ವಿವಾದಕ್ಕೆ ಕಾರಣವಾದ ರಿಹಾನ್ ವಾದ್ರಾ ಫೋಟೋ: ಪ್ರಜಾಪ್ರಭುತ್ವದ ಕಗ್ಗೊಲೆ; ಬಿಕಾನೇರ್ ಹೌಸ್ ವಿರುದ್ಧ ಪ್ರಿಯಾಂಕಾ ಆಕ್ರೋಶ!

'ನೋ ಐಡಿಯಾ ಈಸ್ ಫೈನಲ್' ಎಂಬ ಶೀರ್ಷಿಕೆಯಡಿ ಈ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರದಿಂದ ಇದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಬೇಕಿತ್ತು. ಆದರೆ ಪ್ರದರ್ಶನ ಶುರುವಾಗುವ ಮೊದಲೇ ರಿಹಾನ್ ವಾದ್ರಾ ಫೋಟೋಗಳನ್ನು ತೆಗೆದು ಹಾಕಲಾಗಿದೆ.
 Raihan Vadra And priyanka gandhi
ರಿಹಾನ್ ವಾದ್ರಾ ಮತ್ತು ಪ್ರಿಯಾಂಕಾ ಗಾಂಧಿ
Updated on: 

ದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಆಗಿರುವ ಪ್ರಿಯಾಂಕಾ ಗಾಂಧಿ ಅವರ ಪುತ್ರ, ದೃಶ್ಯ ಕಲಾವಿದ ಹಾಗೂ ಫೋಟೋಗ್ರಾಫರ್ ರಿಹಾನ್ ವಾದ್ರಾ ಅವರ ಕಲಾ ಪ್ರದರ್ಶನದ ಫೋಟೋಗಳನ್ನು ಹೊಸ ದೆಹಲಿಯ ಪ್ರತಿಷ್ಠಿತ 'ಬಿಕಾನೇರ್ ಹೌಸ್' ಆಡಳಿತ ಮಂಡಳಿಯು ತೆಗೆದುಹಾಕಿದ್ದು, ಹೊಸ ವಿವಾದಕ್ಕೆ ನಾಂದಿ ಹಾಡಿದೆ.

'ನೋ ಐಡಿಯಾ ಈಸ್ ಫೈನಲ್' ಎಂಬ ಶೀರ್ಷಿಕೆಯಡಿ ಈ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರದಿಂದ ಇದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಬೇಕಿತ್ತು. ಆದರೆ ಪ್ರದರ್ಶನ ಶುರುವಾಗುವ ಮೊದಲೇ ರಿಹಾನ್ ವಾದ್ರಾ ಫೋಟೋಗಳನ್ನು ತೆಗೆದು ಹಾಕಲಾಗಿದೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೇಹಾನ್ ವಾದ್ರಾ, ಇಂದು ಮಧ್ಯಾಹ್ನ 3:30ರ ಸುಮಾರಿಗೆ ನಮಗೆ ಮಾಹಿತಿ ಬಂತು, ಒಂದು ವೇಳೆ ಸಂಜೆ 5 ಗಂಟೆಯೊಳಗೆ ಫೋಟೋಗಳನ್ನು ತೆಗೆದುಹಾಕದಿದ್ದರೆ ಪ್ರದರ್ಶನವನ್ನು ರದ್ದುಗೊಳಿಸಲಾಗುವುದು.

ಇಂತಹ ಫೋಟೋಗಳ ಪ್ರದರ್ಶನಕ್ಕೆ ಇದು ಸರಿಯಾದ ಸಮಯವಲ್ಲ ಎಂದು ಆಯೋಜಕರು ಹೇಳಿದರು ಎಂದು ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ಬಿಕಾನೇರ್ ಹೌಸ್ ಆಡಳಿತವು ಎರಡು ತ್ರಿವರ್ಣ ಧ್ವಜದ ಫೋಟೋಗಳನ್ನು ತೆಗೆದುಹಾಕಲು ಸೂಚನೆ ನೀಡಿದ್ರು, ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ ಎಂದು ರೀಹಾನ್ ವಾದ್ರ ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

 Raihan Vadra And priyanka gandhi
ಮಲೇಷ್ಯಾ ಪ್ರಧಾನಿಯೊಂದಿಗೆ ಉಪಹಾರ ಸಭೆ ನಡೆಸಿದ ರಾಹುಲ್, ಪ್ರಿಯಾಂಕಾ ಗಾಂಧಿ ವಾದ್ರಾ! Video

