ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಎಸ್ ವೈ ಪರ ಬ್ಯಾಟಿಂಗ್

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಹೈಕೋರ್ಟ್ ನಿಂದ ರಿಲೀಫ್ ದೊರೆತ ಬೆನ್ನಲ್ಲೇ ಪಕ್ಷದೊಳಗೆ ಸಂಚಲನ ಆರಂಭವಾಗಿದೆ...
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಹೈಕೋರ್ಟ್ ನಿಂದ ರಿಲೀಫ್ ದೊರೆತ ಬೆನ್ನಲ್ಲೇ ಪಕ್ಷದೊಳಗೆ ಸಂಚಲನ ಆರಂಭವಾಗಿದೆ.

ಡಿಸೆಂಬರ್ ಒಳಗಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ ವೈ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಸೂಕ್ತ ಎಂಬ ಅಭಿಪ್ರಾಯ ಪಕ್ಷದ ಒಂದುವರ್ಗದಿಂದ  ಕೇಳಿಬಂದಿದೆ. ಹಾಗೆಯೇ ಬಿಎಸ್ ವೈ ಅವರನ್ನು ಅನುಸರಿಸುತ್ತಿದ್ದ ನಾಯಕರು ಈ ಬೆಳವಣಿಗೆಯಿಂದ ಪುಟಿದೆದ್ದಿದ್ದಾರೆ. ಈ ಮಧ್ಯೆ ಯಡಿಯೂರಪ್ಪನವರು ಮಾತ್ರ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ  ನೀಡಲು ಇಚ್ಛಿಸುತ್ತಿಲ್ಲ.

ಪಕ್ಷದೊಳಗೆ ಒಂದು ರೀತಿಯ ಬೆಳವಣಿಗೆ ಆರಂಭವಾಗಿದ್ದರೆ, ಮತ್ತೊಂದು ಕಡೆ ಬಿಎಸ್ ವೈ ಬ್ರಿಗೇಡ್ ಎಂಬ ಒಂದು ತಂಡ ಚೇಂಜ್ ಡಾಟ್ ಆರ್ಗ್ ಅಂತರ್ಜಾಲ ತಾಣ ಬಳಸಿಕೊಂಡು ಬಿಜೆಪಿ  ರಾಜ್ಯಘಟಕಕ್ಕೆ ಯಡಿಯೂರಪ್ಪನವರೇ ಅಧ್ಯಕ್ಷರಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾರಂಭಿಸಿದೆ.

ಅನಿವಾರ್ಯ: ಸಾವಿರಕ್ಕೂ ಹೆಚ್ಚು ಜನ ಈ ತಾಣಕ್ಕೆ ಭೇಟಿಕೊಟ್ಟು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದು, ಅನೇಕರು ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪನವರೇ ಅನಿವಾರ್ಯ. ಪಕ್ಷ ಮುಂದೆ  ಅಧಿಕಾರಕ್ಕೆ ಬರಬೇಕೆಂದರೆ ಪಕ್ಷದ ರಾಜ್ಯಾಧ್ಯಕ್ಷವನ್ನು ಯಡಿಯೂರಪ್ಪನವರಿಗೇ ನೀಡಬೇಕೆಂದು ತಮ್ಮ ವಾದ ಮುಂದಿಟ್ಟಿದ್ದಾರೆ. ಇದರಲ್ಲಿ ಯಡಿಯೂರಪ್ಪನವರ ಅನಿವಾರ್ಯತೆ ಪ್ರಸ್ತಾಪಿಸಲಾಗಿದೆ.

ಕೆಜೆಪಿ  ಕಟ್ಟಿದ್ದು, ಅವರ ಮೇಲಿನ ಆರೋಪಗಳಿರುವುದು ಸೇರಿದಂತೆ ಬಿಹಾರದ ಫಲಿತಾಂಶದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಒಟ್ಟಾರೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಳಾಸ ಮಾಡಿರುವ ಪಿಟಿಶನ್ ಬಿಜೆಪಿ ಪಾಳಯದಲ್ಲೂ ಒಂದು ರೀತಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ 1900ಕ್ಕೂ ಹೆಚ್ಚು ಮಂದಿ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು  ಎಂದು ತಮ್ಮ ಸಹಿ ಹಾಕಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com