ಹೋಟೆಲ್ ರೂಮ್ ಹೊರಗೆ ಕುಸಿದು ಬಿದ್ದು ನವವಿವಾಹಿತೆ ಸಾವು: CCTVಯಲ್ಲಿ ಭೀಕರ ದೃಶ್ಯ ಸೆರೆ! ಕೊಲೆ ಎಂದ ಕುಟುಂಬಸ್ಥರು

ಮುಸ್ಕಾನ್ ಎಂದು ಗುರುತಿಸಲಾದ ಈ ಮಹಿಳೆಗೆ ಮದುವೆಯಾಗಿ ಸುಮಾರು ನಾಲ್ಕು ತಿಂಗಳಷ್ಟೇ ಆಗಿತ್ತು. ಘಟನೆ ನಡೆದಾಗ ಅವರು ತಮ್ಮ ಪತಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಮೃತಳ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
The woman, identified as Muskan
ನವವಿವಾಹಿತೆ ಮುಸ್ಕಾನ್
Updated on: 

ಝಾನ್ಸಿ: 28 ವರ್ಷದ ನವವಿವಾಹಿತೆ ಹೋಟೆಲ್ ರೂಮ್ ಬಾಗಿಲಿಗೆ ಎಂಟ್ರಿ ಆಗುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ನೆಲಕ್ಕೆ ಕುಸಿದು ಬೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಸ್ಕಾನ್ ಎಂದು ಗುರುತಿಸಲಾದ ಈ ಮಹಿಳೆಗೆ ಮದುವೆಯಾಗಿ ಸುಮಾರು ನಾಲ್ಕು ತಿಂಗಳಷ್ಟೇ ಆಗಿತ್ತು. ಘಟನೆ ನಡೆದಾಗ ಅವರು ತಮ್ಮ ಪತಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಮೃತಳ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಈ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯನ್ನು ಕಾಯುತ್ತಿದ್ದಾರೆ.ಸೋಮವಾರ ಬೆಳಿಗ್ಗೆ ಸುಮಾರು 10:50 ರ ಸುಮಾರಿಗೆ ಝಾನ್ಸಿಯ 'ರಿಷಭ್ ಹೋಟೆಲ್'ನಲ್ಲಿ ಈ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 47 ಸೆಕೆಂಡುಗಳ ಸಿಸಿಟಿವಿ ದೃಶ್ಯಾವಳಿಯಲ್ಲಿ, ಮೂವರು ವ್ಯಕ್ತಿಗಳು ಹೋಟೆಲ್ ಕಾರಿಡಾರ್‌ನಲ್ಲಿ ಕೊಠಡಿಯೊಂದರ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ.

ಪತಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಮೊದಲು ಕೊಠಡಿಯೊಳಗೆ ಪ್ರವೇಶಿಸುತ್ತಾರೆ, ಅವರ ಹಿಂದೆಯೇ ಮುಸ್ಕಾನ್ ಬರುತ್ತಾರೆ. ಅವರು ಕೊಠಡಿಯ ಬಾಗಿಲ ಬಳಿ ತಲುಪುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಹೊರಗಡೆಯೇ ಕುಸಿದು ಬೀಳುತ್ತಾರೆ. ಅವರು ಬಿದ್ದ ಕೂಡಲೇ, ಅವರ ಪತಿ ಬಂದು ಅವರನ್ನು ಎತ್ತಿಕೊಂಡು ಕೊಠಡಿಯೊಳಗೆ ಕರೆದೊಯ್ಯುತ್ತಾರೆ.

ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮುಸ್ಕಾನ್ ಅವರ ತವರು ಮನೆ ಝಾನ್ಸಿಯಲ್ಲಿದ್ದರೆ, ಅವರ ಅತ್ತೆಮನೆ ಮಧ್ಯಪ್ರದೇಶದ ವಿದಿಶಾದಲ್ಲಿದೆ. ಪೊಲೀಸರು ಮತ್ತು ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಅವರು ತಮ್ಮ ಪತಿ ನಿಲೇಶ್ ಅವರೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು. ಈ ದಂಪತಿ ಜೂನ್ 29, 2026 ರಂದು ವಿವಾಹವಾಗಿದ್ದರು.

ಮುಸ್ಕಾನ್ ಕುಟುಂಬಸ್ಥರ ಆರೋಪಗಳ ಹಿನ್ನೆಲೆಯಲ್ಲಿ ನಿಲೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಲೇಶ್‌ಗೆ ಈ ಹಿಂದೆಯೇ ಮತ್ತೊಂದು ಮದುವೆಯಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

The woman, identified as Muskan
ನವವಿವಾಹಿತೆ ನಿಗೂಢ ಸಾವು: ದುರಂತಕ್ಕೂ ಮುನ್ನ ಸಹೋದ್ಯೋಗಿಗಳಿಗೆ ಪಾರ್ಟಿ ಕೊಟ್ಟಿದ್ದ ಆಕೃತಿ

ಪೊಲೀಸರು ಆಸ್ಪತ್ರೆಗೆ ತೆರಳಿ ಅಲ್ಲಿಯೇ ಇದ್ದ ಮುಸ್ಕಾನ್ ಅವರ ಪತಿಯನ್ನು ವಿಚಾರಣೆ ನಡೆಸಿದರು. ತಾವು ಮತ್ತು ತಮ್ಮ ಪತ್ನಿ ಹಿಂದಿನ ರಾತ್ರಿ ರಿಷಭ್ ಹೋಟೆಲ್‌ನಲ್ಲಿ ತಂಗಿದ್ದೆವು ಮತ್ತು ಬೆಳಿಗ್ಗೆ ಹೋಟೆಲ್‌ನಿಂದ ಹೊರಡುವ (ಚೆಕ್-ಔಟ್ ಮಾಡುವ) ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಸಿಂಗ್ ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com