ನಾಳೆ ಪ್ರಧಾನಿ ಜೊತೆಗೆ ಖರ್ಗೆ ಮಾತುಕತೆ: SIR, ಕ್ಷೇತ್ರ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ!

ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಈ ವಿಷಯಗಳ ಕುರಿತು ತಾವು ಪ್ರಧಾನಿ ಮೋದಿಯವರಿಗೆ ವೈಯಕ್ತಿಕವಾಗಿ ಪತ್ರ ಬರೆದಿರುವುದಾಗಿ ಹೇಳಿದರು.
Kharge
ಮಲ್ಲಿಕಾರ್ಜುನ ಖರ್ಗೆ
Updated on: 

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಕ್ಷೇತ್ರ ಮರುವಿಂಗಡಣೆ (delimitation) ಮತ್ತು ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ತಮ್ಮ ಕಳವಳಗಳನ್ನು ಅಕ್ಟೋಬರ್ 21 ರಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಈ ವಿಷಯಗಳ ಕುರಿತು ತಾವು ಪ್ರಧಾನಿ ಮೋದಿಯವರಿಗೆ ವೈಯಕ್ತಿಕವಾಗಿ ಪತ್ರ ಬರೆದಿರುವುದಾಗಿ ಹೇಳಿದರು. ಬುಧವಾರ ಪ್ರಧಾನಿಯವರೊಂದಿಗೆ ಮಾತನಾಡುವಾಗ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ (SIR) ಆಗಿರುವ ಹಾನಿ, ಕ್ಷೇತ್ರ ಮರುವಿಂಗಡಣೆಯ ಪರಿಣಾಮಗಳು ಮತ್ತು ಮಹಿಳಾ ಮೀಸಲಾತಿ ಜಾರಿಯಲ್ಲಿನ ವಿಳಂಬದ ಬಗ್ಗೆ ವಿವರವಾಗಿ ಚರ್ಚಿಸುವುದಾಗಿ ತಿಳಿಸಿದರು.

"ಪ್ರಧಾನಿಯವರಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದೇನೆ, ಅವರ ಬಳಿ ನನ್ನಿಂದ ಕಳುಹಿಸಲಾದ ಎರಡು ಪತ್ರಗಳಿವೆ."ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ (SIR) ಆಗಿರುವ ಹಾನಿ, ಅವರು ಕೈಗೊಂಡಿರುವ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯ ಪರಿಣಾಮಗಳು ಮತ್ತು ಮಹಿಳಾ ಮೀಸಲಾತಿಯ ವಿಷಯ ಸೇರಿದಂತೆ ಎಲ್ಲವನ್ನೂ ನಾಳೆ ಅವರಿಗೆ ವಿವರಿಸಲಿದ್ದೇನೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬರೆದ ಪತ್ರದ ಕುರಿತು ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಖರ್ಗೆ ಈ ರೀತಿ ಹೇಳಿದರು.

ಸಂಸತ್ತಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ತಿದ್ದುಪಡಿ ಮಸೂದೆ ಮಂಡನೆಗೂ ಮುನ್ನ ಸರ್ವಪಕ್ಷಗಳ ಸಭೆ ಕರೆಯುವಂತೆ ಕೋರಿ ಅಕ್ಟೋಬರ್ 16 ರಂದು ಖರ್ಗೆ ಬರೆದ ಪತ್ರಕ್ಕೆ ಉತ್ತರಿಸಿ ರಿಜಿಜು ಪತ್ರ ಬರೆದಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಲಿಖಿತ ಸಂವಹನಗಳ ಮೂಲಕ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುವ ಮೂಲಕ, ಪ್ರಸ್ತಾವಿತ ಶಾಸನದ ವಿಷಯದಲ್ಲಿ ಸರ್ಕಾರವು ಕಾಂಗ್ರೆಸ್‌ನ ಸಹಕಾರವನ್ನು ಪದೇ ಪದೇ ಕೋರಿತ್ತು ಎಂದು ರಿಜಿಜು ತಿಳಿಸಿದ್ದಾರೆ.

Kharge
ಬರಗಾಲ ವಿಷಯಾಂತರ ಮಾಡಲು ಸರ್ಕಾರ SIR, ಸ್ಟಿಂಗ್ ಆಪರೇಷನ್‌ ಬಳಸುತ್ತಿದೆ: R ಅಶೋಕ್ (ಸಂದರ್ಶನ)

ಪದೇ ಪದೇ ವಿನಂತಿಸಿದರೂ ಕಾಂಗ್ರೆಸ್ ಚರ್ಚೆಗೆ ದಿನಾಂಕಗಳನ್ನು ನೀಡಿಲ್ಲ. ಇದರಿಂದಾಗಿ ಡಿಎಂಕೆ, ಸಮಾಜವಾದಿ ಪಕ್ಷ, ವೈಎಸ್‌ಆರ್‌ಸಿಪಿ, ಎನ್‌ಸಿಪಿ, ಶಿವಸೇನೆ (ಯುಬಿಟಿ), ಎಐಎಂಐಎಂ ಮತ್ತು ಬಿಜೆಡಿ ಸೇರಿದಂತೆ ಇತರ ಪಕ್ಷಗಳೊಂದಿಗೆ ಸರ್ಕಾರ ಸಮಾಲೋಚಿಸಬೇಕಾಯಿತು ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com