ದೇಶವನ್ನೇ ಬೆಚ್ಚಿ ಬೀಳಿಸಿದ್ದ 'Snake Scandal' ಆರೋಪಿಗಳಿಗೆ ಗಲ್ಲು ಶಿಕ್ಷೆ: ಪತಿಯನ್ನು ಹಾವಿನ ಕಡಿತದಿಂದ ಸತ್ತಂತೆ ತೋರಿಸಲು ಯತ್ನಿಸಿದ ಪತ್ನಿ ಮತ್ತು ಪ್ರಿಯಕರನಿಗೆ ಮರಣದಂಡನೆ

ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಈ ಹಾವು ಕಾಂಡ ಕೊಲೆ ಪ್ರಕರಣವನ್ನ ಅಪರೂಪದಲ್ಲಿಯೇ ಅತ್ಯಂತ ಅಪರೂಪದ ಪ್ರಕರಣವೆಂದು ಪರಿಗಣಿಸಿ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:
Meerut Snake Bite Murder: Court Sentences Wife And Lover To Death For Plotting Husband's Killing
ಗಂಡನ ಕತ್ತು ಹಿಸುಕಿ ಶವಕ್ಕೆ 10 ಬಾರಿ ಹಾವು ಕಡಿಸಿದ ಕಿರಾತಕಿಗೆ ಗಲ್ಲು ಶಿಕ್ಷೆOnline Desk
Updated on: 

ಮೀರತ್ (ಉತ್ತರ ಪ್ರದೇಶ): ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಈ ಹಾವು ಕಾಂಡ ಕೊಲೆ ಪ್ರಕರಣವನ್ನ ಅಪರೂಪದಲ್ಲಿಯೇ ಅತ್ಯಂತ ಅಪರೂಪದ ಪ್ರಕರಣವೆಂದು ಪರಿಗಣಿಸಿ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ. ಉತ್ತರ ಪ್ರದೇಶದ ಮೀರತ್ ನ್ಯಾಯಾಲಯವು ತನ್ನ ಪತಿಯನ್ನು ಕ್ರೂರವಾಗಿ ಕೊಲೆ ಮಾಡಿ, ಅದನ್ನು ಹಾವಿನ ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತ್ನಿ ರವಿತಾ ಮತ್ತು ಆಕೆಯ ಪ್ರಿಯಕರ ಅಮರ್‌ದೀಪ್‌ಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಮಹತ್ವದ ತೀರ್ಪು ನೀಡಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಯವೀರ್ ಸಿಂಗ್ ನಗರ್ ಅವರು ಈ ಪ್ರಕರಣವನ್ನು 'ಅಪರೂಪದಲ್ಲೇ ಅಪರೂಪದ ಪ್ರಕರಣ' ಎಂದು ಪರಿಗಣಿಸಿ ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಏಪ್ರಿಲ್ 12, 2025 ರಂದು ಮೀರತ್‌ನ ಅಕ್ಬರ್‌ಪುರ ಸಾದತ್ ಗ್ರಾಮದಲ್ಲಿ ಅಮಿತ್ ಕಶ್ಯಪ್ ಎಂಬುವವರು ತಮ್ಮ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಕೆಳಗೆ ಬದುಕಿದ್ದ ಹಾವೊಂದು ಸಿಲುಕಿಕೊಂಡಿತ್ತು ಮತ್ತು ದೇಹದ ಮೇಲೆ 10 ಹಾವಿನ ಕಡಿತದ ಗುರುತುಗಳಿದ್ದವು. ಪತ್ನಿ ರವಿತಾ ಇದು ಹಾವಿನ ಕಡಿತದಿಂದ ನಡೆದ ಸಾವು ಎಂದು ಬಿಂಬಿಸಿದ್ದಳು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅಮಿತ್ ಹಾವಿನ ಕಡಿತದಿಂದ ಸತ್ತಿಲ್ಲ, ಬದಲಿಗೆ ಅವರ ಮೂಗು ಮತ್ತು ಬಾಯಿಯನ್ನು ಬಲವಾಗಿ ಒತ್ತಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಆಘಾತಕಾರಿ ಸತ್ಯ ಹೊರಬಂದಿತು.

ಹಾಗಾದ್ರೆ, ಸಂಚು ಬಯಲಾಗಿದ್ದು ಹೇಗೆ?

ಪೊಲೀಸರ ತನಿಖೆಯ ವೇಳೆ ಪ್ರಿಯಕರ ಅಮರ್‌ದೀಪ್ ಕೇವಲ ₹1,000 ನೀಡಿ ಹಾವಾಡಿಗನಿಂದ ಹಾವನ್ನು ಖರೀದಿಸಿರುವುದು ಪತ್ತೆಯಾಯಿತು. ಅಮಿತ್‌ನನ್ನು ಕುತ್ತಿಗೆ ಹಿಸುಕಿ ಕೊಂದ ಬಳಿಕ, ಕೊಲೆಯನ್ನು ಮುಚ್ಚಿಹಾಕಲು ಹಾವಿನ ಬಾಲವನ್ನು ಅಮಿತ್‌ನ ಸೊಂಟದ ಕೆಳಗೆ ಒತ್ತಿ ಹಿಡಿದಿದ್ದರು. ಇದರಿಂದಾಗಿ ಆ ಹಾವು ಸತ್ತ ದೇಹಕ್ಕೆ ಹತ್ತು ಬಾರಿ ಕಡಿದಿತ್ತು.

Meerut Snake Bite Murder: Court Sentences Wife And Lover To Death For Plotting Husband's Killing
ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

ನ್ಯಾಯಾಲಯದ ಕಠಿಣ ತೀರ್ಪು

ಸುಮಾರು 17 ತಿಂಗಳುಗಳ ಕಾಲ ನಡೆದ ಸುದೀರ್ಘ ವಿಚಾರಣೆಯ ನಂತರ, 12 ಪ್ರಮುಖ ಸಾಕ್ಷ್ಯಗಳು ಮತ್ತು ಇಬ್ಬರ ನಡುವೆ ನಡೆದಿದ್ದ 500 ಕ್ಕೂ ಹೆಚ್ಚು ಫೋನ್ ಕರೆಗಳ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯವು ಇಬ್ಬರನ್ನೂ ದೋಷಿಗಳೆಂದು ಘೋಷಿಸಿತು. ಜೊತೆಗೆ, ಪವಿತ್ರವಾದ ವೈವಾಹಿಕ ಜೀವನಕ್ಕೆ ದ್ರೋಹ ಬಗೆದು, ಇಂತಹ ಅಮಾನುಷ ಮತ್ತು ವ್ಯವಸ್ಥಿತ ಸಂಚಿನ ಮೂಲಕ ಪತಿಯನ್ನು ಕೊಲೆ ಮಾಡಿರುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಏತನ್ಮಧ್ಯೆ, ಮೀರತ್‌ನಲ್ಲಿ ಕಳೆದ ಮೂರು ದಿನಗಳಲ್ಲಿ ನ್ಯಾಯಾಲಯವು ನೀಡಿರುವ ಎರಡನೇ ಮರಣದಂಡನೆ ತೀರ್ಪು ಇದಾಗಿದೆ. ಇದಕ್ಕೂ ಎರಡು ದಿನಗಳ ಮುನ್ನವೇ ಬ್ಲೂ ಡ್ರಮ್ ಹತ್ಯೆ ಪ್ರಕರಣದಲ್ಲೂ ಪತಿಯನ್ನು ಕೊಂದ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರನಿಗೆ ಇದೇ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com