

ಬೆಂಗಳೂರು: ಕಾಮರಾಜ್ ಸೂತ್ರದ ಆಧಾರದ ಮೇಲೆ ಸಂಪುಟ ಪುನಾರಚನೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ತಂತ್ರ ರೂಪಿಸಲು ಒಕ್ಕಲಿಗ ಶಾಸಕರು ಹೋಟೆಲ್‍ನಲ್ಲಿ ಸಭೆ ನಡೆಸಿದ ಬೆನ್ನಲ್ಲೇ ಶಾಸಕರ ನಿಯೋ ಗ ಸಿದ್ದರಾಮಯ್ಯ ಅವರ ಜತೆ ಭೇಟಿ ನಡೆಸಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ . ಆರಂಭದಲ್ಲಿ 60 ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಾರೆ ಸುದ್ದಿ ಸೃಷ್ಟಿಯಾಗಿತ್ತು.
ಆದರೆ ಸಾಯಂಕಾಲದ ಹೊತ್ತಿಗೆ ಅದು 25ಕ್ಕೆ ಇಳಿಯಿತು. ಆದರೆ ಕೊನೆಯಲ್ಲಿ ಕೆಲವು ಶಾಸಕರು ಬಿಡಿಬಿಡಿಯಾಗಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿದರು. ಹಿರಿಯ
ಶಾಸಕ ಕೆ. ಬಿ. ಕೋಳೀವಾದ ಅವರಂತೂ ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದು ಬಂದರು. ಆದರೆ, ಶಾಸಕರ ನಿಯೋಗ ಮಾತ್ರ ಸಂಪುಟ ವಿಸ್ತರಣೆ,
ಪುನಾರಚನೆ ವಿಚಾರವನ್ನು ಬಿಟ್ಟು ಹೊಸ ದಾಗಿ ಸಂಪುಟ ರಚನೆ ಮಾಡುವಂತೆ ಆಗ್ರಹಿ ಸಿದ್ದಾರೆ. ಕಾಮರಾಜ್ ಸೂತ್ರದ ಪ್ರಕಾರ ಎಲ್ಲರಿಗೂ ಅಧಿಕಾರ ಹಂಚಿಕೆಯಾಗಲಿ.
ಈಗಿರುವ ಸಚಿವರ ಪೈಕಿ ಬೆರಳೆಣಿಕೆಯಷ್ಟು ಮಾತ್ರ ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸ್ ಭವಿಷ್ಯ ಮತ್ತೆ ರೂಪುಗೊಲ್ಲಬೇಕಿದ್ದರೆ ಇವರೆಲ್ಲರನ್ನೂ ಕೈ ಬಿಡಬೇಕು. ಹೀಗಾಗಿ ಸಂಪುಟವನ್ನು ಹೊಸದಾಗಿ ರಚಿಸಬೇಕು. ನಿಗಮ-ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರಿಗೆ ನಿಗದಿ ಮಾಡಿ ರುವ ಅವಧಿ ಸಚಿವರಿಗೂ ಅನ್ವಯವಾಗಲಿ ಎಂದು ಆಗ್ರಹಿಸಿದ್ದಾರೆ.
ಏ.4 ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದಾರೆ. ಅವರು ವಾಪಾಸ್ ಆದ ನಂತರ ಶಾಸಕರ ನಿಯೋ ಗ ದೆಹಲಿಗೆ ತೆರಳಿ ಸಂಪುಟವನ್ನು ಹೊಸದಾಗಿ
ರಚಿಸಲು ಸಿಎಂಗೆ ಸಂಪೂರ್ಣ ಸಹಾಯ ನೀಡಿ. ನಾವು ಅವರ ಕೈ ಬಲಪಡಿಸುತ್ತೇವೆ ಎಂದು ಆಗ್ರಹಿಸಲು ಮುಂದಾಗಿದ್ದಾರೆ.