ಹೈ ಅಭಯವಿತ್ತರೆ ಸಂಪುಟಕ್ಕೆ ಕೈ

ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗೂ ಸಂಪುಟ ವಿಸ್ತರಣೆಗೆ ಮನ ಮಾಡಿದ್ದಾರೆ. ಹೈಕಮಾಂಡ್ ಅನುಮತಿ ನೀಡಿದರೆ, ತಕ್ಷಣ ಸಂಪುಟ ಪುನಾರಚಿಸಲು...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗೂ ಸಂಪುಟ ವಿಸ್ತರಣೆಗೆ ಮನ ಮಾಡಿದ್ದಾರೆ. ಹೈಕಮಾಂಡ್ ಅನುಮತಿ ನೀಡಿದರೆ, ತಕ್ಷಣ ಸಂಪುಟ ಪುನಾರಚಿಸಲು ಸಿಎಂ ಸಿದಟಛಿತೆ ನಡೆಸಿದ್ದಾ ರೆ. ಕೆಲವು ಸಚಿ ವರ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಮತ್ತು ಸಂಪುಟದಿಂದ ಕೈಬಿಟ್ಟ ಸಚಿವರನ್ನು ಪಕ್ಷದ ಕೆಲಸದಲ್ಲಿ ತೊಡಗಿಸುವ ಸಾಧ್ಯತೆಯೂ ಇದೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ  ಸೋನಿಯಾ  ಗಾಂಧಿ ಅವರನ್ನು ಸಿಎಂ ಸೋಮ ವಾರ ಭೇಟಿ ಮಾಡಿ ಔಪಚಾರಿಕವಾಗಿ ಚರ್ಚಿಸಲಿದ್ದಾರೆ. ಆದರೆ, ರಾಜ್ಯದಲ್ಲಿ ಗ್ರಾಮ ಪಂಚಾ ಯತ್ ಹಾಗೂ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿದೆ. ಹೀಗಾಗಿ ಈ ಸಂದರ್ಭ ಸಂಪುಟ ಪುನಾರಚಿಸು ವುದರಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ಹೈಕಮಾಂ ಡ್ ಭೇಟಿ ಸಂದರ್ಭದಲ್ಲಿ ಚರ್ಚಿಸಲು ಅವರು ನಿರ್ಧರಿಸಿದ್ದಾರೆ. ಸಂಪುಟ ಪುನಾರಚನೆ ಅಥವಾ
ಸಂಪುಟ ವಿಸ್ತರಣೆ ನಂತರ ಭುಗಿಲೇ ಳಬಹುದಾದ ಭಿನ್ನಮ ತೀಯ ಚಟುವಟಿಕೆ ಗಳಿಂದ ತಮಗೆ ರಕ್ಷಣೆ ನೀಡಬೇಕು,ಭಿನ್ನ ಮತೀಯರ ಚಟುವ ಟಿಕೆಗಳಿಗೆ ದೆಹಲಿ ನಾಯಕರು ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ನೀಡುವುದನ್ನು ತಡೆಯ ಬೇಕೆಂದೂ ಹೈಕಮಾಂಡ್‍ಗೆ ಮನವಿ ಮಾಡಲಿದ್ದಾರೆ.
ಒಟ್ಟಾರೆ, ಭಿನ್ನಮತೀಯ ಚಟುವಟಿಕೆಗಳಿಂದ ಆಡಳಿತದ ಮೇಲಿನ ದುಷ್ಪರಿಣಾಮದ ಬಗೆಗೆ ಹೈಕಮಾಂಡ್‍ಗೆ
ಮನವರಿಕೆ ಮಾಡಿ ಕೊಡಲಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಇದೇ ವೇಳೆ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವಿನ ನಂತರ ರಾಜ್ಯದಲ್ಲಿ ಸಿಬಿಐ ತನಿಖೆಗಾಗಿ ನಡೆದ ಹೋರಾಟಗಳು, ಸಿಬಿಐ ತನಿಖೆಗೆ ಒಪ್ಪಿಸಿದ ನಂತರದ ಪರಿಸ್ಥಿತಿ, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮತ್ತು ಮೂರು ವಿಭಾಗಗಳಾಗಿ ಮಾಡುವ ಪ್ರಸ್ತಾಪ ಸೇರಿದಂತೆ ಇನ್ನೂ
ಹಲವು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಪೂರ್ವಭಾವಿ ಚರ್ಚೆ: ಭಾನುವಾರ ಇಲ್ಲಿ ಸುದ್ದಿಗಾ ರ ರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದನ್ನು ಖಚಿತಪಡಿಸಿದ್ದಾರೆ. ಸಂಪುಟ ವಿಸ್ತರಣೆ ಮಾಡುತ್ತೀರೋ,
ಪುನಾರಚಿಸುತ್ತೀರೋ ಎಂಬ ಪ್ರಶ್ನೆಗೆ, `ಇದುವರೆಗೆ ಸಂಪುಟ ವಿಸ್ತರಣೆ ಕುರಿತಂತೆ ನಾನು ಹೈಕಮಾಂಡ್ ಜತೆ ಚರ್ಚಿಸಿಲ್ಲ. ಅವರು ಏನು ಹೇಳುತ್ತಾರೋ ನೋಡಬೇಕು' ಎಂದರು. ಯಾವಾಗ ಆಗಬಹುದು ಎಂಬುದಕ್ಕೆ, `ಹೈಕಮಾಂಡ್ ಭೇಟಿ ಮಾಡದೇ ಶೀಘ್ರ ಅಥವಾ ಅತಿ ಶೀಘ್ರ
ಅಂತ ಹೇಗೆ ಹೇಳಲಿ?' ಎಂದು ಮರುಪ್ರಶ್ನಿಸಿದರು. ಭಾನುವಾರ ರಾತ್ರಿ ಸೋನಿಯಾ  ಕಾರ್ಯದರ್ಶಿ ಅಹ್ಮದ್ ಪಟೇಲ್  ಅವರನ್ನು ಭೇಟಿ ಮಾಡಿದ್ದ ಸಿದ್ದು ಸಂಪುಟ ವಿಸ್ತರಣೆ ಪೂರ್ವಭಾವಿಯಾಗಿ ಚರ್ಚಿಸಿದರು.



