ಬೆಳಗಾವಿ: ಹಿಂದುಳಿದ ವರ್ಗಕ್ಕೆ ಅವರ ಜನಸಂಖ್ಯೆ ಆಧಾರದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಟಿಕೆಟ್ ನೀಡಿ, ಮೀಸಲು ಸೌಲಭ್ಯ ಕಲ್ಪಿಸಿದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಇಲ್ಲಿಯ ಶ್ರೀನಗರದ ಮಹಾನಗರ ಪಾಲಿಕೆಂು ಮೈದಾನದಲ್ಲಿ ಆಂೋಜಿಸಲಾಗಿದ್ದ 525ನೇ ಕನಕ ಜಂುಂತಿ ಉತ್ಸವ ಹಾಗೂ ಕುರುಬರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ರಾಜಕೀಯ ಅಧಿಕಾರವೊಂದೇ ಪ್ರಬಲ ಅಸ್ತ್ರ. ಅದು ಸುಮ್ಮನೆ ದಕ್ಕುವುದಿಲ್ಲ. ಹಿಂದುಳಿದ ವರ್ಗದ ಜನತೆ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದರು.
ರಾಜ್ಯ ವಿಧಾನಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮಾಜದವರು ಚುನಾಯಿತರಾದರೆ ಮಾತ್ರ ವಿಧಾನಸಭೆಂುಲ್ಲಿ ಕಂಬಳಿ ಬೀಸಲು ಸಾಧ್ಯ. ವಿಧಾನಸಭೆಯಲ್ಲಿ ಕಂಬಳಿ ಬೀಸುವವರೆಗೆ ನಿಮ್ಮ ಸಮಸ್ಯೆಗಳಿಗೆ ಹರಿಹಾರ ಸಿಗುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು. ಸಚಿವ ವರ್ತೂರ ಪ್ರಕಾಶ ಮಾತನಾಡಿ, ಸಿದ್ದರಾಮಂ್ಯು ಅವರಂತಹ ಜನಪರ ಚಿಂತನೆಂುಳ್ಳ ವ್ಯಕ್ತಿಗಳು ಮುಖ್ಯಮಂತ್ರಿಗಳಾಗಬೇಕಾದ ಅವಶ್ಯಕತೆಯಿದೆ. ತಾವು ಂಾವುದೇ ಪಕ್ಷಕ್ಕೂ ಹೆದರುವುದಿಲ್ಲ. ತಮ್ಮಿಂದಲೇ ಬಿಜೆಪಿ ಸರ್ಕಾರ ಉಳಿದುಕೊಂಡಿದೆ ಎಂದರು.