ' ಮಾಡಿಸಿದ್ದಾಗಿ ಮೊಕಾಮಾ ಜೆಡಿಯು ಬಂಡಾಯ ಶಾಸಕ ಅನಂತ್ ಸಿಂಗ್ ಶುಕ್ರವಾರ ಸ್ಪೋಟಕ ಹೇಳಿಕೆ ನೀಡಿದ್ದು, ಬಿಹಾರ ರಾಜಕೀಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದಾರೆ.

“ನಿತೀಶ್ ಕುಮಾರ್ ಅವರ ರಾಜಕೀಯ ಜೀವನದ ಆರಂಭದಲ್ಲಿ ನಾನು ಅವರಿಗಾಗಿ ದೊಡ್ಡ ತ್ಯಾಗಗಳನ್ನು ಮಾಡಿದ್ದೇನೆ. ಪಕ್ಷದ ಬೇರೆ ಯಾವ ಸದಸ್ಯರೂ ಅವರಿಗಾಗಿ(ನಿತೀಶ್ ಕುಮಾರ್) ನಾನು ಮಾಡಿದಷ್ಟು ತ್ಯಾಗ ಮಾಡಿಲ್ಲ,” ಎಂದು 'ಜನ್ ಸುರಾಜ್ ಪಕ್ಷ'ದ ಅಭ್ಯರ್ಥಿ ಅನುಜ್ ಸಿಂಗ್ ಪರ ಮತ ಯಾಚಿಸುವಾಗ ಅನಂತ್ ಸಿಂಗ್ ಹೇಳಿದ್ದಾರೆ.

ಪಾಟ್ನಾ ಪದವೀಧರರ ಕ್ಷೇತ್ರದಿಂದಜೆಡಿ(ಯು)ನ ನೀರಜ್ ಕುಮಾರ್ ವಿರುದ್ಧ ಅನಂತ್ ಸಿಂಗ್ ಕಣಕ್ಕಿಳಿದಿದ್ದಾರೆ. ಈ ಸ್ಥಾನಕ್ಕೆ ಅಕ್ಟೋಬರ್ 23 ರಂದು ಚುನಾವಣೆ ನಡೆಯಲಿದೆ. ಎಂಎಲ್‌ಸಿ(MLC) ಚುನಾವಣೆಯಲ್ಲಿ ಪಾಟ್ನಾ ಪದವೀಧರರ ಕ್ಷೇತ್ರದಿಂದ ನೀರಜ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಅನಂತ್, ಜೆಡಿ(ಯು)ಪಕ್ಷವನ್ನು ಟೀಕಿಸುತ್ತಿದ್ದಾರೆ.

JD(U)'S Anant Singh claims he got ‘nine people murdered’ for Nitish Kumar during early political days
ಮೈಸೂರು ದಸರಾ ವೇಳೆ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ: ಕಾಮುಕನ ಕೃತ್ಯ ಸಾಬೀತು; ನಾಳೆ ಶಿಕ್ಷೆ ಪ್ರಮಾಣ ಪ್ರಕಟ

“ನಾನು ಮಾಡಿದಷ್ಟು ತ್ಯಾಗವನ್ನು ಬೇರೆ ಯಾರು ಮಾಡಿದ್ದಾರೆ? ಆಗ ನಿತೀಶ್ ಕುಮಾರ್ ಏನೂ ಆಗಿರಲಿಲ್ಲ. ಅವರು ಸುಮ್ಮನೆ ಅಲೆದಾಡುತ್ತಿದ್ದರು. ಆ ಸಮಯದಲ್ಲಿ, ನಿತೀಶ್ ಕುಮಾರ್ ಅವರೊಂದಿಗೆ ಇದ್ದುಕೊಂಡೇ ನಾನು ಒಂಬತ್ತು ಜನರ ಕೊಲೆ ಮಾಡಿಸಿದ್ದೆ” ಎಂದು ಜನರ ಮುಂದೆ ಹೇಳಿದ್ದಾರೆ.

ಆದಾಗ್ಯೂ, ನಿತೀಶ್ ಕುಮಾರ್ ಅವರ ಮೇಲಿನ ತಮ್ಮ ನಿಷ್ಠೆ ಬದಲಾಗಿಲ್ಲ ಎಂದು ಪ್ರತಿಪಾದಿಸಿದ ಸಿಂಗ್, “ನಾನು ನಿತೀಶ್ ಕುಮಾರ್ ಅವರ ಕಟ್ಟಾ ಬೆಂಬಲಿಗ. ನಾನು ಎಂದಿಗೂ ಅವರ ನಾಯಕತ್ವವನ್ನು ಪ್ರಶ್ನಿಸಿಲ್ಲ” ಎಂದು ಹೇಳಿದ್ದಾರೆ. ಆದರೆ ಈ ಚುನಾವಣೆ ಪಕ್ಷದ ಆಧಾರದ ಮೇಲೆ ನಡೆಯುತ್ತಿಲ್ಲದಿರುವುದರಿಂದ ನಾನು ಅನುಜ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com