ಬಿಬಿಎಂಪಿ ಫಲಿತಾಂಶ ಸರ್ಕಾರದ ಮೊದಲ ಮೌಲ್ಯಮಾಪನ: ಡೀವಿ

ಬೆಂಗಳೂರು ಬಿಬಿಎಂಪಿ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿ ನಡೆಯಲಿದೆ. ಇದರಫಲಿತಾಂಶ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಎರಡೂವರೆ ವರ್ಷಗಳ ಆಡಳಿತದ ಮೊದಲ ಮೌಲ್ಯಮಾಪನ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಡಿವಿ ಸದಾನಂದಗೌಡ (ಸಂಗ್ರಹ ಚಿತ್ರ)
ಡಿವಿ ಸದಾನಂದಗೌಡ (ಸಂಗ್ರಹ ಚಿತ್ರ)
Updated on: 

ಮಂಗಳೂರು: ಬೆಂಗಳೂರು ಬಿಬಿಎಂಪಿ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿ ನಡೆಯಲಿದೆ. ಇದರಫಲಿತಾಂಶ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಎರಡೂವರೆ  ವರ್ಷಗಳ ಆಡಳಿತದ ಮೊದಲ ಮೌಲ್ಯಮಾಪನ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 6 ತಿಂಗಳಲ್ಲಿ ಅವರ ಪಕ್ಷದೊಳಗೆ ಗುಂಪುಗಾರಿಕೆ, ಸಿದ್ದರಾಮಯ್ಯ ಅವರ ಉದ್ಧಟತನ , ಜನಸಾಮಾನ್ಯರೊಂದಿಗೆ ಬೆರೆಯದಿರುವುದು, ಪಕ್ಷದ ಅಧ್ಯಕ್ಷರ ವಿರುದ್ಧದ ನಡೆ, ರೈತರ ಸರಣಿ ಆತ್ಮಹತ್ಯೆಗಳಿಂದ ಜನಸಾಮಾನ್ಯರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು ಆಡಳಿತ ವಿಫಲವಾಗಿದೆ. ಪಕ್ಷದ ವಿರುದ್ಧದ ಜನರ ಅಲೆಯ ಬಗ್ಗೆ ಕಾಂಗ್ರೆಸ್‍ನ ಹಿರಿಯ  ನಾಯಕರು ಇದೀಗ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.

ತಡವಾಗಿಯಾದರೂ ಈ ರೀತಿಯ ಹೇಳಿಕೆಗೆ ಅವರನ್ನು ತಾನು ಅಭಿನಂದಿಸುತ್ತೇನೆ. ರಾಷ್ಟ್ರಮಟ್ಟದಲ್ಲಿ ರಾಜಕೀಯ ಅನುಭವ ಇರುವ ಪಕ್ಷದ ಹಿರಿಯರು ಇಷ್ಟು ತಡವಾಗಿ ಹೇಳಿಕೆ ನೀಡಬಾರದಿತ್ತು  ಎಂದು ಶುಕ್ರವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com