ಬಾಲಿವುಡ್​ ನಟ ಟೈಗರ್​ ಶ್ರಾಫ್​ ಶೂಟಿಂಗ್ ಪ್ರಕರಣ: ನೇಪಾಳಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಆರೋಪಿಗಳು! Video

ಗುಂಡಿನ ದಾಳಿಯಲ್ಲಿ ಭಾಗಿಯಾದ ಮೂವರು ಪ್ರಮುಖ ಶಂಕಿತರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಕೋಟಾಕ್ಕೆ ಬರುತ್ತಿದ್ದಾರೆ ಎಂದು ತಿಳಿಯಿತು. ಈ ಮಾಹಿತಿಯ ಆಧಾರದ ಮೇಲೆ, ನಮ್ಮ ತಂಡ ಕೇವಲ 15 ನಿಮಿಷಗಳಲ್ಲಿ ಬಲೆ ಬೀಸಿ, ಇಡೀ ರೈಲನ್ನು ಕೂಲಂಕಷವಾಗಿ ಪರಿಶೀಲಿಸಿತು," ಎಂದು ಕೋಟಾ ಎಸ್‌ಪಿ ವಿವರಿಸಿದರು.
 three accused Arrest
ಬಂಧಿತ ಆರೋಪಿಗಳು
Updated on: 

ಮುಂಬಯಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಹರಿಯಾಣದ ರೆಹಾನ್ ಅಲಿಯಾಸ್ ಸುಕ್ಕಾ, ಬಿಹಾರದ ಹೃತಿಕ್ ಕುರ್ಮಿ ​​ಅಲಿಯಾಸ್ ರೋಷನ್ ಮತ್ತು ಒಬ್ಬ ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಆರೋಪಿಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಕೋಟಾ ಪೊಲೀಸ್ ವರಿಷ್ಠಾಧಿಕಾರಿ (SP) ತೇಜಸ್ವಿನಿ ಗೌತಮ್ ಸೋಮವಾರ ತಿಳಿಸಿದ್ದಾರೆ.

ಈ ಮೂವರು ಪ್ರಮುಖ ಶಂಕಿತರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಕೋಟಾಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಬೆಳಿಗ್ಗೆ ಪೊಲೀಸರಿಗೆ ಲಭಿಸಿತ್ತು ಎಂದು ಅವರು ಹೇಳಿದರು. ಇವರು ನೇಪಾಳಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದರು ಎಂಬ ಬಗ್ಗೆ ಮಾಹಿತಿ ಲಭಿಸಿತ್ತು. ಇಂದು ಬೆಳಿಗ್ಗೆ ನಮಗೆ ಮಾಹಿತಿ ಸಿಕ್ಕ ಕೂಡಲೇ ನಮ್ಮ ತಂಡವನ್ನು ಸಕ್ರಿಯಗೊಳಿಸಿದೆವು.

ಗುಂಡಿನ ದಾಳಿಯಲ್ಲಿ ಭಾಗಿಯಾದ ಮೂವರು ಪ್ರಮುಖ ಶಂಕಿತರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಕೋಟಾಕ್ಕೆ ಬರುತ್ತಿದ್ದಾರೆ ಎಂದು ತಿಳಿಯಿತು. ಈ ಮಾಹಿತಿಯ ಆಧಾರದ ಮೇಲೆ, ನಮ್ಮ ತಂಡ ಕೇವಲ 15 ನಿಮಿಷಗಳಲ್ಲಿ ಬಲೆ ಬೀಸಿ, ಇಡೀ ರೈಲನ್ನು ಕೂಲಂಕಷವಾಗಿ ಪರಿಶೀಲಿಸಿತು," ಎಂದು ಕೋಟಾ ಎಸ್‌ಪಿ ವಿವರಿಸಿದರು.

