ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ ಶಂಕಿತರು ಸೂರತ್ ನಿಲ್ದಾಣದಲ್ಲಿ ರೈಲು ಹತ್ತಲು ಧಾವಂತ; CCTVಯಲ್ಲಿ ದೃಶ್ಯ ಸೆರೆ; Video

ಮುಂಬೈನಿಂದ ಸುಮಾರು 275 ಕಿ.ಮೀ. ದೂರದಲ್ಲಿರುವ ಸೂರತ್‌ಗೆ ಶಂಕಿತರು ಟ್ಯಾಕ್ಸಿಯಲ್ಲಿ ರಸ್ತೆ ಮಾರ್ಗವಾಗಿ ಪ್ರಯಾಣಿಸಿ, ನಿನ್ನೆ ನಸುಕಿನ ಜಾವ ಸುಮಾರು 1.30ರ ವೇಳೆಗೆ ಜೈಪುರಕ್ಕೆ ತೆರಳುವ ರೈಲನ್ನು ಹತ್ತಿದ್ದಾರೆ ಎಂದು ಅಧಿಕಾರಿ ಸೋಮವಾರ ತಿಳಿಸಿದ್ದಾರೆ.
New CCTV footage has purportedly captured two suspects in the Tiger Shroff firing case rushing to board a Pune-Jaipur express train at Surat station in Gujarat
ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣ: ಸೂರತ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಹತ್ತಲು ಧಾವಿಸಿದ ಶಂಕಿತರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Updated on: 

ಸೂರತ್: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಶಂಕಿತರು ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ಪುಣೆ-ಜೈಪುರ ಎಕ್ಸ್‌ಪ್ರೆಸ್ ರೈಲು ಹತ್ತಲು ಧಾವಿಸುತ್ತಿರುವ ದೃಶ್ಯಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿವೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈನಲ್ಲಿ ನಟನ ಮೇಲೆ ಗುಂಡಿನ ದಾಳಿ ನಡೆದ ಕೆಲವೇ ಗಂಟೆಗಳ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮುಂಬೈನಿಂದ ಸುಮಾರು 275 ಕಿ.ಮೀ. ದೂರದಲ್ಲಿರುವ ಸೂರತ್‌ಗೆ ಶಂಕಿತರು ಟ್ಯಾಕ್ಸಿಯಲ್ಲಿ ರಸ್ತೆ ಮಾರ್ಗವಾಗಿ ಪ್ರಯಾಣಿಸಿ, ನಿನ್ನೆ ನಸುಕಿನ ಜಾವ ಸುಮಾರು 1.30ರ ವೇಳೆಗೆ ಜೈಪುರಕ್ಕೆ ತೆರಳುವ ರೈಲನ್ನು ಹತ್ತಿದ್ದಾರೆ ಎಂದು ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಪಶ್ಚಿಮ ರೈಲ್ವೆಯ ವಡೋದರಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ (SP) ಅಭಯ್ ಸೋನಿ, ಶಂಕಿತರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಮುಂಬೈ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಗುಜರಾತ್‌ನ ಸರ್ಕಾರಿ ರೈಲ್ವೆ ಪೊಲೀಸರು (GRP) ಹಾಗೂ ರೈಲ್ವೆ ರಕ್ಷಣಾ ಪಡೆ (RPF) ಸಹಕರಿಸಿವೆ ಎಂದು ಹೇಳಿದರು.

New CCTV footage has purportedly captured two suspects in the Tiger Shroff firing case rushing to board a Pune-Jaipur express train at Surat station in Gujarat
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: 'ಸಲ್ಮಾನ್ ಖಾನ್ ಕ್ಷಮೆಯಾಚನೆಗೆ ಬಿಷ್ಣೋಯಿ ಸಮುದಾಯ ಆಗ್ರಹ!

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದ ಶಂಕಿತರನ್ನು ಪತ್ತೆಹಚ್ಚಲು ನಾವು ಮುಂಬೈ ಪೊಲೀಸರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿದ್ದೇವೆ. ಬಳಿಕ ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಅವರನ್ನು ತಡೆದು ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದರು.