ಅನುದಾನ ತಗಾದೆ
ನವದೆಹಲಿ: ಹದಿನಾಲ್ಕನೇ ಹಣಕಾಸು ಆಯೋ ಗದ ಶಿಫಾರಸಿನಂತೆ ಕೇಂದ್ರ- ರಾಜ್ಯಗಳ ನಡುವೆ ತೆರಿಗೆ ಹಣ ಹಂಚಿಕೆ ತಗಾದೆ ದೆಹಲಿಯಲ್ಲೂ
ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಕಡಿತ ಮಾಡಿರುವುದರಿಂದ
ರಾಜ್ಯಕ್ಕೆ ದಕ್ಕಬೇಕಾದ ಪಾಲಿಗಿಂತ ಕಡಿಮೆ ಅನುದಾನ ದಕ್ಕಿದೆ ಎಂದು ಪ್ರಧಾನಿ ಸಮ್ಮುಖದಲ್ಲಿಯೇ ಪ್ರತಿಪಾದಿಸಿದ್ದಾರೆ.



ಹಕ್ಕುಚ್ಯುತಿ ಪಣ!
ಬೆಂಗಳೂರು: ಕೇಂದ್ರದ ಅನುದಾನದ ಬಗ್ಗೆ ಸದನ ಹಾಗೂ ಹೊರಗೆ ತಪ್ಪು ಮಾಹಿತಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದಟಛಿ ಸದನದಲ್ಲಿ ಹಕ್ಕುಚ್ಯುತಿ
ಮಂಡಿಸಲು ಜತೆಗೆ ರಾಜ್ಯಾದ್ಯಂತ ವಾಸ್ತವವನ್ನು ಜನ ರಿಗೆ ತಲುಪಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜ್ಯಕ್ಕೆ
ಅನುದಾನದ ಕುರಿತ ವಿವರ ಮಾಹಿತಿ ಲಭ್ಯವಾಗಿರುವ ಜತೆಗೆ ಪ್ರಧಾನಿ ಮೋದಿ ಅವರೇ ರಾಜ್ಯಕ್ಕೆ ಎಷ್ಟು ಹಣ ಲಭ್ಯವಾಗಲಿದೆ ಎಂಬುದನ್ನು ಬಹಿರಂಗವಾಗಿ ಹೇಳಿ
ದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಮುಖ್ಯಮಂತ್ರಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ರಾಜ್ಯ ಬಿಜೆಪಿ ನಾಯಕರು ಪ್ರತಿಪಾದಿಸಿದ್ದು, ಅವರ ವಿರುದ್ಧ  ಹಕ್ಕು ಚ್ಯುತಿ ಮಂಡಿಸಲು ಉದ್ದೇಶಿಸಿದ್ದಾರೆ. ಹಾಗೆಯೇ ಶ್ವೇತಪತ್ರಕ್ಕೆ ಆಗ್ರಹಿಸಲು ಮುಂದಾಗಿದ್ದಾರೆ. ಕೇಂದ್ರದಿಂದ ಈ ಬಾರಿ ಕಡಿಮೆ ಪಾಲು ಬಂದಿದೆ ಎಂದು
ರಾಜ್ಯ ಸರ್ಕಾರವು ಪದೇಪದೆ ಪ್ರಸ್ತಾಪಿಸಿ ಅಪಪ್ರಚಾರ ಮಾಡುತ್ತಿದೆ ಎಂಬುದು ಬಿಜೆಪಿ ಆರೋಪ. ಈ ಹಿನ್ನೆಲೆಯಲ್ಲಿ ಮುಂಬರುವ ಅಧಿವೇಶನ ದಲ್ಲಿ ನೈಜ ಸಂಗತಿಯನ್ನು
ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸುವ ಜೊತೆಗೆ ಈ ಸಂಗತಿಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಬಗ್ಗೆ ಚರ್ಚೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com