ಫೋಟೋ ಕ್ಲಿಕ್ - ಮೇ 2015

ಕರಡಿಯ ಕೂಸುಮರಿ...ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹವ್ಯಾಸಿ ವನ್ಯಜೀವಿ ಛಾಯಾಗ್ರಹಕ ಶಶಿಧರಸ್ವಾಮಿ ಹಿರೇಮಠ ಅವರಿಗೆ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ 2015ರ ನಿಸರ್ಗ ವಿಭಾಗದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಲಭಿಸಿದೆ. ಪಶ್ಚಿಮ ಬಂಗಾಳದ ಜಲಪೈಗುರಿ ಫೋಟೋಗ್ರಫಿ ಅಸೋಸಿಯೇಷನ್ ಈ ಸ್ಪರ್ಧೆ ಆಯೋಜಿಸಿತ್ತ
ಕರಡಿಯ ಕೂಸುಮರಿ...
ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹವ್ಯಾಸಿ ವನ್ಯಜೀವಿ ಛಾಯಾಗ್ರಹಕ ಶಶಿಧರಸ್ವಾಮಿ ಹಿರೇಮಠ ಅವರಿಗೆ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ 2015ರ ನಿಸರ್ಗ ವಿಭಾಗದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಲಭಿಸಿದೆ. ಪಶ್ಚಿಮ ಬಂಗಾಳದ ಜಲಪೈಗುರಿ ಫೋಟೋಗ್ರಫಿ ಅಸೋಸಿಯೇಷನ್ ಈ ಸ್ಪರ್ಧೆ ಆಯೋಜಿಸಿತ್ತ
Updated on:
ರಾಜಸ್ತಾನದದ ಬೀವರ್ ನಗರದ ಮಲಿಪುರ ಗ್ರಾಮದ ಮಹಿಳೆಯರು ಬಿರುಬಿಸಿಲಲ್ಲಿ ನೀರಿನ ಮಡಿಕೆಗಳನ್ನು ಹೊತ್ತು ಸಾಗುತ್ತಿದ್ದ ದೃಶ್ಯ.

ಚೋ ಚ್ವೀಟ್... ನಟ ರಿತೇಶ್ ದೇಶ್‌ಮುಖ್ ಅವರು ಟ್ವಿಟರ್‌ನಲ್ಲಿ ಹಾಕಿದ ತಮ್ಮ ಮುದ್ದಿನ ಮಗ ರಿಯಾನ್ ರಿಯಾನ್ ಅಪರೂಪದ ಫೋಟೋ ಇದು. ರಿತೇಶ್ ಪತ್ನಿ ಜೆನಿಲಿಯಾ ಕೂಡ ಚಿತ್ರದಲ್ಲಿದ್ದಾರೆ.

ಯುವ ಕಾಂಗ್ರೆಸ್ ಪ್ರತಿಭಟನೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ್ದರೂ ಜನರ ಅಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಶೇಷಾದ್ರಿಪುರಂನಲ್ಲಿ ಪ್ರತಿಭಟನೆ ನಡೆಸಿದರು.

ಟಿಪ್ಪು ಸುಲ್ತಾನ ಭವನ ನಿರ್ಮಿಸುವಂತೆ ಕೋರಿ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮರದ ಖಡ್ಗ ನೀಡಿ ಗೌರವಿಸಿದರು.

ಸುಡು ಬಿಸಿಲಿಗೆ ತಣ್ಣೀರ ಸ್ನಾನ... ಬಿಸಿ ಗಾಳಿ ಭಾನುವಾರ ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಿಗೆ ವ್ಯಾಪಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಂಣದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಮೃತರ ಸಂಖ್ಯೆ 432ಕ್ಕೇರಿದೆ. ದೆಹಲಿಯ ಇಂಡಿಯಾಗೇಟ್‌ನಲ್ಲಿ ಬಿಸಿ ತಾಳಲಾರದೆ ಕಾರಂಜಿಯಲ್ಲಿ ಸ್ನಾನ ಮಾಡುತ್ತಿರ

ನವದೆಹಲಿಯ ಕರ್ನಾಟಕ ಭವನದಲ್ಲಿ ನಿರ್ಮಿಸಿರುವ ಜಿಮ್ ಕೊಠಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಡಂಬಲ್ಸ್ ಎತ್ತುವ ಮೂಲಕ ಉದ್ಘಾಟಿಸಿದರು. ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ನರಸಿಂಹರಾಜು, ಸ್ಥಾನಿಕ ಆಯುಕ್ತೆ ವಂದನಾ ಗುರ್ನಾನಿ ಇದ್ದರು.

