EDಯಿಂದ ಅಜಮ್ ಖಾನ್ ಮಾಲೀಕತ್ವದ, 1,170 ಕೋಟಿ ರೂ. ಮೌಲ್ಯದ ಜೌಹರ್ ವಿಶ್ವವಿದ್ಯಾಲಯದ ಆಸ್ತಿ ಜಪ್ತಿ!

ಸಾರ್ವಜನಿಕ ಕಾಮಗಾರಿಗಳಿಗಾಗಿ ಮೀಸಲಾದ ಸರ್ಕಾರಿ ಹಣವನ್ನು ಈ ಖಾಸಗಿ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿದೆ.
ED attaches Azam Khan's university in money laundering probe
ಜೌಹರ್ ವಿಶ್ವವಿದ್ಯಾಲಯ
Updated on: 

ಲಖನೌ: ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಮಾಲೀಕತ್ವದ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿರುವ 'ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯ'ದ ಭೂಮಿ ಮತ್ತು ಕಟ್ಟಡಗಳನ್ನು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ(ED) ಬುಧವಾರ ತಿಳಿಸಿದೆ.

ಸಾರ್ವಜನಿಕ ಕಾಮಗಾರಿಗಳಿಗಾಗಿ ಮೀಸಲಾದ ಸರ್ಕಾರಿ ಹಣವನ್ನು ಈ ಖಾಸಗಿ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿದೆ.

ಈ ವಿಶ್ವವಿದ್ಯಾಲಯದ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 1,170 ಕೋಟಿ ರೂಪಾಯಿಗಳಷ್ಟಿದೆ.

ED attaches Azam Khan's university in money laundering probe
MLC ಚುನಾವಣೆ: ವಾರಣಾಸಿಯ ಎರಡೂ ಸ್ಥಾನಗಳಲ್ಲಿ SP ಜಯಭೇರಿ; ಪ್ರಧಾನಿ ಮೋದಿ ಕ್ಷೇತ್ರದಲ್ಲೇ BJPಗೆ ಮುಖಭಂಗ!

ಪ್ರಸ್ತುತ ಜೈಲಿನಲ್ಲಿರುವ 78 ವರ್ಷದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್, ತಾವು ನಗರಾಭಿವೃದ್ಧಿ ಸಚಿವರಾಗಿದ್ದಾಗ ಮತ್ತು ಉತ್ತರ ಪ್ರದೇಶ ಜಲ ನಿಗಮದ ಉಸ್ತುವಾರಿ ಹೊಂದಿದ್ದಾಗ, ತಮ್ಮ ಪ್ರಭಾವವನ್ನು ಬಳಸಿಕೊಂಡು ಈ ಅಕ್ರಮಗಳನ್ನು ಎಸಗಿದ್ದಾರೆ ಎಂದು ಇಡಿ ಆರೋಪಿಸಿದೆ.

ವಿಶ್ವವಿದ್ಯಾಲಯ ಮತ್ತು ಅದರ ಆವರಣವು ಅಝಂ ಖಾನ್ ಸ್ಥಾಪಿಸಿರುವ 'ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್'ಗೆ ಸೇರಿದೆ. ಟ್ರಸ್ಟ್ ಅವರ ನಿಯಂತ್ರಣದಲ್ಲಿದ್ದು, ಅವರೇ ವಿಶ್ವವಿದ್ಯಾಲಯದ ಗೌರವ ಕುಲಾಧಿಪತಿಯಾಗಿದ್ದಾರೆ.

ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಸರಕಾರಿ ಅನುದಾನ, ನಿರ್ಮಾಣ ಸಾಮಗ್ರಿಗಳು ಹಾಗೂ ಇತರ ಸಾರ್ವಜನಿಕ ಸಂಪನ್ಮೂಲಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ. ಕ್ಯಾಂಪಸ್ ನಿರ್ಮಾಣದ ವೆಚ್ಚದ ಬಹುಪಾಲಿಗೆ ಕಾನೂನುಬದ್ಧ ಮೂಲಗಳಿಂದ ಹಣ ಬಂದಿರುವುದಕ್ಕೆ ಲೆಕ್ಕಪತ್ರಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ಇಡಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com