ಸಹೋದರಿಗೆ ಪಾಸ್ ಕೊಡಲು ಹೋದ ಬಾಲಕಿ ಮೇಲೆ ಅಮಾನವೀಯ ವರ್ತನೆ: ಬಿಜೆಪಿ ನಾಯಕನ ಮೇಲೆ ಪೋಕ್ಸೋ ಕೇಸ್

ಇಂದೋರ್‌ನಲ್ಲಿ ನಡೆದ ಗರ್ಬಾ ನೃತ್ಯ ಕಾರ್ಯಕ್ರಮದ ವೇಳೆ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಹೊರಗೆ ತಳ್ಳಿದ ಮತ್ತು ಆಕೆಯೊಂದಿಗೆ ದುರ್ವರ್ತನೆ ತೋರಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಕಮಲ್ ಚೌಹಾಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Garba Event Shock: BJP Leader Booked Under POCSO For Misbehaving With Minor Girl In Indore
ಸಹೋದರಿಗೆ ಪಾಸ್ ಕೊಡಲು ಹೋದ ಬಾಲಕಿ ಮೇಲೆ ಅಮಾನವೀಯ ವರ್ತನೆOnline Desk
Updated on: 

ಇಂದೋರ್‌ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಗರ್ಬಾ ನೃತ್ಯ ಕಾರ್ಯಕ್ರಮದ ವೇಳೆ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಹೊರಗೆ ತಳ್ಳಿದ ಮತ್ತು ಆಕೆಯೊಂದಿಗೆ ದುರ್ವರ್ತನೆ ತೋರಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಕಮಲ್ ಚೌಹಾಣ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಇಂದೋರ್‌ನ ಹೀರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕೇಶ್ವರಿ ಗರ್ಬಾ ಮೈದಾನದಲ್ಲಿ ನವರಾತ್ರಿ ಆಚರಣೆ ವೇಳೆ ಈ ಘಟನೆ ಸಂಭವಿಸಿದೆ. ಬಾಲಕಿಯ ಅಕ್ಕ ಗರ್ಬಾ ನೃತ್ಯ ಮಾಡುತ್ತಿದ್ದು, ಆಕೆಗೆ ಪಾಸ್ ನೀಡಲು ಈ ಅಪ್ರಾಪ್ತೆ ಹೋದಾಗ ಗಲಾಟೆ ಆರಂಭವಾಗಿದೆ. ವೇದಿಕೆಯ ವ್ಯವಸ್ಥೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಮಲ್ ಚೌಹಾಣ್ ಬಾಲಕಿಯೊಂದಿಗೆ ವಾಗ್ವಾದ ನಡೆಸಿ, ಆಕೆಯನ್ನು ಸಾರ್ವಜನಿಕವಾಗಿ ತಳ್ಳಿ ಮಂಟಪದಿಂದ ಹೊರಹಾಕಿದ್ದಾರೆ.  ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಬಾಲಕಿ ತನಗೆ ಮುಟ್ಟದಂತೆ ಎಚ್ಚರಿಕೆ ನೀಡುತ್ತಿರುವುದು ಕಂಡುಬಂದಿದೆ.

Garba Event Shock: BJP Leader Booked Under POCSO For Misbehaving With Minor Girl In Indore
ಇಬ್ಬರು ಸಹೋದ್ಯೋಗಿಗಳ ಪತ್ನಿಯರೊಂದಿಗೆ ಅಕ್ರಮ ಸಂಬಂಧ ಆರೋಪ: ಮೇಜರ್ ನ್ನು ವಜಾಗೊಳಿಸಲು ಸೇನೆ ಮುಂದು!

ಮುಂದುವರೆದು, ಬಾಲಕಿ ಮತ್ತು ಆಕೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಹೀರಾನಗರ ಪೊಲೀಸರು ಬಿಜೆಪಿ ಮಂಡಲ ಅಧ್ಯಕ್ಷ ಕಮಲ್ ಚೌಹಾಣ್ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ) ಮತ್ತು ಸೆಕ್ಷನ್ 75 (ಲೈಂಗಿಕ ಕಿರುಕುಳ) ಅಡಿಯಲ್ಲಿ FIR ದಾಖಲಿಸಿದ್ದಾರೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅದೇ ವೇದಿಕೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕನ್ಯಾಪೂಜೆ ನೆರವೇರಿಸಿದ್ದರು. ಇದನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ನಾಯಕರ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದ್ದು, ಆರೋಪಿಯನ್ನು ಪಕ್ಷದಿಂದ ವಜಾಗೊಳಿಸುವಂತೆ ಆಗ್ರಹಿಸಿದೆ.

ಏತನ್ಮಧ್ಯೆ, ಆರೋಪಿ ಕಮಲ್ ಚೌಹಾಣ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಾಸ್ ಇಲ್ಲದೆ ಒಳಗೆ ಪ್ರವೇಶಿಸುವ ವಿಚಾರವಾಗಿ ಕುಟುಂಬದವರೊಂದಿಗೆ ವಾಗ್ವಾದ ನಡೆದಾಗ ಮಂಟಪದ ಜನಸಂದಣಿ ನಿಯಂತ್ರಿಸುವ ಉದ್ದೇಶವಿತ್ತೇ ಹೊರತು ಬಾಲಕಿಯೊಂದಿಗೆ ದುರ್ವರ್ತನೆ ತೋರುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com