ಆಕಾಶದಲ್ಲಿ ಸಂಜೆ ಸೂರ್ಯನ ಚಿತ್ತಾರ: ನಗರದ ಆನಂದರಾವ್ ಸರ್ಕಲ್‌ನಲ್ಲಿ ಗುರುವಾರ ಮುಸ್ಸಂಜೆ ರಂಗೇರಿದ ಸೂರ್ಯ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ. ಚಿತ್ರ-ಕೆಪಿಎನ್

ಭಲೇ ಸ್ಟಂಟ್: ರಾಜಸ್ಥಾನದ ಉದಯಪುರದಲ್ಲಿ ಮಹಾರಾಣಾ ಪ್ರತಾಪ್ ಅವರ 475ನೇ ಜಯಂತಿ ಅಂಗವಾಗಿ ವ್ಯಕ್ತಿಯೊಬ್ಬ ಸೈಕಲ್‌ನಲ್ಲಿ ಕಸರತ್ತು ನಡೆಸಿದ್ದು ಹೀಗೆ.

ಸೆಲ್ಫಿ ಸಮಯ: ಸೋಮವಾರ ಬೆಂಗಳೂರು ಇನ್‌ಸ್ಟಿಟ್ಟೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಪದವಿ ಸ್ವೀಕಾರ ಸಮಾರಂಭದ ವೇಳೆ ವಿದ್ಯಾರ್ಥಿನಿಯರು ಕುವೆಂಪು ಪ್ರತಿಮೆ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು.

83ನೇ ವಸಂತಕ್ಕೆ ಕಾಲಿಟ್ಟ ದೇವೇಗೌಡರು: ಸೋಮವಾರ 83ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಅವರೊಂದಿಗೆ ಕೋಟೆ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಕಂಠಕಾ ಉಡುಗೊರೆ: ಸಾಂಪ್ರದಾಯಿಕ ನಾದಂ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗೋಲಿಯಾ ಪ್ರಧಾನಿ ಚಿಮ್ಡ್ ಸಾಯ್ಟಾನ್ ಬಿಲೆಗ್ ಅವರು ಕಂದು ಬಣ್ಣದ 'ಕಂಠಕಾ'(ಗೌತಮ ಬುದ್ಧ ಸಿದ್ದಾರ್ಥನಾಗಿದ್ದಾಗ ಅವರ ಮೆಚ್ಚುಗೆಗೆ ಪಾತ್ರವಾಗಿದ್ದ ಕುದುರೆ ಹೆಸರು)ವನ್ನು ಉಡುಗೊರೆಯಾಗಿ ನೀಡಿದರು. ಈ

ವ್ಹಾವ್.. ಸೋನಮ್!
ಭಾನುವಾರ ಉತ್ತರ ಫ್ರಾನ್ಸ್ ನಲ್ಲಿರುವ ಕೇನ್ಸ್ ನ ರೆಡ್ ಕಾರ್ಪೆಟ್ ಮೇಲೆ ನೀಲಿ ಬಣ್ಣದ ರಾಲ್ಫ್ ಮತ್ತು ರುಸ್ಸೋ ಕೌಚರ್ ಗೌನ್ ಧರಿಸಿದ ಬಾಲಿವುಡ್ ನಟಿ ಸೋನಮ್ ಕಪೂರ್ ಕ್ಯಾಟ್ ವಾಕ್ ನಡೆಸಿ ಎಲ್ಲರ ಗಮನ ಸೆಳೆದರು.

ಸ್ವಲ್ಪ ಈ ಕಡೆ ಮುಖ ತಿರುಗಿಸಿ... ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೀಜಿಂಗ್‌ನ ಟೆಂಪಲ್ ಆಫ್ ಹೆವನ್‌ನಲ್ಲಿ ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.

ಸ್ಯಾಂಡಲ್‌ವುಡ್ ನಟ ಶಿವರಾಜಕುಮಾರ್ ಹಾಗೂ ಗೊದ್ರೆಜ್ ಕಂಪನಿಯ ಉಪಾಧ್ಯಕ್ಷ(ಮಾರ್ಕೆಟಿಂಗ್) ಚೇತನ್ ಗೊರೆ ಅವರು ಗುರುವಾರ ಬೆಂಗಳೂರಿನಲ್ಲಿ ಹೊಸ ಉತ್ಪನ್ನ ಗೊದ್ರೆಜ್ ಎಕ್ಸ್‌ಪರ್ಟ್ ಹೇರ್ ಕಲರ್ ಬಿಡುಗಡೆ ಮಾಡಿದ್ದು ಹೀಗೆ.