ಸೂರತ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಮಹಾರಾಷ್ಟ್ರ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ. ಅದರಲ್ಲಿ ಇಬ್ಬರು ಶಂಕಿತರು ಚಲಿಸುತ್ತಿದ್ದ ಪುಣೆ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯನ್ನು ಹತ್ತಲು ಪ್ಲಾಟ್‌ಫಾರ್ಮ್‌ನಲ್ಲಿ ಓಡುತ್ತಿರುವುದು ಕಂಡುಬಂದಿದೆ ಎಂದು ಎಸ್‌ಪಿ ಹೇಳಿದರು.

New CCTV footage has purportedly captured two suspects in the Tiger Shroff firing case rushing to board a Pune-Jaipur express train at Surat station in Gujarat
Watch | ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಆಟೋ ಡ್ರೈವರ್ ಹೇಳಿದ್ದಿಷ್ಟು...

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪ ಎದುರಿಸುತ್ತಿರುವ ಮೂವರನ್ನು ನಿನ್ನೆ ಬೆಳಗ್ಗೆ ಕೋಟಾ ರೈಲು ನಿಲ್ದಾಣದಲ್ಲಿ ರೈಲಿನಿಂದ ವಶಕ್ಕೆ ಪಡೆಯಲಾಗಿದೆ. ಮುಂಬೈನಿಂದ ನೇಪಾಳಕ್ಕೆ ತೆರಳುತ್ತಿರಬಹುದು ಎನ್ನಲಾದ ಆರೋಪಿಗಳನ್ನು ಕೇವಲ 15 ನಿಮಿಷಗಳ ತ್ವರಿತ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಬಿಹಾರದ ಬೇಗುಸರಾಯ್ ಮೂಲದ ರಿತಿಕ್ ಅಲಿಯಾಸ್ ರೋಷನ್ ಮತ್ತು ಹರಿಯಾಣದ ಸೋನಿಪತ್ ಮೂಲದ ರೆಹಾನ್ ಸೇರಿದಂತೆ ಮೂವರನ್ನು ಬೆಳಗ್ಗೆ 10.17ಕ್ಕೆ ಪುಣೆ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕೋಟಾದಲ್ಲಿ ನಿಲುಗಡೆಯಾದಾಗ ಅದರ ಸಾಮಾನ್ಯ ಬೋಗಿಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಕೋಟಾದ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ.

ಭಾನುವಾರ ಸಂಜೆ ಜನನಿಬಿಡ ಪ್ರದೇಶದಲ್ಲಿ ನಡೆದ ಈ ಗುಂಡಿನ ದಾಳಿಯ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ಜನಪ್ರಿಯ ‘ವಾರ್’ ಚಿತ್ರದ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಅತ್ಯಂತ ಸಮೀಪದಿಂದ ಗುಂಡು ಹಾರಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಹಿರಿಯ ನಟ ಜಾಕಿ ಶ್ರಾಫ್ ಅವರ ಪುತ್ರನಾಗಿರುವ 36 ವರ್ಷದ ಟೈಗರ್ ಶ್ರಾಫ್ ಈ ದಾಳಿಯಿಂದ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಆದರೆ, ಅವರ ಕಾರಿನ ಚಾಲಕ ಮತ್ತು ಘಟನೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್‌ಬಾಲ್ ಕ್ಲಬ್‌ನಿಂದ ಟೈಗರ್ ಶ್ರಾಫ್ ಮೊನ್ನೆ ಭಾನುವಾರ ರಾತ್ರಿ ಕಾರಿನಲ್ಲಿ ಹೊರಡುತ್ತಿದ್ದಾಗ ಈ ಘಟನೆ ನಡೆದಿದೆ.

New CCTV footage has purportedly captured two suspects in the Tiger Shroff firing case rushing to board a Pune-Jaipur express train at Surat station in Gujarat
ಟೈಗರ್ ಶ್ರಾಫ್‌ ಮೇಲೆ ಶೂಟ್ ಔಟ್ ಕೇಸ್: ಮೂವರು ಆರೋಪಿಗಳಲ್ಲಿ ಯಾರೊಬ್ಬರೂ ಅಪ್ರಾಪ್ತರಲ್ಲ- ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷ್ಟನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com