'UPI ಪಾವತಿ ಸ್ವೀಕರಿಸಲ್ಲ.. ಕ್ಯಾಶ್‌ ಕೊಡಿ': ಅಂಗಡಿಗಳ ಮುಂದೆ ಬೋರ್ಡ್ ಹಾಕಿದ ವ್ಯಾಪಾರಿಗಳು!

ಅಕ್ಟೋಬರ್‌ 15ರಿಂದ 2,000 ರೂಗಿಂತ ಹೆಚ್ಚಿನ ಮೊತ್ತದ ಕೆಲವು UPI ವಹಿವಾಟುಗಳಿಗೆ ಪ್ರಸ್ತಾವಿತ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಜಾರಿಯಾಗಲಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌..
UP Traders Put Up Notices Over MDR
ಯುಪಿಐ ಪಾವತಿ ಕುರಿತು ಬೋರ್ಡ್ ವೈರಲ್
Updated on

ಗಾಜಿಯಾಬಾದ್‌: ಯುಪಿಐ ಪಾವತಿಗೆ ಕೇಂದ್ರ ಸರ್ಕಾರ ಶುಲ್ಕ ಹೇರಿದ ಬೆನ್ನಲ್ಲೇ ಇತ್ತ ವ್ಯಾಪಾರಿಗಳು ನಗದು ಮಾತ್ರ ಸ್ವೀಕರಿಸುವ ಕುರಿತು ವ್ಯಾಪಕ ಸುದ್ದಿಗಳು ಹರಿದಾಡುತ್ತಿವೆ.

ಹೌದು.. ಅಕ್ಟೋಬರ್‌ 15ರಿಂದ 2,000 ರೂಗಿಂತ ಹೆಚ್ಚಿನ ಮೊತ್ತದ ಕೆಲವು UPI ವಹಿವಾಟುಗಳಿಗೆ ಪ್ರಸ್ತಾವಿತ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಜಾರಿಯಾಗಲಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನ ವ್ಯಾಪಾರಿಗಳು, ತಮ್ಮ ಅಂಗಡಿಗಳ ಮುಂದೆ “UPI ಪಾವತಿ ಸ್ವೀಕರಿಸುವುದಿಲ್ಲ” ಎಂಬ ಬೋರ್ಡ್ ಗಳನ್ನು ಹಾಕಲು ಆರಂಭಿಸಿದ್ದಾರೆ.

ಪ್ರಸ್ತಾವಿತ ನಿಯಮದಡಿ ನಿರ್ದಿಷ್ಟ 2,000 ರೂಗಿಂತ ಹೆಚ್ಚಿನ UPI ವಹಿವಾಟುಗಳಿಗೆ ಶೇ.0.4ರಷ್ಟು MDR ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ವ್ಯಾಪಾರಿಗಳೇ ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಹೆಚ್ಚುವರಿ ವೆಚ್ಚವನ್ನು ವ್ಯಾಪಾರಿಗಳು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಇದರಿಂದ ಅಕ್ಟೋಬರ್‌ 15 ರಿಂದ 2,000 ರೂಗಿಂತ ಹೆಚ್ಚಿನ ಮೊತ್ತದ ಖರೀದಿಗೆ ಗ್ರಾಹಕರು ನಗದು ಹಣವನ್ನು ತೆಗೆದುಕೊಂಡು ಬರುವಂತೆ ಕೆಲವು ವ್ಯಾಪಾರಿಗಳು ಸೂಚಿಸುತ್ತಿದ್ದಾರೆ.

UP Traders Put Up Notices Over MDR
UPI MDR: ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ; ಪೆಟ್ರೋಲ್ ಪಂಪ್ ಗಳಲ್ಲಿ 2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಸ್ವೀಕರಿಸಲು ನಕಾರ!

ವ್ಯಾಪಾರಿಗಳ ಆಕ್ಷೇಪವೇನು?

MDR ಶುಲ್ಕವನ್ನು ವ್ಯಾಪಾರಿಗಳೇ ಭರಿಸಬೇಕು ಎಂದು ಸರ್ಕಾರ ಹೇಳಿದ್ದರೂ, ಈ ಹೆಚ್ಚುವರಿ ವೆಚ್ಚವನ್ನು ವ್ಯಾಪಾರಿಗಳು ತಮ್ಮ ಮೇಲೆ ಸಂಪೂರ್ಣವಾಗಿ ಹೊರುವ ಸಾಧ್ಯತೆ ಕಡಿಮೆ ಎಂದು ಇತರೆ ವ್ಯಾಪಾರಿಗಳು ವಾದಿಸುತ್ತಿದ್ದಾರೆ. ಹೆಚ್ಚಿನ ಮೊತ್ತದ ವಹಿವಾಟುಗಳಲ್ಲಿ MDR ಶುಲ್ಕ ವ್ಯಾಪಾರಿಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಬಹುದು.

ಹೀಗಾಗಿ, 2,000 ರೂಗಿಂತ ಹೆಚ್ಚಿನ ಖರೀದಿಗೆ UPI ಬದಲು ನಗದು ಪಾವತಿ ಮಾಡುವಂತೆ ಗ್ರಾಹಕರನ್ನು ಕೇಳುವ ಸಾಧ್ಯತೆ ಇದೆ. ಗಾಜಿಯಾಬಾದ್‌ನ ಅಂಗಡಿಗಳ ಮುಂದೆ ಹಾಕಲಾಗುತ್ತಿರುವ ಬೋರ್ಡ್ ಗಳು, ಪ್ರಸ್ತಾವಿತ ಶುಲ್ಕ ಜಾರಿಗೆ ಬಂದ ನಂತರ ನಿರ್ದಿಷ್ಟ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ UPI ಸ್ವೀಕಾರದಲ್ಲಿ ಬದಲಾವಣೆ ಆಗಬಹುದು ಎಂಬ ವ್ಯಾಪಾರಿಗಳ ಎಚ್ಚರಿಕೆಯಾಗಿ ಪರಿಣಮಿಸಿವೆ.

