'ಅನಗತ್ಯ, ಮಾಹಿತಿ ರಹಿತ': SIR ಕುರಿತು ಭಾರತದ ವಿರುದ್ಧ ಅಮೆರಿಕ ಸಂಸದೆಯ ವಾಗ್ದಾಳಿ ಖಂಡಿಸಿದ ವಿದೇಶಾಂಗ ಸಚಿವಾಲಯ!

ಎಸ್‍ಐಆರ್ ಮೂಲಕ 13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ `ತೆಗೆದುಹಾಕಲು' ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನನಗೆ ತೀವ್ರ ಕಳವಳವಿದೆ ಎಂದು ಜಯಪಾಲ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
‘Unwarranted, uninformed’: MEA condemns US Congresswoman's comments on SIR
ಪ್ರಮೀಳಾ ಜಯಪಾಲ್
Updated on: 

ನವದೆಹಲಿ: ದೇಶದ ಚುನಾವಣಾ ಪ್ರಕ್ರಿಯೆಯ ಕುರಿತು ಅಮೆರಿಕ ಸಂಸಂದೆ ಪ್ರಮೀಳಾ ಜಯಪಾಲ್ ಅವರ ಟೀಕೆಯನ್ನು ಭಾರತ ಶುಕ್ರವಾರ ಖಂಡಿಸಿದೆ. ಅವರ ಹೇಳಿಕೆ "ಅನಗತ್ಯ ಮತ್ತು ಮಾಹಿತಿರಹಿತ", ಅವರು ಪ್ರಜಾಪ್ರಭುತ್ವದ ಚುನಾವಣಾ ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಇಂದು ದೆಹಲಿಯಲ್ಲಿ ನಡೆದ ಎರಡು ವಾರಗಳಿಗೊಮ್ಮೆ ನಡೆಯುವ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಅವರು, ಅವರ ಹೇಳಿಕೆ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುತ್ತದೆ ಎಂದು ಟೀಕಿಸಿದ್ದಾರೆ.

"ಅಮೆರಿಕ ಸಂಸದೆಯ ಹೇಳಿಕೆ ಅನಗತ್ಯ ಮತ್ತು ಮಾಹಿತಿರಹಿತ. ಇದು ಪ್ರಜಾಪ್ರಭುತ್ವದ ಚುನಾವಣಾ ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡಿದಂತೆ ಮತ್ತು ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವ ವಿಧಾನವಾಗಿದೆ" ಎಂದು ಜೈಸ್ವಾಲ್ ಹೇಳಿದ್ದಾರೆ.

‘Unwarranted, uninformed’: MEA condemns US Congresswoman's comments on SIR
ಅಭಿಜೀತ್ ದೀಪ್ಕೆ, ನೇಹಾ ಬೋರಾ ವಶಕ್ಕೆ ಪಡೆದ ದೆಹಲಿ ಪೊಲೀಸರು; ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮುಂದುವರಿಕೆ!

ವಾಷಿಂಗ್ಟನ್ ರಾಜ್ಯವನ್ನು ಪ್ರತಿನಿಧಿಸುವ ಡೆಮಾಕ್ರಟಿಕ್ ಪಕ್ಷದ ನಾಯಕಿ ಜಯಪಾಲ್ ಅವರು, ಭಾರತದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.

ಎಸ್‍ಐಆರ್ ಮೂಲಕ 13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ `ತೆಗೆದುಹಾಕಲು' ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನನಗೆ ತೀವ್ರ ಕಳವಳವಿದೆ ಎಂದು ಜಯಪಾಲ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.

ಅಲ್ಲದೆ ಅಹಿಂಸಾತ್ಮಕ ಪ್ರತಿರೋಧ ಚಳವಳಿಗಳು ಅತ್ಯಗತ್ಯವಾಗಿದ್ದು ಭಾರತದಲ್ಲಿ ಪ್ರಜಾಪ್ರಭುತ್ವ ವಿರೋಧಿ ಪ್ರಯತ್ನಗಳನ್ನು ಎದುರಿಸಲು ಅಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿರುವ ಭಾರತೀಯರೊಂದಿಗೆ ನಾನು ನಿಲ್ಲುತ್ತೇನೆ. ಎಲ್ಲಾ ಕಡೆಗಳಲ್ಲಿಯೂ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಗತ್ಯ ಕೆಲಸವಾಗಿದೆ. ಅಮೆರಿಕದ ಜನರಂತೆ ಭಾರತೀಯ ಜನರೂ ಸಹ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅರ್ಹರಾಗಿದ್ದಾರೆ ಎಂದು ಪ್ರಮೀಳಾ ಜಯಪಾಲ್ ಹೇಳಿದ್ದರು.

ಅಮೆರಿಕ ಸಂಸದೆ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ

ಎಸ್‍ಐಆರ್ ಕುರಿತು ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ನೀಡಿರುವ ಹೇಳಿಕೆಯನ್ನು ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ತೀವ್ರವಾಗಿ ಖಂಡಿಸಿದ್ದು, ಇವು ದೇಶದ ಆಂತರಿಕ ವ್ಯವಹಾರಗಳಲ್ಲಿ ಅಂಗೀಕರಿಸಲಾಗದ ಹಸ್ತಕ್ಷೇಪ ಎಂದು ಹೇಳಿದ್ದಾರೆ.

ಭಾರತವು ಬಲವಾದ, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಿಕೊಂಡು ಬಂದ ಸುದೀರ್ಘ ಇತಿಹಾಸವನ್ನು ಹೊಂದಿರುವ ಜೀವಂತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂಸದೆಯವರ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅವರೊಂದಿಗೆ ರಚನಾತ್ಮಕವಾಗಿ ಮಾತನಾಡಲು ನಾವು ಯಾವಾಗಲೂ ಮುಕ್ತರಾಗಿದ್ದೇವೆ'ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com