ಇನ್ನು, ಈ ಕಾರಿನ ಅತಿದೊಡ್ಡ ಆಕರ್ಷಣೆ ಅಂದರೆ, ಮ್ಯಾಟ್ ಸ್ಟೆಲ್ತ್ ಕಪ್ಪು ಬಣ್ಣ.! ಹೌದು, 19 ಇಂಚಿನ ಕಪ್ಪು ಅಲಾಯ್ ವೀಲ್ ಡಾರ್ಕ್ ಗ್ರಿಲ್ ಕಪ್ಪು ಬ್ಯಾಡ್ಜಿಂಗ್ ಮತ್ತು ಸ್ಟೆಲ್ತ್ ಲೋಗೋ ಕಾರಿಗೆ ಅದ್ಬುತ ನೋಟ ನೀಡುತ್ತದೆ. ಇದರೊಂದಿಗೆ, ಒಳಭಾಗದಲ್ಲಿ ಕಾರ್ಬನ್ ನಾಯ್ರ್ ಕ್ಯಾಬಿನ್ ಇದೆ. ಸಂಪೂರ್ಣ ಕಪ್ಪು ಲೆದರೆಟ್ ಸೀಟ್ ಸ್ಟೆಲ್ತ್ ಬ್ಯಾಡ್ಜ್ ಹೊಸ ಡ್ಯಾಶ್ ಬೋರ್ಡ್ ಫಿನಿಶ್ ಮತ್ತು ಆಂಬಿಯೆಂಟ್ ಲೈಟ್ ಐಷಾರಾಮಿ ಅನುಭವ ನೀಡುತ್ತದೆ. 12.3 ಇಂಚಿನ ಹರ್ಮನ್ ಟಚ್ ಸ್ಕ್ರೀನ್ 10.25 ಇಂಚಿನ ಡಿಜಿಟಲ್ ಮೀಟರ್ ಪನೋರಮಿಕ್ ಸನ್ ರೂಫ್ ವೆಂಟಿಲೇಟೆಡ್ ಸೀಟ್ 10 ಸ್ಪೀಕರ್ ಜೆ ಬಿ ಎಲ್ ಸೌಂಡ್ ಸಿಸ್ಟಮ್ ವೈರ್ ಲೆಸ್ ಚಾರ್ಜಿಂಗ್ ಮತ್ತು ಡ್ಯುಯಲ್ ಜೋನ್ ಎಸಿ ಯಂತಹ ಫೀಚರ್ ಗಳಿವೆ.Online Desk