2001ರ ನಂತರ ಭಾರತದಲ್ಲಿ 4ನೇ ಅತ್ಯಂತ ಕಡಿಮೆ ಮಟ್ಟದ ಮುಂಗಾರು ಮಳೆ: ಐಎಂಡಿ

ಮುಂಗಾರು ಹಂಗಾಮಿನಲ್ಲಿ ವಾಡಿಕೆಯ ಮಳೆಯ ಪ್ರಮಾಣ 868.6 ಮಿ.ಮೀ. ಆಗಿದ್ದರೂ, ಈ ವರ್ಷ ದೇಶದಲ್ಲಿ 759.4 ಮಿ.ಮೀ. ಮಳೆಯಾಗಿದೆ ಎಂದು IMD ಹೇಳಿದೆ.
IMD Predicts Light Rainfall In These Regions Of India
ಸಂಗ್ರಹ ಚಿತ್ರonline desk
Updated on: 

ಈ ಮುಂಗಾರು ಹಂಗಾಮಿನಲ್ಲಿ (ಜೂನ್-ಸೆಪ್ಟೆಂಬರ್) ಭಾರತ ದೀರ್ಘಾವಧಿಯ ಸರಾಸರಿ (LPA) ಮಳೆಯ ಪೈಕಿ ಶೇಕಡಾ 87.4 ರಷ್ಟು ಮಳೆಯನ್ನು ಪಡೆದಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬುಧವಾರ ತಿಳಿಸಿದೆ.

ಮುಂಗಾರು ಹಂಗಾಮಿನಲ್ಲಿ ವಾಡಿಕೆಯ ಮಳೆಯ ಪ್ರಮಾಣ 868.6 ಮಿ.ಮೀ. ಆಗಿದ್ದರೂ, ಈ ವರ್ಷ ದೇಶದಲ್ಲಿ 759.4 ಮಿ.ಮೀ. ಮಳೆಯಾಗಿದೆ ಎಂದು IMD ಹೇಳಿದೆ. ಅಲ್ಲದೆ, 2001ರ ನಂತರ ಈ ಮುಂಗಾರು ಹಂಗಾಮಿನಲ್ಲಿ ದಾಖಲಾದ ಮಳೆಯು ದೇಶದಲ್ಲಿ ನಾಲ್ಕನೇ ಅತಿ ಕಡಿಮೆ ಪ್ರಮಾಣದ್ದಾಗಿದೆ ಎಂದು ಅದು ತಿಳಿಸಿದೆ.

IMD Predicts Light Rainfall In These Regions Of India
IMD ಬರ ಎಚ್ಚರಿಕೆ ಬಂದ ಮೂರೇ ದಿನದಲ್ಲಿ ಕ್ರಮ ಕೈಗೊಂಡಿದ್ದೇವೆ: DCM ಪರಮೇಶ್ವರ್‌

'ದೀರ್ಘಾವಧಿಯ ಸರಾಸರಿ' (LPA) ಎಂದರೆ, ನಿರ್ದಿಷ್ಟ ಪ್ರದೇಶವೊಂದರಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ (ಉದಾಹರಣೆಗೆ ಒಂದು ತಿಂಗಳು ಅಥವಾ ಹಂಗಾಮು) ದಾಖಲಾದ ಮಳೆಯ ಪ್ರಮಾಣವನ್ನು, ದೀರ್ಘಕಾಲದವರೆಗೆ (ಸಾಮಾನ್ಯವಾಗಿ 30 ರಿಂದ 50 ವರ್ಷಗಳವರೆಗೆ) ಸರಾಸರಿ ಲೆಕ್ಕಾಚಾರ ಮಾಡುವುದಾಗಿದೆ.

ಪ್ರಸ್ತುತ, ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗಿನ ಅವಧಿಯಲ್ಲಿ ದೇಶವು ಸುಮಾರು ಶೇಕಡಾ 13 ರಷ್ಟು ಮಳೆಯ ಕೊರತೆಯನ್ನು ಎದುರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com