ಮಳೆಯಲ್ಲಿ ಆಟವೋ ಆಟ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದು, ಶಾಲೆಯಿಂದ ವಾಪಸಾಗುತ್ತಿದ್ದ ವಿದ್ಯಾರ್ಥಿಗಳು ಸುರಿವ ಮಳೆಯಲ್ಲೇ ಆಟವಾಡುತ್ತ ಮೈಮರೆತಿದ್ದು ಹೀಗೆ.

ಸಿಂಹದ ಮೂರು ಮುಖಗಳು: ಹೈದರಾಬಾದ್‌ನ ನೆಹರು ಪ್ರಾಣಿ ಸಂಗ್ರಾಲಯದಲ್ಲಿ ಮಂಗಳವಾರ ಮೂರು ಸಿಂಹಗಳು ಒಂದೇ ಕಡೆ ಕಾಣಿಸಿಕೊಂಡಿದ್ದು ಹೀಗೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ಪ್ರಕಟವಾಗುತ್ತಿದ್ದಂತೆ ಬೆಂಗಳೂರಿನ ಹೈಕೋರ್ಟ್ ಮುಂಭಾಗದಲ್ಲಿದ್ದ ಎಐಎಡಿಎಂಕೆ ಬೆಂಬಲಿಗರು ಜಯಲಲಿತಾ ಭಾವಚಿತ್ರ ಹಿಡಿದು ಸಂಭ್ರಮ ಆಚರಿಸಿದರು.

ಶಶಿ ಸಂಭ್ರಮದಲ್ಲಿ ಕುಟುಂಬದ ಖುಷಿ: ಹಿಂದಿ ಚಿತ್ರರಂಗದ ಹಿರಿಯ ನಟ ಶಶಿ ಕಪೂರ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅರುಣ್ ಜೇಟ್ಲಿ ಅವರು ಭಾನುವಾರ ಪ್ರದಾನ ಮಾಡಿದರು. ಮುಂಬೈ ಐತಿಹಾಸಿಕ ಚಿತ್ರ ಮಂದಿರ ಪೃಥ್ವಿಯಲ್ಲಿ ನಡೆದ ಸಮಾರಂಭದ ಬಳಿಕ ಕ

ಅಮ್ಮನ ಕೈ ತುತ್ತು...
ತಾಯಂದಿರ ದಿನಾಚರಣೆ ಎಲ್ಲೆಡೆ ಸಂಭ್ರಮದ ಸಿದ್ಧತೆ ನಡೆದಿದ್ದರೆ ಶನಿವಾರ ಮಧ್ಯಾಹ್ನ ನಗರದ ಫುಟ್ ಪಾತ್ ನಲ್ಲಿ ಕುಳಿತು ತಾಯಿಯೊಬ್ಬಳು ಮಗನಿಗೆ ತುತ್ತು ತಿನ್ನಿಸುತ್ತಿರುವುದು ಮನಕಲುಕುವಂತಿತ್ತು.

ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಫ್ಲೈಓವರ್ ನ ಪಿಲ್ಲರ್ ಗಳಿಗೆ ಬಣ್ಣ ಬಳಿದು, ಸುಂದರ ಕಾಲಕೃತಿ ರಚಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಮಂಗಳವಾರ ನಡೆದ ಬೆಂಗಳೂರಿನ ನಗರ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ಬುದ್ಧ ಜಯಂತಿಯ ಅಂಗವಾಗಿ ಸೋಮವಾರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬುದ್ಧನ ಪ್ರತಿಮೆ ಮುಂದೆ ಪ್ರಾರ್ಥಿಸುತ್ತಿರುವ ಮಕ್ಕಳು.

ದೆಹಲಿಯಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಬುದ್ಧ ಪೂರ್ಣಿಮೆ ದಿನ ಕಾರ್ಯಕ್ರಮದಲ್ಲಿ ಪಂಡಿತ ಲೋಕೇಶ್‌ಚಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿದರು.

ಬೇಸಿಗೆ ಶಿಬಿರದ ಅಂಗವಾಗಿ ಧಾರವಾಡದ ಕಲಾನಿಧಿ ಸಾಂಸ್ಕೃತಿಕ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಕೆಸರಿನಲ್ಲಿ ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಮಕ್ಕಳು ಹಾಗೂ ಪೋಷಕರು ಉತ್ಸಾಹದಿಂದ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com