ಇಂದಿರಾ ಗಾಂಧಿ ಹತ್ಯೆ ಉಲ್ಲೇಖಿಸಿ ಪ್ರಧಾನಿ ಮೋದಿ ಹತ್ಯೆಗೆ ಸಂಚು: ರ‍್ಯಾಪಿಡೋ ರೈಡರ್ ವೇಷದಲ್ಲಿದ್ದ ಜೈಶ್ ಉಗ್ರನ ಹೆಡೆಮುರಿ ಕಟ್ಟಿದ ಎಟಿಎಸ್!

ಮುಂಬೈನ ಮಾಹಿಮ್‌ನಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ, ನಿಷೇಧಿತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನನ್ನು ಬಂಧಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
JeM-Linked Terror Suspect Posing as Rapido Rider Arrested in Mumbai for Threat to PM Modi
ರ‍್ಯಾಪಿಡೋ ರೈಡರ್ ವೇಷದಲ್ಲಿದ್ದ ಜೈಶ್ ಉಗ್ರನ ಹೆಡೆಮುರಿ ಕಟ್ಟಿದ ಎಟಿಎಸ್Online Desk
Updated on: 

ಮುಂಬೈ (ಮಹಾರಾಷ್ಟ್ರ): ಮುಂಬೈನ ಮಾಹಿಮ್‌ನಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ, ನಿಷೇಧಿತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಕುರಿತಾದ ಪೋಸ್ಟ್‌ ಅಡಿಯಲ್ಲಿ ಇಂದಿರಾ ಗಾಂಧಿ ಹತ್ಯೆಯನ್ನು ಉಲ್ಲೇಖಿಸಿ ವಿವಾದಾತ್ಮಕ ಕಮೆಂಟ್ ಮಾಡಿದ್ದ 33 ವರ್ಷದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನನ್ನು ಬಂಧಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ರ‍್ಯಾಪಿಡೋ ರೈಡರ್ ವೇಷ

ಬಂಧಿತ ಆರೋಪಿ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಮುಂಬೈನಲ್ಲಿ ನೆಪಕ್ಕೆ ರ‍್ಯಾಪಿಡೋ ಬೈಕ್ ರೈಡರ್ ಆಗಿ ಹಾಗೂ ಸುಗಂಧ ದ್ರವ್ಯ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಆದರೆ ಇದು ಆತನ ಮೂಲ ಉದ್ದೇಶಗಳಿಗೆ ಕೇವಲ ಒಂದು ಮುಸುಕಾಗಿತ್ತು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಇದರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಯ ವೇಳೆ ಉಂಟಾಗಿದ್ದ ಭದ್ರತಾ ಲೋಪಕ್ಕೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಸುದ್ದಿಯೊಂದರ ಅಡಿಯಲ್ಲಿ ಆತ ಸೆಪ್ಟೆಂಬರ್ 8 ರಂದು ಕಮೆಂಟ್ ಮಾಡಿದ್ದ. ಅದರಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯನ್ನು ಉಲ್ಲೇಖಿಸಿ, ಮೋದಿ ಅವರ ಹತ್ಯೆಗೆ ಪ್ರಚೋದನೆ ನೀಡುವಂತಹ ಸಂದೇಶವನ್ನು ಆತ ಬರೆದಿದ್ದ ಎಂದು ಎಟಿಎಸ್ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೈಶ್ ಉಗ್ರರೊಂದಿಗೆ ಲಿಂಕ್..

ಈತ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೂಪ್‌ಗಳನ್ನು ಸೃಷ್ಟಿಸಿ ಯುವಕರನ್ನು ಸೇರಿಸುತ್ತಿದ್ದ. ಅದರಲ್ಲೂ, ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಪ್ರಚೋದನಾತ್ಮಕ ಭಾಷಣಗಳ ಆಡಿಯೋ ಕ್ಲಿಪ್‌ಗಳನ್ನು ಆತ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ. ಅದರಂತೆ, ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ಎಟಿಎಸ್‌ನ ಕಾಲಾಚೌಕಿ ಘಟಕವು ಸಿಕ್ಕ ಖಚಿತ ಮಾಹಿತಿ ಮೇರೆಗೆ ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ತದನಂತರ ಆತನನ್ನು ಮಾಹಿಮ್ ಪೊಲೀಸರಿಗೆ ಒಪ್ಪಿಸಲಾಗಿದ್ದು, ಸದ್ಯ ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 196(1) ರ ಅಡಿಯಲ್ಲಿ (ಕೋಮು ಸೌಹಾರ್ದತೆಗೆ ಧಕ್ಕೆ ತರುವುದು ಮತ್ತು ದ್ವೇಷ ಬಿತ್ತುವುದು) ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

JeM-Linked Terror Suspect Posing as Rapido Rider Arrested in Mumbai for Threat to PM Modi
ಹರಿಯಾಣದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ Himanshu Bhau ಅಮೆರಿಕಾದಲ್ಲಿ ಬಂಧನ..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com