ಗ್ರಾಹಕರಿಗೆ ಶುಲ್ಕ ವರ್ಗಾವಣೆಯಾಗದಂತೆ ಕೇಂದ್ರದ ಪ್ರಯತ್ನ

UPI ಪಾವತಿ ವ್ಯವಸ್ಥೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಗ್ರಾಹಕರಿಗೆ ಉಚಿತ ಡಿಜಿಟಲ್‌ ಪಾವತಿ ವ್ಯವಸ್ಥೆ ಎಂಬುದು. ವ್ಯಾಪಾರಿಗಳು MDR ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಿ, ಬಿಲ್‌ನಲ್ಲಿ ಪ್ರತ್ಯೇಕವಾಗಿ “UPI ಶುಲ್ಕ” ವಿಧಿಸಲು ಆರಂಭಿಸಿದರೆ UPI ಬಳಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ MDR ಶುಲ್ಕವನ್ನು ಗ್ರಾಹಕರ ಮೇಲೆ ವರ್ಗಾಯಿಸದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಪಾವತಿ ಅಗ್ರಿಗೇಟರ್‌ಗಳು ಹಾಗೂ ಇತರ ಡಿಜಿಟಲ್‌ ಪಾವತಿ ವೇದಿಕೆಗಳೊಂದಿಗೆ ಚರ್ಚೆ ನಡೆಸುತ್ತಿದೆ.

ವ್ಯಾಪಾರಿಗಳು ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳಿಗೂ ಸಲಹೆ ನೀಡಲಾಗಿದೆ. ಆದರೆ ಇದನ್ನು ಪ್ರತಿದಿನದ ಮಟ್ಟದಲ್ಲಿ ಹೇಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಇನ್ನೂ ವಿವರವಾದ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ.

UP Traders Put Up Notices Over MDR
UPI ವಹಿವಾಟಿಗೆ GST ತೆರಿಗೆ? ಕೇಂದ್ರ ಸರ್ಕಾರ ಹೇಳಿದ್ದೇನು?

ಮತ್ತೆ ನಗದಿನತ್ತ ಮುಖ ಮುಖ ಮಾಡುವ ಅಪಾಯ?

ಹೊಸ MDR ಜಾರಿಯಿಂದ ಜನರು ಮತ್ತೆ ನಗದು ಪಾವತಿಯತ್ತ ಮರಳುವ ಸಾಧ್ಯತೆಯನ್ನು ಸರ್ಕಾರ ನಿರೀಕ್ಷಿಸುತ್ತಿಲ್ಲ. ಸರ್ಕಾರದ ಅಂದಾಜಿನ ಪ್ರಕಾರ, ಒಟ್ಟು UPI ವಹಿವಾಟಿನ ಸುಮಾರು ಶೇ.4ರಷ್ಟು ಮಾತ್ರ ಹೊಸ MDRನ ವ್ಯಾಪ್ತಿಗೆ ಬರಲಿದೆ. ಇದಕ್ಕೆ ಪ್ರಮುಖ ಕಾರಣ, ದೇಶದಲ್ಲಿ ನಡೆಯುವ ಬಹುತೇಕ UPI ವಹಿವಾಟುಗಳು ಕಡಿಮೆ ಮೊತ್ತದ್ದಾಗಿರುವುದು.

RuPay ಡೆಬಿಟ್ ಕಾರ್ಡ್‌ ಪಾವತಿ ಉಚಿತ

ಇದರ ನಡುವೆ, RuPay ಡೆಬಿಟ್ ಕಾರ್ಡ್‌ ಮೂಲಕ ಮಾಡುವ ಪಾವತಿಗಳಿಗೆ ಯಾವುದೇ ವಹಿವಾಟು ಮೊತ್ತದ ಮಿತಿಯಿಲ್ಲದೆ ಶುಲ್ಕವಿರುವುದಿಲ್ಲ. ಹೀಗಾಗಿ, UPI ಮೂಲಕ ಹೆಚ್ಚಿನ ಮೊತ್ತದ ಪಾವತಿ ಮಾಡುವಾಗ ವ್ಯಾಪಾರಿಗಳು ಅಥವಾ ಗ್ರಾಹಕರು ಪರ್ಯಾಯವಾಗಿ RuPay ಡೆಬಿಟ್ ಕಾರ್ಡ್‌ ಪಾವತಿ ವ್ಯವಸ್ಥೆಯನ್ನು ಬಳಸಬಹುದಾಗಿದೆ.

ಒಟ್ಟಿನಲ್ಲಿ, ಪ್ರಸ್ತಾವಿತ MDR ವ್ಯವಸ್ಥೆಯು ಸಾಮಾನ್ಯ ಸಣ್ಣ ಮೊತ್ತದ UPI ಪಾವತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ 2,000 ರೂಗಿಂತ ಹೆಚ್ಚಿನ ಮೊತ್ತದ ಕೆಲವು ವ್ಯಾಪಾರಿ ವಹಿವಾಟುಗಳಲ್ಲಿ ವ್ಯಾಪಾರಿಗಳ ವೆಚ್ಚ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗಾಜಿಯಾಬಾದ್‌ ಸೇರಿದಂತೆ ಕೆಲವು ವ್ಯಾಪಾರಿ ವಲಯಗಳಲ್ಲಿ ವಿರೋಧ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com