

ವಿಧಾನ ಪರಿಷತ್: ಕಾನೂನು ಸಚಿವರ ಹೇಳಿಕೆ ಕುರಿತು ಗೃಹ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಅರುಣ್ ಶಹಾಪೂರ, `ಸಚಿವರೇ ನೀವು ಕೂತಾಗ ಒಂದು ಹೇಳುತ್ತೀರಿ, ನಿಂತಾಗ ಮತ್ತೊಂದು ಹೇಳುತ್ತೀರಿ, ಮತ್ತೆ ಇಲ್ಲಿ ಬಾಯಿ ಹಾಕಿ ಹೊಸದೊಂದು ವಿವಾದ ಸೃಷ್ಟಿಸಬೇಡಿ. ಜಯಚಂದ್ರ ಅವರೇ ಸ್ಪಷ್ಟನೆ ನಿಡಲಿ, ಬಿಟ್ಟುಬಿಡಿ' ಎಂದು ಕಾಲೆಳೆದರು.
ಏತನ್ಮಧ್ಯೆ ಚರ್ಚೆಗೆ ಪ್ರವೇಶಿಸಿದ ಕಾಂಗ್ರೆಸ್‍ನ ಉಗ್ರಪ್ಪ, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಉಗ್ರಪ್ಪ ಅವರಿಗೆ ಅವಕಾಶ ನೀಡುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. `ಈ ಸದನವನ್ನು ಸಭಾಪತಿ ನಡೆಸುತ್ತಾರೋ, ಉಗ್ರಪ್ಪ ನಡೆಸುತ್ತಾರೋ ಎಂಬ ಸಂದೇಹ ಬರುತ್ತದೆ. ಯಾವಾಗಲೂ ಉಗ್ರಪ್ಪ ಬಾಯಿ ಹಾಕುತ್ತಲೇ ಇರುತ್ತಾರೆ. ಈ ಸದನದ ಬೇರೆ ಸದಸ್ಯರಿಗೆ ಮಾತನಾಡುವ ಅವಕಾಶವಿಲ್ಲವೇ?' ಎಂದು ಜೆಡಿಎಸ್ ನ ಕೃಷ್ಣಪ್ಪ ಅಸಮಾಧಾನವ್ಯಕ್ತಪಡಿಸಿದರು.
ಹೇಳಿಕೆ ನೀಡಿಲ್ಲ:
ಜಯಚಂದ್ರ ವಿಧಾನ ಪರಿಷತ್ ವಿಸರ್ಜನೆ ಅಥವಾ ರದ್ದು ಮಾಡುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಭಾವಿಸಿ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಕನಸು ಮನಸಿನಲ್ಲಿಯೂ ನಾನು ಇಂಥ ಹೇಳಿಕೆ ನೀಡಲು ಸಾಧ್ಯವಿಲ್ಲ. ವಿಧಾನ ಪರಿಷತ್ ವಿಸರ್ಜಿಸುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಜಯಚಂದ್ರ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಡಿ. ಎಚ್.ಶಂಕರಮೂರ್ತಿ, ಇತ್ತೀಚೆಗೆ ಬರುತ್ತಿರುವ ಇಂತಹ ಹೇಳಿಕೆಗಳಿಂತ ಕಿರಿಕಿರಿಯಾಗುತ್ತಿದೆ. ಹೇಳಿಕೆ ನೀಡಿರಬಹುದು ಅಥವಾ ಇಲ್ಲದಿರಬಹುದು. ಆದರೆ ಭವಿಷ್ಯದಲ್ಲಿ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡಬಾರದು. ಈ ಸದನದ ಗೌರವ ಹಾಳು ಮಾಡುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.