ಕೋಟಾ ನಗರ ಪೊಲೀಸರ ಈ ತ್ವರಿತ ಕಾರ್ಯಾಚರಣೆಯಿಂದಾಗಿ, ಗುಂಡಿನ ದಾಳಿಗೆ ಕಾರಣರಾದ ಮೂವರು ಶಂಕಿತರನ್ನು ನಾವು ಬಂಧಿಸಿದ್ದೇವೆ. ಶೀಘ್ರದಲ್ಲೇ ಇವರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸುತ್ತೇವೆ. ಹರಿಯಾಣದ ಸೋನಿಪತ್‌ನ ರೆಹಾನ್ ಅಲಿಯಾಸ್ ಸುಕ್ಕಾ, ಬಿಹಾರದ ಬೆಗುಸರಾಯ್‌ನ ಹೃತಿಕ್ ಕುರ್ಮಿ ​​ಅಲಿಯಾಸ್ ರೋಷನ್ (ಈತ ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ಮುಂಬೈನಲ್ಲಿ ವಾಸಿಸುತ್ತಿದ್ದ); ಮತ್ತು ಒಬ್ಬ ಅಪ್ರಾಪ್ತ ವಯಸ್ಕನನ್ನು ನಾವು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

 three accused Arrest
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣ: ರಾಜಸ್ಥಾನದ ಕೋಟಾದಲ್ಲಿ ಮೂವರ ಬಂಧನ! Video

ಗುಂಡು ಹಾರಿಸಿದವರು ಲಾರೆನ್ಸ್ ಬಿಷ್ಣೋಯ್‌ನೊಂದಿಗೆ ನಂಟು ಹೊಂದಿರುವ ಗ್ಯಾಂಗ್‌ಸ್ಟರ್ ಅನಿಲ್ ಪಂಡಿತ್‌ ಜೊತೆ ಸಂಬಂಧ ಹೊಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್‌ಪಿ ತೇಜಸ್ವಿನಿ ಗೌತಮ್ ದೃಢಪಡಿಸಿದರು.

ಇನ್ನೂ ಆರೋಪಿಗಳ ಬಳಿ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ. ಈ ಸಂಬಂಧ ವಿಚಾರಣೆ ನಡೆಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅವರು ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದರು. ಕೋಟಾ ನಗರ ಪೊಲೀಸರು ಅವರನ್ನು ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದರು ಎಂದು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ವಿಚಾರಣೆಯ ಪ್ರಕಾರ, ಅನಿಲ್ ಪಂಡಿತ್ ಎಂಬಾತ ರೆಹಾನ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ. ಅನಿಲ್ ಪಂಡಿತ್ ಲಾರೆನ್ಸ್ ಬಿಷ್ಣೋಯ್‌ನೊಂದಿಗೆ ನಂಟು ಹೊಂದಿದ್ದಾನೆ... ಅವರು ಪುಣೆ-ಜೈಪುರ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ (ಜನರಲ್ ಕಂಪಾರ್ಟ್‌ಮೆಂಟ್) ಪ್ರಯಾಣಿಸುತ್ತಿದ್ದ. ದೆಹಲಿಗೆ ತಲುಪಿ, ಅಲ್ಲಿಂದ ನೇಪಾಳಕ್ಕೆ ಪರಾರಿಯಾಗುವುದು ಯೋಜನೆಯಾಗಿತ್ತು.

ಮುಂಬೈ ಪೊಲೀಸರು ಈಗ ಆಗಮಿಸಿದ್ದು, ನಾವು ಆರೋಪಿಗಳನ್ನು ಅವರಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕೈಗೊಂಡಿದ್ದೇವೆ," ಎಂದು ಅವರು ತಿಳಿಸಿದರು. ಮುಂಬೈ ಪೊಲೀಸರ ಪ್ರಕಾರ, ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಜುಹುದಲ್ಲಿರುವ ಫುಟ್‌ಬಾಲ್ ಕ್ಲಬ್‌ನಿಂದ ಟೈಗರ್ ಶ್ರಾಫ್ ಹೊರಬರುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ. ಆರೋಪಿಗಳು ನಟನ ಕಾರಿನತ್ತ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ನಟನಿಗೆ ನೇರವಾಗಿ ಗುಂಡೇಟು ತಗುಲದಿದ್ದರೂ, ಅವರ ಚಾಲಕ ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com