‘ರೀಲ್ಸ್‌’ ಗೀಳು; ಇಂಟರ್‌ನೆಟ್‌ ಕೈಕೊಟ್ಟಿದ್ದಕ್ಕೆ ಬೇಸರ, ಮಹಿಳೆ ಆತ್ಮಹತ್ಯೆಗೆ ಶರಣು!

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಕೇರಕಚ್ಛಾರ್ ಗ್ರಾಮದ ನಿವಾಸಿ ಮಂಗ್ಲೋ ಬಾಯಿ ಸಾರಥಿ ಎಂದು ಗುರುತಿಸಲಾಗಿದೆ.
Woman 'addicted to reels' ends life after internet glitch
ರೀಲ್ಸ್ ಗೀಳಿಗೆ ಮಹಿಳೆ ಬಲಿ (ಸಾಂದರ್ಭಿಕ ಚಿತ್ರ)
Updated on

ಜೈಪುರ: ಮೊಬೈಲ್‌ನಲ್ಲಿ ರೀಲ್ಸ್‌ ನೋಡುವ ಚಟಕ್ಕೆ ಒಳಗಾಗಿದ್ದ 52 ವರ್ಷದ ಮಹಿಳೆಯೊಬ್ಬರು ಇಂಟರ್‌ನೆಟ್‌ ಸಂಪರ್ಕ ಪದೇ ಪದೆ ಕಡಿತಗೊಂಡಿದ್ದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಕೇರಕಚ್ಛಾರ್ ಗ್ರಾಮದ ನಿವಾಸಿ ಮಂಗ್ಲೋ ಬಾಯಿ ಸಾರಥಿ ಎಂದು ಗುರುತಿಸಲಾಗಿದೆ.

ಶನಿವಾರ ತಮ್ಮ ಮನೆಯಲ್ಲಿ ಕೀಟನಾಶಕ ಸೇವಿಸಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದವರ ಪ್ರಕಾರ, ಸಾರಥಿ ಮೊಬೈಲ್‌ನಲ್ಲಿ ರೀಲ್ಸ್‌ ನೋಡುವುದಕ್ಕೆ ಹೆಚ್ಚು ಸಮಯ ಕಳೆಯುತ್ತಿದ್ದರು. ಶನಿವಾರ ರೀಲ್ಸ್‌ ವೀಕ್ಷಿಸುತ್ತಿದ್ದ ವೇಳೆ ಪದೇ ಪದೆ ಮೊಬೈಲ್‌ ನೆಟ್‌ವರ್ಕ್‌ ಕೈಕೊಟ್ಟಿದೆ. ಇದರಿಂದ ವೀಡಿಯೊಗಳು ಪದೇ ಪದೆ ನಿಂತುಹೋಗಿದ್ದರಿಂದ ಅವರು ತೀವ್ರವಾಗಿ ಬೇಸರಗೊಂಡಿದ್ದರು ಎನ್ನಲಾಗಿದೆ.

ನೆಟ್‌ವರ್ಕ್‌ ಸಮಸ್ಯೆಯಿಂದ ಕೋಪಗೊಂಡ ಸಾರಥಿ ತಮ್ಮ ಮೊಬೈಲ್‌ ಫೋನ್‌ ಅನ್ನು ನೆಲಕ್ಕೆ ಎಸೆದಿದ್ದು, ಇದರಿಂದ ಮೊಬೈಲ್‌ ಹಾನಿಗೊಳಗಾಗಿದೆ. ಇದಾದ ಬಳಿಕ ಮನೆಯಲ್ಲಿ ಇರಿಸಲಾಗಿದ್ದ ಕೀಟನಾಶಕವನ್ನು ಅವರು ಸೇವಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Woman 'addicted to reels' ends life after internet glitch
AI ಬಳಸಿ ಬೆಟ್ಟದ ಮೇಲೆ ಹುಲಿ ಇದೆ ಭೀತಿ ಹುಟ್ಟಿಸಿದ ಬಾಲಕ: ಪೊಲೀಸರು ನೀಡಿದ ಶಿಕ್ಷೆ ಏನು ನೋಡಿ; Video

ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಸಾರಥಿ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವುದನ್ನು ಅವರ 17 ವರ್ಷದ ಪುತ್ರಿ ಗಮನಿಸಿ ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಕಾರ್ತಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಆರಂಭಿಕ ಚಿಕಿತ್ಸೆ ನೀಡಿದ ಬಳಿಕ ಅವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಕೊರ್ಬಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಸೋಮವಾರ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದು, ಇಂಟರ್‌ನೆಟ್‌ ಸಮಸ್ಯೆಯೇ ಆತ್ಮಹತ್ಯೆಗೆ ನೇರ ಕಾರಣ ಎಂಬುದು ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Woman 'addicted to reels' ends life after internet glitch
'ಟಾಯ್ ಪ್ಲೇನ್' ಎಂದ ನಟಿಗೆ ಕಾನೂನು ಸಂಕಷ್ಟ: ನೋರಾ ಫತೇಹಿ ಹೇಳಿಕೆಯಿಂದ ವಿಮಾನಯಾನ ಸಂಸ್ಥೆಗೆ ಭಾರೀ ಹೊಡೆತ? 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com