ಈ ಚಿತ್ರಗಳ ಮೂಲಕ ಯಾವುದೇ ರಾಜಕೀಯ ಸಂದೇಶವನ್ನು ರವಾನಿಸುವ ಉದ್ದೇಶ ತಮಗಿರಲಿಲ್ಲ, ಬದಲಾಗಿ ಕಳೆದ ಆರು ತಿಂಗಳಲ್ಲಿ ನಡೆದ ಪ್ರತಿಭಟನೆಗಳನ್ನು ದಾಖಲಿಸಿದ್ದೆ ಎಂದು ಅವರು ಸ್ಪಷ್ಟಪಡಿಸಿದರು. ಪ್ರದರ್ಶನಕ್ಕೆ ಸಂಬಂಧಿಸಿದ ವಿವರವಾದ ಪ್ರಸ್ತಾವನೆ ಮತ್ತು ವಿನ್ಯಾಸವನ್ನು ತಾನು ಮೊದಲೇ ಹಂಚಿಕೊಂಡಿದ್ದೆ ಎಂದೂ ಅವರು ಹೇಳಿದರು.

ಒಬ್ಬ ಭಾರತೀಯ ಕಲಾವಿದನಾಗಿ ಇದು ನನ್ನ ಕರ್ತವ್ಯ ಎಂದು ನಾನು ಭಾವಿಸಿದೆ... ಅವರು ಕಲಾವಿದರ ಕೃತಿಗಳ ಮೇಲೆ ಸೆನ್ಸಾರ್‌ಶಿಪ್ ಹೇರುತ್ತಿದ್ದಾರೆ, ಅವರಿಗೆ ಯಾವುದರ ಬಗ್ಗೆ ಭಯವಿದೆಯೋ ತಿಳಿಯುತ್ತಿಲ್ಲ. ಅವರು ಭಾರತೀಯ ಧ್ವಜದ ಚಿತ್ರವನ್ನೂ ತೆಗೆದುಹಾಕುವ ಮಟ್ಟಕ್ಕೆ ಹೋದರು ಎಂದು ರಿಹಾನ್ ಹೇಳಿದರು.

ಆ ಕಲಾಕೃತಿಗಳಲ್ಲಿ ವನ್ಯಜೀವಿ ಫೋಟೋಗ್ರಾಫಿ, ಅಬ್​ಸ್ಟ್ರಾಕ್ಟ್ ಆರ್ಟ್ ಮತ್ತು ಭಾರತದ ಇತ್ತೀಚಿನ ಯುವ ಪ್ರತಿಭಟನೆಗೆ ಸಂಬಂಧಿಸಿದ ಫೋಟೋಗಳಿದ್ದವು. ಸದ್ಯಕ್ಕೆ ಉಳಿದಿರುವ ಕೆಲವೇ ಕೆಲವು ಕಲಾಕೃತಿಗಳೊಂದಿಗೆ ಪ್ರದರ್ಶನವು ಮುಂದುವರಿಯಲಿದೆ. ಆದರೆ, ಈ ಪ್ರತಿಭಟನೆಗಳ ಸಂಪೂರ್ಣ ಚಿತ್ರ ಸಂಗ್ರಹವನ್ನು ಸಾರ್ವಜನಿಕರಿಗೆ ಪ್ರದರ್ಶಿಸಲು ಶೀಘ್ರದಲ್ಲೇ ಮತ್ತೊಂದು ಸೂಕ್ತ ಸ್ಥಳವನ್ನು ಹುಡುಕುವುದಾಗಿ ರೇಹಾನ್ ವಾದ್ರಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಛಾಯಾಚಿತ್ರಗಳಲ್ಲಿ ಯಾವುದೇ ಅವಹೇಳನಕಾರಿ ಅಂಶಗಳಿರಲಿಲ್ಲ ಮತ್ತು ಅವು ಕೇವಲ ನಡೆದ ಘಟನೆಗಳ ದೃಶ್ಯ ದಾಖಲೆಗಳಷ್ಟೇ ಆಗಿದ್ದವು ಎಂದು ಹೇಳಿದರು. ಅಲ್ಲದೆ, ಇತರ ಕಲಾವಿದರೂ ಇದೇ ರೀತಿಯ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಸಿದರು. "ಇದು ಇನ್ನು ಪ್ರಜಾಪ್ರಭುತ್ವವಾಗಿ ಉಳಿದಿಲ್ಲ. ಇಂದು ಇವರ ಸರದಿ, ನಾಳೆ ಇನ್ನೊಬ್ಬ ಕಲಾವಿದನ ಸರದಿ ಬರಬಹುದು," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com