ಗದ್ದಲದಲ್ಲೇ ಮುಗಿಯದಿರಲಿ, ಸಮಕಾಲೀನ ಹಾಗೂ ಮೌಲ್ಯಯುತ ಚರ್ಚೆ ನಡೆಯಲಿ

ಮಹತ್ವದ ವಿಚಾರಗಳು ನಿರೀಕ್ಷೆಗಳೊಂದಿಗೆ ಆರಂಭವಾಗಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸಮಕಾಲೀನ ಮೌಲ್ಯಯುತ ಚರ್ಚೆ ನಡೆಯಲಿದೆಯೇ?..
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)

ಬೆಂಗಳೂರು: ಮಹತ್ವದ ವಿಚಾರಗಳು ನಿರೀಕ್ಷೆಗಳೊಂದಿಗೆ ಆರಂಭವಾಗಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸಮಕಾಲೀನ ಮೌಲ್ಯಯುತ ಚರ್ಚೆ ನಡೆಯಲಿದೆಯೇ?

ಕಳೆದ ಅಧಿವೇಶನಗಳಲ್ಲಿ ಚರ್ಚೆಗಿಂತ ಗದ್ದಲವೇ ಹೆಚ್ಚಾಗಿ, ಚರ್ಚೆಗಳೇ ನಡೆದಿರಲಿಲ್ಲ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ನಡೆದ ವಾಗ್ವಾದಗಳು, ಧರಣಿ, ಸಭಾತ್ಯಾಗದ ಮೂಲಕ  ಅಧಿವೇಶನ ವನ್ನೇ ಅಂತ್ಯಗಳೊಸಿದ್ದವು. ಆದರೆ ಈ ಬಾರಿ ಸಾರ್ವಜನಿಕ ಆದ್ಯತೆಯ ವಿಚಾರಗಳುಸಾಕಷ್ಟಿವೆ. ಹೀಗಾಗಿ, ಶಾಸನ ಸಭೆ ಇದಕ್ಕೆ ಸ್ಪಂದಿಸುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿರುವ ಪ್ರಮುಖ ಐದು ಸಂಗತಿಗಳನ್ನು ಪಟ್ಟಿ ಮಾಡಲಾಗಿದೆ.

ಮಹತ್ವದ ವಿಚಾರಗಳು
ಸಚಿವ ಎಚ್.ಆಂಜನೇಯ ಅವರ ಪ್ರಕರಣದ ಬಗ್ಗೆ ಆಗಬೇಕಿದೆ ಚರ್ಚೆ 2 ಲೋಕಾಯುಕ್ತರ ಪದಚ್ಯುತಿ ನಿಲುವಳಿಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು 3 ಮೌಢ್ಯ ಪ್ರತಿಬಂಧಕ ಕಾಯಿದೆ  ಮತ್ತು ಕಲಬುರ್ಗಿ ಹತ್ಯೆ ಪ್ರಕರಣ 4 ಗ್ರಾಮೀಣಾಭಿವೃದ್ಧಿ ಸುಧಾರಣೆಗಾಗಿ ಶಾಸಕ ರಮೇಶ್ ಕುಮಾರ್ ನೇತೃತ್ವದ ಸಮಿತಿ ವರದಿ ಜಾರಿ 5 ಬರಗಾಲ, ರೈತರ ಆತ್ಮಹತ್ಯೆ, ಕಳಸಾ ಬಂಡೂರಿ ಮತ್ತು ಬೆಂಗಳೂರಿನ ಕಸದ ಸಮಸ್ಯೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com